3.2.08

ಚಕೋರ ಹಕ್ಕಿಯೂ, ಅವಳ ಮೌನವೂ

ಮನೆಮಾಡಿನ ಮೂಲೆ
ಹೆಂಚಿನ ಮೇಲೆ
ಚಂದ್ರನಿಲ್ಲದ ರಾತ್ರಿ ಕುಳಿತ
ಚಕೋರ ಹಕ್ಕಿ
ಬೇಸರದಿಂದ ರೋದಿಸುವಾಗ
ಕಡುನೀಲಿ ಕತ್ತಲಿನಲ್ಲೊಂದು
ನಕ್ಷತ್ರ ಮಿನುಗಿ
ಬೆಳಕುಕೊಟ್ಟಿತು!



**************

ಅವಳ ಸಿಡುಕು ಮುಖ
ಮಡುಗಟ್ಟಿದ ಮೌನದ ಹಿಂದಿನ
ಅರ್ಥ ಹುಡುಕಲು
ಹೋದಾಗ
ಹುಟ್ಟಿಕೊಂಡ ಸಹಸ್ರಾರು
ಅರ್ಥಗಳು
ಬ್ರಹ್ಮರಕ್ಕಸರಂತೆ
ಆಕಳಿಸಿಬಿಟ್ಟವು
ಕಂಗೆಡಿಸಿಬಿಟ್ಟವು

5 comments:

ತೇಜಸ್ವಿನಿ ಹೆಗಡೆ said...

ಚಕೋರ ಹಕ್ಕಿ ಇಷ್ಟವಾಯಿತು,, ಅವಳ ಮೌನಕ್ಕಿಂತ ಮುಖವೇ ಎದ್ದುಕಂಡು, ಭಯವಾಯಿತು :)

Sushrutha Dodderi said...

ಚೆನ್ನಾಗಿದೆ..

ಶ್ರೀನಿಧಿ.ಡಿ.ಎಸ್ said...

veNu saar, kavanagaLige chitra hakodna nanu virodhisuttene!:)avu itarara alochanegaLige tade haakuttave..

VENU VINOD said...

ತೇಜಸ್ವಿನಿ ಹೆಗಡೆ,
ಮುಖ ಕಂಡು ಹೆದರಿದ್ದಕ್ಕೆ ವಿಷಾದಿಸುತ್ತೇನೆ ;)

ಸುಶ್ರುತ,
ವಂದನೆಗಳು


ಶ್ರೀನಿಧಿ,
ಹೌದಲ್ಲ...ನಾನು ಆ ದೃಷ್ಟಿಯಿಂದ ನೋಡಿರಲಿಲ್ಲ. ನಿಮ್ಮ ಸಲಹೆಗೆ ವಂದನೆ.

PRAVINA KUMAR.S said...

sir super

Related Posts Plugin for WordPress, Blogger...