ಪ್ರಶ್ನೆಗೆ ಉತ್ತರ
ಸಿಗುವುದಿಲ್ಲ ಎಂದು
ತಿಳಿದ ಬಳಿಕ
ಪ್ರಶ್ನೆ ಏಕಾಂಗಿ
ಆಗಿ ಉಳಿದುಬಿಟ್ಟಿತು
ಪ್ರಶ್ನೆಗಾದರೂ ಏನು?
ಪ್ರಶ್ನೆಯಾಗಿ ಕಾಡಿದರಾಯಿತು
ಉತ್ತರಿಸುವುದು ಬಲುಕಷ್ಟ
ಪ್ರಶ್ನೆಗೆ ಬೇಸರವೂ
ಆಗಬಾರದು, ಉತ್ತರ ಸಿಗಲೂಬೇಕು
ತಲೆಗೊಂದರಂತೆ ಎದ್ದ
ಪ್ರಶ್ನೆಗಳ ಪಂಜರದಲ್ಲಿ
ಸಿಲುಕಿದ ಉತ್ತರವೀಗ
ಹೊರಬರಲು ತಡಕಾಡುತ್ತಿದೆ....
ತನ್ನಿಂದ ಪೇಚಿಗೆ
ಸಿಲುಕಿದ ಉತ್ತರವನ್ನು
ನೋಡಿ ಪ್ರಶ್ನೆಗೆ ಸಂಕಟ ಹಾಗೂ
ಪ್ರೀತಿ ಉಮ್ಮಳಿಸಿಬಂತು...
ಈಗ ಇವೆರಡೂ ಸೇರಿಕೊಂಡಿವೆ
ಉಳಿದೆಲ್ಲರನ್ನೂ ಕಾಡತೊಡಗಿವೆ!
ಪ್ರಶ್ನೆಗೆ ಉತ್ತರ ಹುಡುಕುತ್ತಾ
ಆ ಕಪ್ಪುಕತ್ತಲಿನ ಸುರಂಗದಲ್ಲಿ ಸಾಗಿದ
ನನಗೆ ಕೊನೆಯಲ್ಲಿ
ಕಂಡದ್ದು ಏನು ???
12 comments:
ತನ್ನಿಂದ ಪೇಚಿಗೆ
ಸಿಲುಕಿದ ಉತ್ತರವನ್ನು
ನೋಡಿ ಪ್ರಶ್ನೆಗೆ ಸಂಕಟ ಹಾಗೂ
ಪ್ರೀತಿ ಉಮ್ಮಳಿಸಿಬಂತು...
ಈಗ ಇವೆರಡೂ ಸೇರಿಕೊಂಡಿವೆ
ಉಳಿದೆಲ್ಲರನ್ನೂ ಕಾಡತೊಡಗಿವೆ!
ವಾಹ್!
ಸಕತ್ತಾಗಿದೆ. different ಆಗಿ ಕೂಡ.....ಕವಿತೆ ಇಷ್ಟ ಆಯ್ತು :)
-ವೈಶಾಲಿ
ಕೆಳಗಿನ ಸಾಲುಗಳು ತುಂಬಾ ಇಷ್ಟವಾಯಿತು
ಪ್ರಶ್ನೆಗಾದರೂ ಏನು?
ಪ್ರಶ್ನೆಯಾಗಿ ಕಾಡಿದರಾಯಿತು
ಉತ್ತರಿಸುವುದು ಬಲುಕಷ್ಟ
ಪ್ರಶ್ನೆಗೆ ಬೇಸರವೂ
ಆಗಬಾರದು, ಉತ್ತರ ಸಿಗಲೂಬೇಕು
ವಾಹ್...! ಅದ್ಭುತವಾಗಿದೆ.. ತುಂಬಾ ಇಷ್ಟವಾಯ್ತು.. :)
Wow!
Adbhutavaada kavanagalu.... Chaliya kurukalugalu mastagive...
Hmmmm... oodi hage adbhutavaada ondu cup coffee kudida haagayitu.
Just Amazing.
ವೇಣು
ಇದು ನಿಜಕ್ಕೂ ಹೊಸ ಪದಗಳ ಅರ್ಥಗಳ ಪ್ರಯೋಗ...
ತನ್ನಿಂದ ಪೇಚಿಗೆ
ಸಿಲುಕಿದ ಉತ್ತರವನ್ನು
ನೋಡಿ ಪ್ರಶ್ನೆಗೆ ಸಂಕಟ ಹಾಗೂ
ಪ್ರೀತಿ ಉಮ್ಮಳಿಸಿಬಂತು...
ಈಗ ಇವೆರಡೂ ಸೇರಿಕೊಂಡಿವೆ
ಉಳಿದೆಲ್ಲರನ್ನೂ ಕಾಡತೊಡಗಿವೆ!
ಇದಂತೂ ಚೆನ್ನಾಗಿದೆ..
"ಪ್ರಶ್ನೆಗೆ ಉತ್ತರ ಹುಡುಕುತ್ತಾ
ಆ ಕಪ್ಪುಕತ್ತಲಿನ ಸುರಂಗದಲ್ಲಿ ಸಾಗಿದ
ನನಗೆ ಕೊನೆಯಲ್ಲಿ
ಕಂಡದ್ದು ..."
ಬೆಳಕು
ವೇಣು ಸರ್,
ಎಲ್ಲ ಸಾಲುಗಳು ಇಷ್ಟವಾದವು.
ವೇಣು, ಕವನ ಚೆನ್ನಾಗಿದೆ, ಎಲ್ಲಾ ಸಾಲುಗಳೂ ಚೆನ್ನಾಗಿವೆ :)
ಓದಿ ಕಮೆಂಟ್ ಮಾಡೋಕೆ ಅಂತ ಕೊನೇ ಪ್ಯಾರಾನ ನಕಲು ಮಾಡಿಕೊಂಡು, ಅದರ ಕೊನೆಯಲ್ಲಿ ಉತ್ತರವಾಗಿ ‘ಬೆಳಕು’ ಅಂತ ಬರ್ಯೋಕೆ ಅಂತ ಎಲ್ಲಾ ತಯಾರಿ ಮಾಡಿ, ಪೋಸ್ಟ್ ಮಾಡೋ ಮೊದ್ಲು ಉಳಿದ ಕಮೆಂಟ್ಸ್ ನೋಡಿದೆ, ಆಗ ‘ಸುಪ್ತದೀಪ್ತಿ’ ಬರೆದ ಕಮೆಂಟ್ ಕಾಣ್ಸ್ತು, What a co-incidence :)
ಚೆನ್ನಾಗಿದೆ..
hwa, mastaagide:)
Tumba Chennagide.... ella saalugaloo chennagive... poorti kaviteyoo chennagide..
ವೈಶಾಲಿ, ಗುರು, ದಿಲೀಪ್, ಭಾ.ಶೇ, ಶಿವು, ಸುಪ್ತದೀಪ್ತಿ, ರೂಪ, ಅನ್ನಪೂರ್ಣ, ಜೋಮನ್, ಶ್ರೀನಿಧಿ, ಜ್ಯೋತಿ ಎಲ್ಲರಿಗೂ ವಂದನೆ....
Post a Comment