14.2.09

ಗುಲಾಬಿ ನೆನಪುಗಳು


ನಿನ್ನೆ ಸುರಿದ ಮಳೆಗೆ
ಭೋರ್ಗರೆದಿದೆ ನದಿ
ತೊಟ್ಟಿಕ್ಕಿದೆ ಜಲ, ಮರದ
ಎಲೆಗಳಲ್ಲಿ....

.......ಅವಳ ಕಣ್ಣಲ್ಲಿ ಮಾತ್ರ ಪಸೆಯಿಲ್ಲ


*******

ದೂರದಲ್ಲೆಲ್ಲೋ ರೈತ ಮಾರಾಟಕ್ಕೆ
ಬೆಳೆದು ಇಂದು ಮಾರುಕಟ್ಟೆ
ಸೇರಿದ ಗುಲಾಬಿಗೂ
ಚೆಲುವೆಯ ಮುಡಿಯೇರುವ ನೆನಪಿಂದ
ರೋಮಾನ್ಸಿನ ಅಮಲು!
********
ರಾತ್ರಿಯಿಡೀ ಆಗಸದಲ್ಲಿ ಕಣ್ಣು
ನೆಟ್ಟಾಗ ಸಿಡಿದ ಉಲ್ಕೆಗಳು ಸಾವಿರ
ನನ್ನವಳ ಕಣ್ಣಲ್ಲಿ ಮಾತ್ರ ನಗುತ್ತಿದ್ದಾನೆ
ಪೋಲಿ ಹುಣ್ಣಿಮೆ ಚಂದಿರ

********
ಏನೂ ಅಲ್ಲದ ಅವನಿಗೆ,
ಏನೂ ಇಲ್ಲದ ಅವಳಿಗೆ
ನಡುವೆ
ಅದೇನೋ ಒಲವಲ್ಲಿ
ತುಂಬಲಿದೆ ಭವಿಷ್ಯದ ಜೋಳಿಗೆ

8 comments:

ಹರೀಶ ಮಾಂಬಾಡಿ said...

ವಾಹ್..! ಚೆಂದದ ಕವನ...

sunaath said...

ಇದೀಗ Valentine day ಕವನ!

ತೇಜಸ್ವಿನಿ ಹೆಗಡೆ said...

:) :)
ದೂರದಲ್ಲೆಲ್ಲೋ ರೈತ ಮಾರಾಟಕ್ಕೆ
ಬೆಳೆದು ಇಂದು ಮಾರುಕಟ್ಟೆ
ಸೇರಿದ ಗುಲಾಬಿಗೂ
ಚೆಲುವೆಯ ಮುಡಿಯೇರುವ ನೆನಪಿಂದ
ರೋಮಾನ್ಸಿನ ಅಮಲು!

Very nice!

Mediapepper said...

ತೇಜಸ್ವಿನಿಯವರು ಹೇಳಿದ ಸಾಲುಗಳೇ ನನಗೂ ಖುಷಿಕೊಟ್ಟವು

Shiv said...

ವೇಣು,

ವ್ಯಾಲಿಂಟಿನ್ ಶುಭಾಶಯಗಳು !
ಎನೂ ಅಲ್ಲದ, ಎನೂ ಇಲ್ಲದದವರಿಗೆ ಹೇಗೆ ಒಲವು :)

http://santasajoy-vasudeva.blogspot.com said...

tunbaa sundara haagu samayochita.

ಚಿತ್ರಾ ಸಂತೋಷ್ said...

ಇದು ಪ್ರೇಮಿಗಳ ದಿನದ ವಿಶೇಷವೇ?! ಚೆನ್ನಾಗಿದೆ..ಆದರೆ ನಾನು ಓದಿದ್ದು ನಾಲ್ಕು ದಿನಗಳ ನಂತರ!
-ಚಿತ್ರಾ

VENU VINOD said...

pratikriyesida ellarigu vandane :)

Related Posts Plugin for WordPress, Blogger...