ತುಂಬುವುದಕ್ಕೆ
ಈ ಖಾಲಿಹಾಳೆಯಲ್ಲಿ
ಒಂದಿಷ್ಟು ಸಾಲುಗಳನ್ನು
ಬಿಕ್ಕಿದ್ದೇನೆ
ನೀ ದೂರವಾದಂದಿನಿಂದ
ಸಿಡಿ ಪ್ಲೇಯರು
ಶೋಕಗೀತೆಗಳನ್ನಷ್ಟೇ
ಹಾಡುತ್ತಿದೆ
ಕಡಲತೀರದಲ್ಲಿ
ಚದುರಿಕೊಂಡಿರುವ
ಖುಷಿಯ ಚಿಪ್ಪುಗಳನ್ನು
ಒಟ್ಟುಗೂಡಿಸಲಾಗದೆ
ಸೋತಿದ್ದೇನೆ
ಪ್ರೀತಿಯೆಂಬ
ಉಸುಕುಭೂಮಿಯಲ್ಲಿ
ಕಂಠಮಟ್ಟ ಹುದುಗಿ
ಹೋಗಿದ್ದೇನೆ,
ಪೂರ್ತಿ ಮುಳುಗುವ
ಮೊದಲು ಸ್ವರ
ಉಳಿದರೆ ನಿನ್ನ
ಹೆಸರೇ ಹೇಳುವಾಸೆ!
6 comments:
Good, keep writing more. .
vah! excellent...preetiyalli mulugidante kanuttade
ಕವನದಷ್ಟೇ ಸುಂದರವಾಗಿದೆ ಚಿತ್ರ.
"ಪೂರ್ತಿ ಮುಳುಗುವ
ಮೊದಲು ಸ್ವರ
ಉಳಿದರೆ ನಿನ್ನ
ಹೆಸರೇ ಹೇಳುವಾಸೆ!"
...very good lines!
ಸಂಕೋಲೆ, ಕ್ಯಾಕ್ಟಸ್ ಹಾಗೂ ಗುಲಾಬಿ ಹೃದಯಗಳು ಇರುವ ಚಿತ್ರ ಸೊಗಸಾಗಿದೆ.
ಚೂಪರ್ರು ಕವನ!!
-ಚಿತ್ರಾ
Super Venu, antu sikkidira, hegidira?
Post a Comment