8.5.10

ಪ್ರಯಾಣ


ತಲೆ ಚಿಟ್ಟು ಹಿಡಿಸುವ
ಶಬ್ದಕೂಪದಲ್ಲಿ
ನಿನ್ನ ಮನೋತಲ್ಲಣದ
ಹಿಂದಿನ ಮೌನ ಅರಸಿ
ಬಂದಿದ್ದೇನೆ
ಅರ್ಥವಿಲ್ಲದ ಪದಗಳು
ಅಂಕೆಯಿಲ್ಲದ ಶಬ್ದಗಳ
ನಡುವೆ ಬರೀ
ಪ್ರಯಾಸದ ಪಯಣ

ನಿನ್ನ ಕಣ್ಣಕೊನೆಯಿಂದ
ಬಿದ್ದ ಬಿಂದುಗಳನ್ನು
ಅಕ್ಷರಸಾಗರದಿಂದ
ಆಯ್ದುಕೊಳ್ಳಬೇಕಿದೆ
ಅಕ್ಷರ ಸಂತೆಯಲ್ಲಿ
ನಿನ್ನ ಕಣ್ಣಹನಿಗಳು
ನನಗೆ ಅಮೂಲ್ಯ

ನಿನ್ನ ಅಂದಿನ ಮುಗುಳ್ನಗು
ಬೇಕಿತ್ತೇ...
ಗೊತ್ತಿಲ್ಲ
ಆದರೂ ಅದೊಂದು
ಕಾಡುವ ಒಗಟು
ಬದುಕಿನ ಜಂಗುಳಿಯಲ್ಲಿ
ಆ ಒಗಟು ನನ್ನನ್ನು
ಮುನ್ನಡೆಸುತ್ತದೆ

ಚಿತ್ರ: www.dreamstime.com

5 comments:

PARAANJAPE K.N. said...

ಚೆನ್ನಾಗಿದೆ

sunaath said...

Beautiful poem!

Subrahmanya said...

ಮುಗುಳುನಗೆ ನಿಮಗೆ ಉತ್ತೇಜನ ನೀಡುವುದಾದರೆ, ಅದು ನಿಮ್ಮ ಕಣ್ಮುಂದೆ ಬರುತ್ತಲೇ ಇರಲಿ. ಒಳ್ಳೆ ಕವನ.

shivu.k said...

ಸರ್,

ಕವನ ತುಂಬಾ ಚೆನ್ನಾಗಿದೆ...ಖುಷಿಯಾಯ್ತು.

ಸಿಂಧು sindhu said...

ಪ್ರಿಯ ವೇಣು,

ಕವಿತೆ ತುಂಬ ಇಷ್ಟ ಆಯಿತು.

ಒಗಟೊಂದು ಜೀವನದ maze ನಲ್ಲಿ ದಾರಿಸೂಚಿಯಾಗುವ ಪರಿ ಎಷ್ಟು ಪರಿಚಿತ ಅಂದ್ರೆ, ಅದು ನನಗೆ ಮಾತ್ರ ಗೊತ್ತು. :) ಬಹುಶಃ ಅದಕ್ಕೆ ಉತ್ತರ ಸಿಗದೆ ಅಪರಿಪೂರ್ಣವಾಗಿ ಉಳಿಯುವುದರಲ್ಲೆ ನಮ್ಮ ನೆಮ್ಮದಿಯ ಸೆಲೆ.

Thanks a lot for this beautiful poem.

ಪ್ರೀತಿಯಿಂದ
ಸಿಂಧು

Related Posts Plugin for WordPress, Blogger...