8.8.08

ಭಾವಚಿತ್ರದ ನೋವು ನಲಿವು


ಹಳೆಮನೆಯ

ಮೂಲೆಯಲ್ಲಿ

ಕಪ್ಪಾಗುತ್ತಿರುವ

ಹಿರಿಯಜ್ಜನ
ಭಾವಚಿತ್ರಕ್ಕೆ
ಈಗ ಆಸರೆ
ತುಕ್ಕು ಹಿಡಿದ
ಮೊಳೆ ಮಾತ್ರ!


**********
ಸುಂದರ ಚೌಕಟ್ಟಿನ
ಭಾವಚಿತ್ರದಲ್ಲಿರುವ
ಅಜ್ಜನ ಕಂಗಳಲ್ಲಿ
ಸಾವಿರಾರು ಕಥೆಗಳು....
ಆದರೆ
ಕೇಳಿಸಿಕೊಳ್ಳಲು ಕಿವಿಗಳಿಲ್ಲ!

********

ಕಡುಬೇಸಗೆಯಲ್ಲಿ
ದಾರಿತಪ್ಪಿ
ಮನೆಯೊಳಗೆ ಬಂದ
ದುಂಬಿಯೊಂದು
ಚೌಕಟ್ಟಿನ ಚಿತ್ರದೊಳಗಿರುವ
ಗುಲಾಬಿ ಸುತ್ತ
ಸುತ್ತುತ್ತಿದೆ...
ಚಿತ್ರಕಾರನ
ಬದುಕೀಗ ಪಾವನ!

*******
ಭಾವಚಿತ್ರದಲ್ಲಿ
ಬಂಧಿಯಾದ
ಹದ್ದನ್ನು ನೋಡಿ
ಗಡಿಯಾರಗೂಡಿನ
ಗುಬ್ಬಕ್ಕನಿಗೆ
ದಿನವೂ ದು:ಖ

10 comments:

ಸಿಂಧು sindhu said...

ಪ್ರೀತಿಯ ವೇಣು,

ಕವಿತೆ ತುಂಬ ಹಿಡಿಸಿತು. ಭಾವಚಿತ್ರವನ್ನ ಹೊಸ ಹೊಸ ಆಂಗಲ್ ಗಳಲ್ಲಿ ತೋರಿಸುತ್ತಿರುವುದಕ್ಕೆ ಧನ್ಯವಾದಗಳು.

ಪ್ರೀತಿಯಿಂದ
ಸಿಂಧು

Tina said...

ವೇಣು,
ಬಹಳ ದಿನಗಳ ನಂತರ ಇಲ್ಲಿ ಬಂದೆ.
ಕವಿತೆ ಸುಪರ್ಬ್!!
ಕೆಸರುಗದ್ದೆ ಆಟಗಳ ಚಿತ್ರಗಳು, ನಾನು ಯಾವದೊ ಕಾಲದಲ್ಲಿ ಕಂಡು ಉಂಡಿದ್ದ ಕೆಲವು ತಿಂಡಿಗಳನ್ನ ಪುನಹ ತೋರಿದ ನಿಮಗೆ ಸಾವಿರ ಧನ್ಯವಾದ.
-ಟೀನಾ.

chetana said...

