15.7.10

ನಾಲ್ಕು ಹನಿ

ನೀ ನೋವಿನ ನಿಮಿಷಗಳನ್ನೇ
ಕರುಣಿಸು
ನಾನು ಅದರಲ್ಲಿ
ಆನಂದದ ಕ್ಷಣಗಳ
ಆಯಬಲ್ಲೆ...

ಮಳೆ ಸುಮ್ಮನೆ
ಹರಿದು ತನ್ನ
ಪಾಡಿಗೆ ಚರಂಡಿ ಸೇರಿತು
ನನ್ನ ಒಲವಿನ ಮಾತು
ಬರಿದೇ ಮಾತಾಗಿ
ಉಳಿಯಿತು

ನೀ ಬೇಗನೆ ಕಣ್ಮುಚ್ಚಿ
ಮಲಗಿದರೆ
ನನ್ನ ಮನದ ನಕ್ಷತ್ರಗಳಿಗಿನ್ನು
ಕೆಲಸವಿಲ್ಲ!

ನೀ ದೂರವಾದ
ಬಳಿಕ ಎದೆಯ
ಭಿತ್ತಿಯಲ್ಲಿ ನೆನಪುಗಳು
ಮಾಡಿಟ್ಟ ಗೀರುಗಳು
ಒಣಗಲು ಹೊರಟಿದ್ದವು
ಅಷ್ಟರಲ್ಲಿ ನನ್ನಲ್ಲಿ
ಒಲವು ಮೂಡಿತು!

13 comments:

Dileep Hegde said...

ಅದ್ಭುತವಾಗಿವೆ ಹನಿಗಳು..

Dr.D.T.Krishna Murthy. said...

ಸುಂದರ ಕವನ.ಇಷ್ಟವಾಯ್ತು.ನನ್ನ ಬ್ಲಾಗಿಗೂ ಬನ್ನಿ.ನಮಸ್ಕಾರ.

Anonymous said...

ನಾಲ್ಕೂ ಸಕ್ಕತ್ತಾಗಿವೆ, ಇಷ್ಟವಾದ್ವು!

-ರಂಜಿತ್

shivu.k said...

ತುಂಬಾ ಚೆನ್ನಾಗಿವೆ. ಹನಿ ಹನಿಗಳು.

ಸೀತಾರಾಮ. ಕೆ. / SITARAM.K said...

ಚೆಂದದ ಹನಿಗಳು !! ಇನ್ನೂ ಬರಲಿ.

ಭಾಶೇ said...

WOW!

Subrahmanya said...

yes..yes. ತುಂಬ ಚೆನ್ನಾಗಿದೆ.

Ittigecement said...

ನೀ ಬೇಗನೆ ಕಣ್ಮುಚ್ಚಿ
ಮಲಗಿದರೆ
ನನ್ನ ಮನದ ನಕ್ಷತ್ರಗಳಿಗಿನ್ನು
ಕೆಲಸವಿಲ್ಲ!

soooper saalugalu.... !!

abhinandanegalu....

sunaath said...

ವೇಣು,
ತುಂಬ ಅರ್ಥಪೂರ್ಣ ಹನಿಗಳ ಕವನ.

shravana said...

ನಾನೊಂದು comment ಹಾಕಿದ್ನಪ್ಪಾ.. ಎಲ್ಲ್ಹೊಯ್ತೊ.. !
ಇರಲಿ.. ನುಡಿಗಳು ತುಂಬಾ ಚೆನ್ನಾಗಿವೆ, Sir.

ಮನಸಿನಮನೆಯವನು said...

ಸೊಗಸಾದ ಸಾಲುಗಳು..

ಸಿಬಂತಿ ಪದ್ಮನಾಭ Sibanthi Padmanabha said...

ನಿಮ್ಮ ಆಶಾವಾದ ಇಷ್ಟ ಆಯ್ತು. ಚೆನ್ನಾಗಿ ಬರೆದಿದ್ದೀರಿ.

ಮಿಥುನ ಕೊಡೆತ್ತೂರು said...

ಚೆನ್ನಾಗಿವೆ

Related Posts Plugin for WordPress, Blogger...