ವಾರದ ಹಿಂದೆ ರಾತ್ರಿಯೆಲ್ಲಾ ಕುಳಿತು 'ಅಮೃತಧಾರೆ' ನೋಡಿದೆ. ಓ ಈಗ ನೋಡೋದಾ! ಅಂತ ಮೂದಲಿಸಬೇಡಿ. ನೋಡ್ಬೇಕು ಅಂತ ಅಂದ್ಕೊಂಡಿದ್ರೂ ಆಗಿರಲಿಲ್ಲ.
ಹಾಗೇ ಸಿಡಿ ಲೈಬ್ರೆರಿಯಲ್ಲಿ ಸುಮ್ನೇ ಕಣ್ಣಾಡಿಸ್ತಿದ್ದೆ, ಅಮೃತಧಾರೆ ಸಿಕ್ಕೇಬಿಟ್ಲು. ಮೊದಲ ಅರ್ಧ ಭಾಗ ನೋಡಿ ಸಾಕಷ್ಟು ನಕ್ಕೆ. ತಡರಾತ್ರಿ ಸುಮಾರು ೧.೩೦ರ ಹೊತ್ತಿಗೆ ಸಿನಿಮಾ ಮುಗಿಯುವಾಗ ಕಣ್ಣಂಚಿನಲ್ಲಿ ನೀರು ಆಯಾಚಿತವಾಗಿ ಜಾರಿ ಬಂತು. ಬದುಕಿಗೆ ಹತ್ತಿರವಾದ ಕಥೆ ಓದಿದಾಗ, ಸಿನಿಮಾ, ನಾಟಕ ನೋಡಿದಾಗ ನನ್ನ ಹಾಗೆ ನಿಮ್ಮಲ್ಲೂ ಅನೇಕರು ಆ ಕಥೆಯೊಳಗೆ ಕಳೆದುಹೋಗಿರಬಹುದು. ಹಿಂದೊಮ್ಮೆ 'ಅಮೃತವರ್ಷಿಣಿ' ನೋಡಿದಾಗಲೂ ನನಗೆ ಇದೇ ಅನುಭವ ಆಗಿತ್ತು. ಅಮೃತಧಾರೆ, ಅಮೃತ ವರ್ಷಿಣಿ ಎರಡೂ ಸಿನಿಮಾಗಳಲ್ಲೂ 'ಅಮೃತ' ಸಮಾನ ಹೆಣ್ಣು. ಎರಡರಲ್ಲೂ ಹೆಣ್ಣಿಗೇ ಮಹತ್ವದ ಪಾತ್ರ. ವರ್ಷಿಣಿಯಲ್ಲಿ ಸುಹಾಸಿನಿ, ಧಾರೆಯಲ್ಲಿ ರಮ್ಯ ಇಬ್ಬರೂ ರಭಸದಿಂದಲೇ ಹರಿಯುತ್ತಾರೆ!
ಅನೇಕ ಬಾರಿ ಸಿನಿಮಾ ನೋಡುವಾಗ, ಕಾದಂಬರಿ ಓದುವಾಗ ಟೈಂವೇಸ್ಟ್ ಅಂತ ಕೆಲವರು ತಿಳಿದುಕೊಳ್ತಾರೆ. ಆದ್ರೆ ಯಾಂತ್ರಿಕವಾಗಿ ಉರುಳುತ್ತಾ ಸಾಗುವ ಬದುಕೆಂಬ ಬಂಡಿಗೆ ಗ್ರೀಸ್, ಆಯಿಲ್ ಎಂದರೆ ಭಾವನೆಗಳು. ಈ ಭಾವನೆಗಳಿಗೆ ಒಂದು ರೂಪ ಕೊಡೋದಿಕ್ಕೆ ಸಿನಿಮಾ, ಪುಸ್ತಕ, ಬರವಣಿಗೆ, ಚಿತ್ರ ಬರೆಯೋದು ಇವೆಲ್ಲಾ ಬೇಕೇ ಬೇಕು. ಮನಃಶಾಸ್ತ್ರಜ್ಙರೂ ಇದನ್ನೇ ಹೇಳೋದು. ಎಷ್ಟೋ ಕವಿಗಳು, ಸಾಹಿತಿಗಳೂ ಇದನ್ನು ಒಪ್ಪುತ್ತಾರೆ.
ಸಿನಿಮಾ ನೋಡಿ ಭಾವುಕನಾಗೋದ್ರಲ್ಲೂ ಒಂಥರಾ ಆಪ್ತತೆ ನಂಗಂತೂ ಸಿಗುತ್ತೆ. ಸಿನಿಮಾ ಕಾಲ್ಪನಿಕ ಇರಬಹುದು, ಆದ್ರೂ ಸಮಾಜದ ಪ್ರತಿಬಿಂಬ ಅದು ಆಗಿರುತ್ತದೆ.
6 comments:
Hi Venu,
tumba chennagi baredhidhira. I dont know if u remember me. I was ur senior in MCJ. Sumana Ch...
What are u doing now...where are u...do mail me
Hi Venu...Hegidhira? Hows life? Been busy and couldnt even blog much...
Anthu nodbeku nodbeku antha AmruthaDhare node bitri...nAnu innu nodbeku nodbeku anthane idini :P
soni,
howdu nimma blog echege astagi odta irlilla. nanu swalpa busy. amrutadhare cd sikre nodi chennagide
ವೇಣು,
ಎಷ್ಟು ನಿಜ ಅಲ್ವಾ..ಬದುಕಿಗೆ ಒಂದಿಷ್ಟು ಭಾವುಕತೆ ಬೇಕೇ ಬೇಕು..ಇಲ್ಲಾ ಅಂದ್ರೆ ಜೀವನ ಎಷ್ಟು ಯಾಂತ್ರಿಕ-ನೀರಸ ಆಗಿಬಿಡ್ತೇ..
ಓ ಅಮೃತಧಾರೆ ನೋಡಿಬಿಟ್ರಾ ಕೊನೆಗೂ...ನಾನು ಯಾವಾಗ ನೋಡ್ತೀನೋ ಗೊತ್ತಿಲ್ಲಾ..ನನ್ನ ಅಮೃತಧಾರೆನಾ !
chennagi barediddeeri veNu...
naaanoo obba bhaava jeevi,
baraha hiDisitu.
khaMDita oppOMthA maatugaLu..badukeMba baMDige BAvanegaLe greesu,aayillu annOdu nija..sinimaa nODi bhaavukanaagodAdre nim jote naanu ideeni biDi! :)
Post a Comment