24.7.08

ಅನುಬಂಧ

ಅಣುರೇಣು
ತಿಣುಕಾಡುತಲಿದ್ದರು
ಬ್ರಹ್ಮಾಂಡ ಬಿದ್ದು ಹೋದರೂ ಸರಿ
ನಮಗವರು ಬೇಕು
ನಮ್ಮ ಜತೆ ಬರುವವರು ಬನ್ನಿ
ಹೋದವರು ಹೋಗಲಿ ಬಿಡಿ

ಶರಧಿಯಾಚೆಗಿನ ಹೊಸ
ಗೆಳೆಯರ ಅನುಬಂಧ
ಚಿಪ್ಪುಗಟ್ಟುತ್ತಿದೆ ಈಗತಾನೇ
ಊರೊಳಗಿನ ದೀಪಗಳೂ
ಬೆಳಗಲಿವೆ ನೋಡಿ!

ನೀವು ನಿನ್ನೆಯ ಮಿತ್ರರು
ನಿನ್ನೆ ನಿನ್ನೆಗೆ ಇಂದು ಇಂದಿಗೆ
ನಿಮ್ಮ ಸ್ನೇಹದ ಬಲ
ಅಳೆದಾಗಿದೆ ಬಿಡಿ
ಸದ್ಯಕ್ಕೆ ನಿಮ್ಮದು
ಮುಗಿದ ಅಧ್ಯಾಯ
ಹೊಸ ಅನುಬಂಧಕ್ಕೆ ಮುನ್ನುಡಿ

4 comments:

ಹಳ್ಳಿಕನ್ನಡ said...

ಪದ್ಯ ತುಂಬಾ ಚನ್ನಾಗಿದೆ. ಸಮಯೋಚಿತ.
ವಿಶ್ವಾಸ ಮತ ಯಾಚನೆ ಸಂದರ್ಭದಲ್ಲಿ ರಾಹುಲ್ ಗಾಂಧಿ ಮಾತನಾಡುತ್ತಾ 'ಅವ್ಯಕ್ತ ಭಯದಿಂದ ನಾವು ಬಳಲಬೇಕಿಲ್ಲ'ಎಂದರು. ಎಷ್ಟು ಪ್ರಬುದ್ಧ ಮಾತು ಅದು. ವ್ಯಕ್ತಿ ಅಥವಾ ದೇಶ ಪ್ರಗತಿಯ ದಾರಿಯಲ್ಲಿರುವಾಗ ಈ 'ಅವ್ಯಕ್ತ ಭಯ' ಕಾಡುವುದು ಸಹಜ. ಭವಿಷ್ಯದಲ್ಲಿನ ಭಯ ಬಿಟ್ಟು ವರ್ತಮಾನದ ಸತ್ಯವನ್ನು ಗ್ರಹಿಸಬೇಕು. ರಾಹುಲನನ್ನು ಭವಿಷ್ಯದ ಪ್ರಧಾನಿ ಎಂದು ಬಿಂಬಿಸುತ್ತಿರುವಾಗ ಸಹಜವಾಗಿಯೇ ಕೆಲವರಲ್ಲಿ ಆತಂಕವಿರಬಹುದು. ಆದರೆ ಪರರ ನೋವು ಸಮಸ್ಯೆ ತಿಳಿದುಕೊಳ್ಳುವಲ್ಲಿ ಇರುವ ಆ ವ್ಯಕ್ತಿಯ ಆಸಕ್ತಿ, ಶ್ರದ್ಧೆಯನ್ನು ಹುಸಿ ಎನ್ನುವಂತಿಲ್ಲ.
ಎಡ ಪಕ್ಷಗಳ ಬದ್ಧತೆಯನ್ನೂ ಕಡೆಗಣಿಸುವಂತಿಲ್ಲ ಮತ್ತೆ.
- ಮಂಜುನಾಥ ಸ್ವಾಮಿ

ಹರೀಶ್ ಕೇರ said...

ಎಡವೂ ಬೇಡ
ಬಲವೂ ಬೇಡ
ಹೊಸ ಗೆಳೆಯರ ಜತೆ ನಡಿ

ಓಕೆನಾ ?
- ಹರೀಶ್ ಕೇರ

ಸುಧೇಶ್ ಶೆಟ್ಟಿ said...

ಆಳವಾದ ಭಾವನೆಗಳಿ೦ದ ಕೂಡಿದ ಕವನ. ತು೦ಬಾ ಇಷ್ಟ ಆಯ್ತು.

-ಸುಧೇಶ್

VENU VINOD said...

ಸ್ವಾಮಿ,
ವೀವಂದಿದ್ದು ನಿಜ, ರಾಹುಲ್ ಇತರ ಕಾಂಗ್ರೆಸಿಗರ ಹಾಗೆ ಕಾಣೋದಿಲ್ಲ.

ಹರೀಶ್,
ನಂಗೆ ಓಕೆ, ಮನಮೋಹನ್ ಸಿಂಗ್‌ಗೆ ಗೊತ್ತಿಲ್ಲ ;)

ಸುಧೇಶ್,
ವಂದನೆ, ಬರ್‍ತಾ ಇರಿ

Related Posts Plugin for WordPress, Blogger...