
ತನ್ನ ಪಾಡಿಗೆ ತನ್ನನ್ನೇ
ಸುಟ್ಟುಕೊಂಡು ನನಗೆ
ಸಾಂತ್ವನ ಹೇಳುತ್ತದೆ
ಎಂತಹ
ತ್ಯಾಗಮಯಿ
ನನ್ನ ಸಿಗರೇಟು!
ತಣ್ಣನೆ ರಾತ್ರಿಗಳು
ಕೊರೆಯುವಾಗ
ಅವಳಿಲ್ಲದ
ಗಳಿಗೆಗಳಲ್ಲಿ ಕೊರಗುವಾಗ
ಕೆಂಪಗೆ ಕೊನರುತ್ತಾ
ಬೆಚ್ಚನೆಯ
ಅನುಭೂತಿ ನೀಡುವುದು
ನನ್ನ ಗೆಳತಿಯ ಯೋಚನಾ
ಲಹರಿಯಂತೆ
ಗೊತ್ತುಗುರಿಯಿಲ್ಲದೆ
ಎತ್ತಲೋ ಸುತ್ತುತ್ತಾ
ವಿಲೀನವಾಗುವ
ಸಿಗರೇಟಿನ ಧೂಮ ನಂಗಿಷ್ಟ!
ಶಾಸನ ವಿಧಿಸಿದ ಎಚ್ಚರಿಕೆ
ಸಿಗರೇಟು ಸೇವನೆ ಆರೋಗ್ಯಕ್ಕೆ ಹಾನಿಕರ
11 comments:
ಇದು ಅರ್ಧ ಸತ್ಯ ನೋಡಿ..:)ನನ್ನ ಮಾಹಿತಿಯ ಪ್ರಕಾರ ಸಿಗರೇಟು ತನ್ನನ್ನು ತಾನೇ ಸುಟ್ಟುಕೊಂಡು ಅದನ್ನು ಬಾಯಲ್ಲಿಟ್ಟುಕೊಂಡವನನ್ನೂ ಸುಡುತ್ತದೆ. ಹಾಗಾಗಿ ಇದೊಂತರ ಸುಡು, ಸುಟ್ಟುಕೋ ಪ್ರಕ್ರಿಯೆ ತಾನೇ? :)
ವೇಣು ಸರ್...
"ತನ್ನ ಪಾಡಿಗೆ ತನ್ನನ್ನೇ
ಸುಟ್ಟುಕೊಂಡು ನನಗೆ
ಸಾಂತ್ವನ ಹೇಳುತ್ತದೆ
ಎಂತಹ
ತ್ಯಾಗಮಯಿ
ನನ್ನ ಸಿಗರೇಟು.."
ನಾನೂ ಹೇಳ್ತೀನಿ ಇದು ಅರ್ಧ ಸತ್ಯ..ಸಿಗರೇಟು ತ್ಯಾಗ.. ಸಾಂತ್ವಾನ...ನಾ? ಅಯ್ಯೋ ದೇವ್ರೇ ನಿಷೇಧ ಆದ ಮೇಲೂ ಬಸ್ ಸ್ಟಾಂಡಿನಲ್ಲಿ ನಿಂತರೆ,ಹೊಗೆ ಬಿಡೋ ಮಂದಿ ತಲೆನೋವು ತರ್ತಾರಲ್ಲ...ಇದೆಂಥ ಸಾಂತ್ವಾನ?..(:)
-ಚಿತ್ರಾ
ತೇಜಸ್ವಿನಿಯವರೇ,
ನಾನೂ ಹಾಗೇ ಕೇಳಿದ್ದೇನೆ. ಸಿಗರೇಟು ಸೇದುವವರ ಪರವಾಗಿ(ಬೆಂಬಲವಾಗಿ ಅಲ್ಲ)ಬರೆದ ಸಾಲುಗಳಷ್ಟೇ ಇವು. ನನಗೆ ಅನುಭವ ಇಲ್ಲ :) ಹಾಗಾಗಿ ಅರ್ಧಸತ್ಯ ಇರಲೂ ಬಹುದು
ಚಿತ್ರ,
ಒಬ್ಬಂಟಿಯಾಗಿ ಸಿಗರೇಟು ಸೇದುವವನೊಬ್ಬನ ವೃತ್ತಾಂತವಿದು, ಹಾಗಾಗಿ ಅವನನ್ನು ಕ್ಷಮಿಸಿಬಿಡಿ :)
ವೇಣು,
ಕವನ ಚೆನ್ನಾಗಿದೆ. ಹಾಗೆಯೇ ತೇಜಸ್ವಿನಿ ಮತ್ತೂ ಚಿತ್ರಾ ಅವರ
advice ಸಹ ಚೆನ್ನಾಗಿದೆ.
