29.4.09

ಮೇ ಫ್ಲವರ್ ದಳಗಳು

ಆಗಷ್ಟೇ ಹೂ ಬಿಡುತ್ತಿರುವ
ಮೇಫ್ಲವರಿನ ಮರ
ಕೆಳಗಿನ ಬೆಂಚಲ್ಲಿ
ಕುಳಿತ ನಾನು
ಮರದಲ್ಲಿ ಕುಳಿತ
ಒಂಟಿ ಗಿಣಿಯೂ
ವಿರಹಗೀತೆ ಹಾಡಿದೆವು!

-------------

ನಿನಗಾಗಿ ನಾನು
ಇನ್ನಷ್ಟು ಕಾಯಬಲ್ಲೆ
ಆದರೆ
ನಿನಗಾಗಿ ತಂದು
ಅರ್ಧ ಗಂಟೆಯ ಬಿಸಿಲಿಗೆ
ಒಣಗಿದ ಹೂಗೊಂಚಲುಗಳು
ಬಹುಷಃ ನಿರಾಸೆಗೊಂಡಾವು

--------------

ಕಡಲತಡಿಯ ಮರಳಲ್ಲಿ
ಬರೆದ ನಿನ್ನ ಹೆಸರು
ಮುಂದಿನ ತೆರೆಗೆ
ಕೊಚ್ಚಿ ಹೋಗಬಹುದು
ನನ್ನ ನೆನಪು ನಿನ್ನಲ್ಲಿ ಅಳಿದರೆ
ನಾನೂ ಕೊಚ್ಚಿಕೊಂಡು ಹೋದೇನು!

---------------

ನೀನು ಕೊಟ್ಟ ಕಾಣಿಕೆಗಳು
ಇಂದು ಮನದಲ್ಲಿಲ್ಲ...
ಏನಿದ್ದರೂ ನೀನು
ನನ್ನೆದೆಯಲ್ಲಿ
ಬಿತ್ತಿದ ಕಣ್ಣೀರಿನ
ನೆನಪುಗಳು ಮಾತ್ರ
---------------
ನನ್ನ ಮನದ
ಗೋಡೆಗಳಲ್ಲೆಲ್ಲ
ನಿನ್ನದೇ ಚಿತ್ರಗಳು
ಹೃದಯದ ಡಾರ್ಕ್ ರೂಮಿನಲ್ಲಿ
ಅರಳುತ್ತವೆ ನಗುವಿನ ಅಲೆಗಳು

8 comments:

ರಾಜೇಶ್ ನಾಯ್ಕ said...

ವಿರಹಿ ವೇಣು!!
ವಿರಹಕ್ಕೆ ಕಾರಣ ಏನು?

sunaath said...

ಸಮಾಧಾನವಿರಲಿ, ವೇಣು. ವಿರಹದಿಂದಲೇ ಸಮಾಗಮಕ್ಕೆ ಕಳೆ ಕಟ್ಟುವದು!

ಧರಿತ್ರಿ said...

ಎನ್ರೀ ಬರೇ ವಿರಹ ವಿರಹಾ>>>>>>>>>>>>>
-ಧರಿತ್ರಿ

ಹರೀಶ ಮಾಂಬಾಡಿ said...

ನಿಮಗೂ, ಒಂಟಿಗಿಣಿಗೂ ಶುಭ ಸುದ್ದಿ!
ಬೇಗ ಮಳೆಯಾಗಬಹುದು.
ತಾಪವೆಲ್ಲಾ ನೀಗಲು :)

(ಮತ್ತೆ ಬೆಚ್ಹನೆಯ ಸಾಲು ಬರೆಯಬಹುದು :)

ಧರಿತ್ರಿ said...

ಲೇಟೂ ಯಾಕೆ? ಬರೆದೇ ಇಲ್ಲ
-ಧರಿತ್ರಿ

VENU VINOD said...

ರಾಜೇಶ್,
ಅಂಥಾ ಕಾರಣವೇನಿಲ್ಲ...ಹಾಗೇ ಸುಮ್ಮನೆ :)
ಸುನಾಥರೇ,
ನಿಮ್ಮ ಸಾಂತ್ವನ ಸಮಾಧಾನ ಕೊಟ್ಟಿದೆ..
ಧರಿತ್ರಿ,
ಬ್ಲಾಗ್ನಲ್ಲಿ ಎಲ್ಲಾ ರೀತಿಯ ಭಾವನೆಗಳೂ ಇರಬೇಕೆಂದು ನನ್ನ ಬಯಕೆ, ಏಪ್ರಿಲ್-ಮೇ ತಿಂಗಳ ಧಗೆಗೆ ಇದೇ ಸರಿಯೆನ್ನಿಸಿ ಬರೆದು ಬಿಟ್ಟೆ ;)
ಮಾಂಬಾಡಿ,
ಆಗ್ಲೇ ಮಳೆಯಾಯ್ತಲ್ಲ...

anu said...

o devare atmasparshi saalugalu ....
prasad.g udupi

shivu.k said...

ವಿರಹಾ....ನೂರು ನೂರು ತರಹ....

Related Posts Plugin for WordPress, Blogger...