19.11.09

ಮೌನರಾಗ

ನಿರಾಳ ಸರೋವರದ
ಮೌನ
ಮುದ ನೀಡುತ್ತದೆ
ಮೌನ ಚುಚ್ಚುತ್ತದೆ
ಮೌನ ಬಿಚ್ಚಿಕೊಳ್ಳುತ್ತದೆ
ಕಟ್ಟಿಕೊಡುತ್ತದೆ ನೆನಪನ್ನು

ಮೌನ
ಕೊಳಲಿನಂತೆ
ನುಡಿಸುತ್ತದೆ ವಿಷಾದರಾಗಗಳನ್ನು
ಮೌನ ಸಹಿಸುತ್ತದೆ
ಧರಿತ್ರಿಯಂತೆ ಎಲ್ಲ ಪೆಟ್ಟುಗಳನ್ನು
ಮೌನದಲ್ಲಿ ನೋವಿದೆ
ಸಾವಿನಲ್ಲಿ ಮೌನವಿದೆ
ಮೌನ ನಿರ್ಗುಣ
ನೀರಿನಂತೆ ನಿರ್ಮಲ


ಮೌನ ತಾಳುತ್ತದೆ
ಮೌನ ಬಿರಿಯುತ್ತದೆ
ಕತ್ತಲ ಏಕಾಂತದಲ್ಲಿ
ಆಲಂಗಿಸಿ ಸಂತೈಸುತ್ತದೆ


ಮೌನ ನಿರ್ವಿಕಾರ, ನಿರಾಕಾರ
ಪ್ರಶಾಂತ, ನಿರುಮ್ಮಳ
ಮೌನ ಪ್ರಶ್ನೆ
ಮೌನವೇ ಉತ್ತರ
ಹಾಗೂ
ಮೌನವೇ
ದೇವರು!

ಚಿತ್ರ: deviantart.com

8 comments:

sunaath said...

ಮನಸ್ಸು ಮೌನಿಯಾದಾಗ, ಅಂತರಂಗದ ಭಾವನೆಗಳ ಹೊಯ್ದಾಟವನ್ನು ಸೊಗಸಾಗಿ ವರ್ಣಿಸಿದ್ದೀರಿ. ಅಭಿನಂದನೆಗಳು.

ಕೆನೆ Coffee said...

good one :) ishta aaytu.

ಗೌತಮ್ ಹೆಗಡೆ said...

ಮೌನ ರಾಗ ಮೋಹಕವಾಗಿದೆ. ಮಾತೇ ಇಲ್ಲ :)

ಹರೀಶ ಮಾಂಬಾಡಿ said...

ಮೌನವಾಗಿ ಓದಿದೆ..ಚೆನ್ನಾಗಿದೆ.

ಚಕೋರ said...

ಚೆನ್ನಾಗಿದೆ, ಆದರೆ ಮೌನ ಪದ ತುಂಬಾ ಬಾರಿ ಬಳಕೆ ಮಾಡುವ ಅಗತ್ಯವಿದ್ದಿರಲಿಲ್ಲ ಅನ್ನಿಸುತ್ತದೆ. ಬರೆದ ನಂತರ ಆ ರೀತಿ ಚೆನ್ನಾಗಿ ಬರುತ್ತಿತ್ತಾ ಅಂತ ಪ್ರಯತ್ನಿಸಿದ್ದರೆ ಉತ್ತಮವಿತ್ತೇನೋ.

shivu.k said...

ಮೌನದ ನಿಮ್ಮ ಕಲ್ಪನೆ ಚೆನ್ನಾಗಿದೆ. ಜೊತೆಗೆ ಮೌನವಾಗಿದ್ದಾಗಲೇ ಇಷ್ಟು ಚೆನ್ನಾಗಿ ಮೌನದ ಬಗ್ಗೆ ಬರೆಯಲು ಸಾಧ್ಯ.
ಧನ್ಯವಾದಗಳು

ಸಾಗರದಾಚೆಯ ಇಂಚರ said...

ವೇಣು,
ಮೌನದ ಬಗೆಗಿನ ಸಾಲುಗಳು ತುಂಬಾ ಸೊಗಸಾಗಿವೆ
ಓದಿ ಹಿತವೆನಿಸಿತು

Kallare said...

agree wid Chakora! It cud hv been better sirr

Related Posts Plugin for WordPress, Blogger...