30.3.07

ವೈಶಾಖದ ಕನವರಿಕೆ

ನೆತ್ತಿ ಸುಡುವ ಬಿಸಿಲು
ಕಣ್ಣಮುಂದೆ ಕತ್ತಲು
ಬೆವರೇ ತುಂಬಿದ
ಒದ್ದೆ ಅಂಟಂಟು ಮೈ

ತಣ್ಣನೆ ಗಾಳಿಯ
ಸಿಂಚನಕ್ಕೆ ಕಾತರ
ಅದಿಲ್ಲದಿದ್ದರೂ
ಗೆಳತಿ......
ಕನಿಷ್ಠ ತೋರು
ನಿನ್ನ
ಮುಗುಳುನಗೆಯ ಪಂಜರ!

7 comments:

Shiv said...

ವೇಣು,

ಮುಗುಳುನಗೆ ಅರ್ಥವಾಯ್ತು..
ಈ ಮುಗುಳುನಗೆ ಪಂಜರವೆಂದರೇನು?
ಸ್ಪಲ್ಪೇಸ್ಪಲ್ಪ ಮುಗುಳುನಗೆಯೇ?

ನೀವು ನಿಮ್ಮ ಕವನದ ಸಾಲುಗಳ ಜೊತೆ ಹಾಕೋ ಚಿತ್ರ ಚೆನ್ನಾಗಿರುತ್ತೆ..ನೀವೇ ಅವುಗಳನ್ನು ರಚಿಸೋದಾ?

VENU VINOD said...

ಶಿವ,
ಗೆಳತಿಯ ಮುಗುಳುನಗೆ ಪಂಜರೊಳಗೆ ಬಂಧಿಯಾಗೋದು...ಅದನ್ನೆಲ್ಲಾ ನಿಮಗೆ ನಾನ್ಯಾಕೆ ವಿವರಿಸೋದು:)
ಚಿತ್ರಬರೆಯೋ ಆಸಕ್ತಿ ಕೂಡಾ ಇದೆ, ಕೆಲವು ಕವನಗಳಿಗೆ ನಾನೇ ಚಿತ್ರ ಬರೀತೀನಿ. ಕೆಲವಕ್ಕೆ ಫೋಟೋ. ಈ ಚಿತ್ರ ನಂದೇ. ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದ

ರಾಜೇಶ್ ನಾಯ್ಕ said...

ವೇಣು,

ಗೆಳತಿಯ ಮುಗುಳ್ನಗೆಯ ಪಂಜರ ಆ ತಣ್ಣನೆ ಗಾಳಿಯ ಸಿಂಚನಕ್ಕಿಂತಲೂ ಒಳಿತು!
ಬರೆದಿರುವುದು ಚಿಕ್ಕದಾಗಿ ಚೆನ್ನಾಗಿದೆ.

ಸಿಂಧು sindhu said...

ನಿನ್ನ ಓರೆನೋಟಕ್ಕೇ ಹಣ್ಣಾಗಿ ಹೋಗಿದ್ದೇನೆ, ನೇರವಾಗಿ ನೋಡಬೇಡ ಎದೆ ಬಡಿತ ನಿಂತೇ ಹೋಗುತ್ತದೆ ಸಖೀ ..
ಎಂಬರ್ಥದ ಗಝಲ್ ಒಂದರ ಭಾವ ನೆನಪಾಯಿತು ಓದಿದಾಗ. ಚಂದದ ಕವಿತೆ. ಪುಟ್ಟ ಮೊಳಕೆಯ ಹಾಗೆ..

Sushrutha Dodderi said...

ಹೌದೌದು, ಗೆಳತಿಯ ಮುಗುಳ್ನಗೆ ಎಂಥಾ ಬಿರುಬಿಸಿಲಿನಲ್ಲೂ ತಂಪು ಸೂಸಬಲ್ಲದು... ಸುಂದರ ಕವಿತೆ.

Parisarapremi said...

ಆಹಾ ಬಿಸಿಲ ಝಳವನ್ನೆಲ್ಲಾ ಮರೆಯಾಗಿಸಿತು.... :-)

Samyama said...

hi

Related Posts Plugin for WordPress, Blogger...