ನಮಸ್ತೇ,
ಬರುವ ಸೋಮವಾರ ಹದಿನೆಂಟನೆ ತಾರೀಖು ಸಂಜೆ ಆರು ಗಂಟೆಗೆ, ಸೆಂಟ್ರಲ್ ಕಾಲೇಜಿನ ಸೆನೆಟ್ ಹಾಲ್ ನಲ್ಲಿ ನನ್ನ ಪುಸ್ತಕ ‘ಭಾಮಿನಿ ಷಟ್ಪದಿ’ ಬಿಡುಗಡೆಯಾಗಲಿದೆ.
ಅವತ್ತು ಪ್ರೊ. ವಿವೇಕ್ ರೈ, ಜಿ.ಪಿ.ಬಸವ ರಾಜು ಅವರು ವೇದಿಕೆಯಲ್ಲಿರುತ್ತಾರೆ. ಗೆಳತಿ, ಬರಹಗಾರ್ತಿ ಟೀನಾ ಪುಸ್ತಕದ ಬಗ್ಗೆ ಮಾತನಾಡುತ್ತಾಳೆ. ಎಲ್ಲಕ್ಕಿಂತ ಮುಖ್ಯವಾಗಿ ಅಲ್ಲಿ ಅವತ್ತು ನೀವು ಇರುತ್ತೀರಿ.
‘ಸೋಮವಾರ’ ಇತ್ಯಾದಿ ಯಾವ ನೆವವನ್ನೂ ಹೇಳದೆ ಅಂದಿನ ಕಾರ್ಯಕ್ರಮಕ್ಕೆ ನೀವು ಬಂದರೆ ನನಗೆ ಬಹಳ ಬಹಳ ಖುಷಿಯಾಗುತ್ತದೆ.
ಖಂಡಿತ ಬರಲೇಬೇಕು.

ನಿಮಗಾಗಿ ಕಾದಿರುತ್ತೇನೆ.

ಪ್ರೀತಿಯಿಂದ,
ಚೇತನಾ ತೀರ್ಥಹಳ್ಳಿ

ತೇಜಸ್ವಿನಿ ಹೆಗಡೆ said...

ಎಲ್ಲಾ ಚಿತ್ರಣಗಳೂ ಮನಸಿನ ಚೌಕಟ್ಟಿನೊಳಗೆ ಅಚ್ಚಾಗುವಂತಿವೆ!

Karnataka Best said...

kavitegalu ondakitnt ondu chennagide

sunaath said...

ಕವನ ಹಾಗೂ ಚಿತ್ರ ಎರಡೂ ಸೊಗಸಾಗಿವೆ.

Susheel Sandeep said...

"ಹಿರಿಯಜ್ಜನ
ಭಾವಚಿತ್ರಕ್ಕೆ
ಈಗ ಆಸರೆ
ತುಕ್ಕು ಹಿಡಿದ
ಮೊಳೆ ಮಾತ್ರ!"

Whoaaa!!! ಭಯಂಕರ ಯೋಚನೆ! ಸೂಪರ್....
ಒಂದಕ್ಕಿಂತ ಒಂದು ಇಷ್ಟವಾದ್ವು...

ಸುಧನ್ವಾ ದೇರಾಜೆ. said...

ಕೊನೆಯ ಹನಿ ಬಹಳ ಚೆನ್ನಾಗಿದೆ ವೇಣು.

VENU VINOD said...

ನನ್ನ ಪುಟಕ್ಕೆ ಆಗಮಿಸಿ ಪ್ರತಿಕ್ರಿಯಿಸಿ ಪ್ರೋತ್ಸಾಹಿಸಿದ ಸಹೃದಯಿ ಸಿಂಧು, ಟಿನಾ, ಚೇತನಾ, ತೇಜಸ್ವಿನಿ, ಪ್ರವೀಣ್, ಸುನಾಥ್, ಸುಶೀಲ್, ಸುಧನ್ವ ಎಲ್ಲರಿಗೂ ವಂದನೆಗಳು.

Manjunatha Kollegala said...

ಕಡುಬೇಸಗೆಯಲ್ಲಿ
ದಾರಿತಪ್ಪಿ
ಮನೆಯೊಳಗೆ ಬಂದ
ದುಂಬಿಯೊಂದು
ಚೌಕಟ್ಟಿನ ಚಿತ್ರದೊಳಗಿರುವ
ಗುಲಾಬಿ ಸುತ್ತ
ಸುತ್ತುತ್ತಿದೆ...
ಚಿತ್ರಕಾರನ
ಬದುಕೀಗ ಪಾವನ!


ಬಹಳ ಚೆನ್ನಾಗಿದೆ

Related Posts Plugin for WordPress, Blogger...