ಸೇದುವವನಿಗೆ ಇಷ್ಟವಾಗುವ ಧೂಮ, ತನ್ನನ್ನು ಸೇದುವ ದೂಮನನ್ನೇ ಧೂಮವಾಗಿಸುತ್ತಲ್ಲ! ತಾನೇ ಅವನಿಗೆ ಅನಿಷ್ಟವಾಗುತ್ತಲ್ಲ! ಅದ್ರ ಬಗ್ಗೆಯೂ ಬರಿ.
ವೇಣು ಅವರೆ,
"ನನಗೆ ಅನುಭವ ಇಲ್ಲ "...ಎಂದಿರಲ್ಲಿ ತುಂಬಾ ಸಂತೋಷ :)
"ತನ್ನ ಪಾಡಿಗೆ ತನ್ನನ್ನೇ
ಸುಟ್ಟುಕೊಂಡು ನನಗೆ
ಸಾಂತ್ವನ ಹೇಳುತ್ತದೆ
ಎಂತಹ
ತ್ಯಾಗಮಯಿ
ನನ್ನ ಸಿಗರೇಟು.."
ಇದು ಅರ್ಧಸತ್ಯವೂ ಅಲ್ಲ.. ಪೂರ್ಣ ಸುಳ್ಳು ಅನಿಸುತ್ತದೆ..!
ನಿಮ್ಮನ್ನು ಕವಿಗೋಷ್ಟಿಗೆ ಕರೆಯಲು ಸಂಘಟಕರಿಗೆ ಹೇಳುತ್ತೇನೆ
ಸುನಾಥರೇ,
ಧನ್ಯವಾದ...
ಸುಪ್ತದೀಪ್ತಿ...
ಖಂಡಿತ ಇನ್ನೊಮ್ಮೆ ಲಹರಿ ಬಂದಾಗ ಬರೆಯುವೆ
ತೇಜಸ್ವಿನಿ,
ಇರಲೂಬಹುದು :)
ಮಿಥುನ,
ಇಲ್ಲಿಯವರೆಗೆ ಒಳ್ಳೆ ಕೆಲಸ ಮಾಡ್ತಿದ್ದೆ..ಇದೊಂದು ಕೆಲಸ ಮಾಡಿ ಪಾಪಿಯಾಗಬೇಡ ಮಾರಾಯ!
ಹಿಹಿಹಿ ಕ್ಷಮಿಸಿಬಿಟ್ಟೆ..
-ಚಿತ್ರಾ
ನಿಮ್ಮ ಸಿಗರೇಟ್ ಕವನ ಓದಿ ನೆನಪಾಯಿತು...
ನಾನು ಮಣಿಪಾಲದಲ್ಲಿದ್ದಾಗ ಉದಯವಾಣಿ ಆಫೀಸ್ ಹತ್ತಿರ ಚಹ ಕುಡಿಯಲು ಒಂದು ಕ್ಯಾಂಟೀನ್ ಗೆ ಹೋಗುತ್ತಿದ್ದೆ. ಅಲ್ಲಿ ಅಲೆಅಲೆಯಾಗಿ ಸಿಗರೇಟ್ ಹೊಗೆ ಬಿಡುವ ಪರಿಣತರನ್ನು ನೋಡುತ್ತಿದ್ದೆ. ಇದನ್ನು ನೋಡಿ ನಮ್ಮ ಹಿರಿಯ ಸಹೋದ್ಯೋಗಿ ಜೀಬಿ(ಗಣಪತಿ ಭಟ್ - ಈಗ ನಿವ್ರತ್ತರು) ಹೋಯ್ ಧೂಮಭವನಕ್ಕೆ ಹೋಗುದಾ ಅನ್ನುತ್ತಿದ್ದರು...
Truly excellent
Post a Comment