10.3.09

ನಿನ್ನೆ ನಾಳೆಗಳು....

ಮೊನ್ನೆ, ನಿನ್ನೆ ನನಗೆ ಚೆನ್ನಾಗಿತ್ತು

ಇಂದೂ ಇಲ್ಲಿಯ ವರೆಗೆ

ಪರವಾಗಿಲ್ಲ...

ಅಂದಹಾಗೆ

ಬದುಕು ಬೇವು ಬೆಲ್ಲ,

ಕಷ್ಟ ಸುಖಗಳೆ ಎಲ್ಲ

ಎಂದಿದ್ದಾರೆ ಹಿರಿಯರು

ಮೊನ್ನೆ, ನಿನ್ನೆ, ಇಂದು ಚೆನ್ನಾಗಿದೆ ನನಗೆ

ಅದಕ್ಕೇ ಭಯವಾಗುತ್ತಿದೆ...

ನಾಳೆಯ ನೆನೆದು ಮನ ಅಳುಕುತ್ತದೆ

-------------------------------

ಆಶಾವಾದಿಯೊಬ್ಬ

ನಾಳೆಗಳನ್ನು ಕೈವಶ

ಮಾಡುತ್ತಲೇ ಹೋದ

ಆತನ ಅಕೌಂಟಿನಲ್ಲಿದ್ದ

ನೋವುಗಳಿಗೆ

ಅನುಭವದ ಹಾಗೂ

ನಲಿವುಗಳಿಗೆ

ಸಂಭ್ರಮದ ಬಡ್ಡಿ ಸಿಕ್ಕಿತು..

ನಿರಾಶಾವಾದಿ ನಾಳೆಯ

ನೆನಪುಗಳಿಗೆ ಸೊರಗಿ

ವಿಗ್ರಹವಾಗಿದ್ದಾನೆ!

------------------------

ನಾಳೆಯಾಗಲು

ಕೆಲ ಗಂಟೆಗಳಿವೆ

ನಿನ್ನೆಯ ಹೊಸ್ತಿಲು ದಾಟಿಯಾಗಿದೆ

ಆ.......

ದೂರದಲ್ಲಿ ಕಾಣುವದೇನು

ಶುಭ್ರಸೂರ್ಯನ ಬಿಂಬವೋ

ನಮ್ಮ ಸುಡುವ ಬಾಂಬೋ!

11 comments:

sunaath said...

ವೇಣು,
Congrats.
ಹನಿಕವನಗಳು ಚೆನ್ನಾಗಿವೆ.

Shree said...

ಹೌದು, ಎಲ್ಲರಿಗೂ ಹಾಗೆಯೇ, ನಿನ್ನೆ ಮಾತ್ರ ಚಂದವೆನಿಸುತ್ತದೆ. ನಾಳೆಗಳು ಯಾವತ್ತಿಗೂ ಹೆದರಿಕೆ ಹುಟ್ಟಿಸುತ್ತವೆ. ಇದನ್ನು ಅರ್ಥ ಮಾಡಿಕೊಂಡಾಗ ಮಾತ್ರ ಚೆನ್ನಾಗಿ ಬದುಕಲು ಸಾಧ್ಯವೇನೋ.

ಹರೀಶ ಮಾಂಬಾಡಿ said...

ನಿನ್ನೆ ನಿನ್ನೆಗೆ,

ನಾಳೆ ನಾಳೆಗೆ

ಇಂದು ನಮ್ಮದೇ

ಚಿಂತೆ ಏತಕೆ..

--ಸದ್ಯಕ್ಕೆ ಈ ಸಿನೆಮಾ ಹಾಡಿನ ತತ್ವ ನಮ್ಮೆಲ್ಲರಲ್ಲೂ ಇರಲಿ.(ಆತ್ಮಸಮಾಧಾನಕ್ಕೆ)

ತೇಜಸ್ವಿನಿ ಹೆಗಡೆ said...

ನಿನ್ನೆಯ ನೆನಪಲ್ಲಿ ಹಾಗೂ ನಾಳೆಯ ಚಿಂತೆಯಲ್ಲಿ ಇಂದು ಚಿತೆಯಾಗದಿದ್ದರೆ ಸಾಕು! ಚೆನ್ನಾಗಿವೆ ಹನಿಗವನಗಳು.

shivu.k said...

ವೇಣು ಅನಂದ್,

ಕವನ ತುಂಬಾ ಚೆನ್ನಾಗಿದೆ....

ನಾಳೆ...ನಿನ್ನೆ ...ಮೊನ್ನೆಗಳ ಬಗ್ಗೆ ಅನೇಕರ ಭಾವನೆಗಳನ್ನು ತೋರಿಸಿದ್ದೀರಿ...

"ನೆನಪುಗಳಿಗೆ ಸೊರಗಿ

ವಿಗ್ರಹವಾಗಿದ್ದಾನೆ!"

ಮತ್ತು,

ದೂರದಲ್ಲಿ ಕಾಣುವದೇನು

ಶುಭ್ರಸೂರ್ಯನ ಬಿಂಬವೋ

ನಮ್ಮ ಸುಡುವ ಬಾಂಬೋ!

ಈ ಪದಗಳ ಪ್ರಯೋಗ ತುಂಬಾ ಚೆನ್ನಾಗಿದೆ...

ಅಭಿನಂದನೆಗಳು...

lancyad said...

ನಿಜವಾಗಿ ಸತ್ಯ..ಇ0ದಿನ ಪರಿಸ್ಥಿತಿ ನೋಡಿದರೆ..ಮತ್ತು ನಾಳೆದ್ದು ಯೊಚಿಸಿದರೆ ನಡುಕ ಬರುತ್ತದೆ...

ಶ್ರೀನಿಧಿ.ಡಿ.ಎಸ್ said...

hmmmmmmmmm..

ಧರಿತ್ರಿ said...

ಕಳೆದ ನಿನ್ನೆ, ಬರುವ ನಾಳೆಗಳಲ್ಲಿ ಖುಷಿ ಕ್ಷಣಗಳನ್ನು ಹೆಕ್ಕಿತೆಗೆಯೋಣ.
ಹ್ಮ್ ನಾನು ಧರಿತ್ರಿ..ಬ್ಲಾಗ್ ಲೋಕಕ್ಕೆ ಹೊಸಬಳು. ಒಂದೇ ಒಂದು ಸಲ ಪುರುಸೋತ್ತು ಮಾಡಿಕೊಂಡು ಧರಿತ್ರಿಯತ್ತ ಕಣ್ಣಾಯಿಸಿ..ಬೆನ್ನುತಟ್ಟಿ
-ಧರಿತ್ರಿ

Shyama Soorya said...

good one !

ಮಿಥುನ ಕೊಡೆತ್ತೂರು said...

ವಾಹ್.

VENU VINOD said...

sunath, sree, mambadi,tejaswini, srinidhi,shivu, lancy,dharitri, shyam and mithun....thanks for sparing time in my page...keep visiting

Related Posts Plugin for WordPress, Blogger...