ನಾನು ಮೊದಲ ಬಾರಿಗೆ ನಶ್ಯ ನೋಡಿದ್ದು ಸುಮಾರು೩-೪ ವರ್ಷದವನಿರಬೇಕಾದರೆ ಪೆರ್ಲದ ದಾಮು ಭಂಡಾರಿಗಳ ಕ್ಷೌರದಂಗಡಿಯಲ್ಲಿ.
ದಾಮು ಭಂಡಾರಿಯವರು ಪ್ರತಿ ಗಿರಾಕಿಯ ಕ್ಷೌರ ಮಾಡಿದ ಬಳಿಕ ಮಧ್ಯಂತರದಲ್ಲಿ ತಪ್ಪದೇ ಚಿಟಿಕೆ ನಶ್ಯ ಹಾಕುವ ಗಮ್ಮತ್ತನ್ನು ನೋಡುವುದಕ್ಕಾಗೇ ನಾನು ಅಜ್ಜನೊಂದಿಗೆ ಕ್ಷೌರದಂಗಡಿಗೇ ಹೋಗಿದ್ದುಂಟು!
ಶುದ್ಧ ಬಿಳಿಯ ಪಂಚೆ, ಅದೇ ಬಣ್ಣದ ಶುಭ್ರ ಖಾದಿ ಬನೀನು ಧರಿಸಿದ್ದ ಇಳಿ ವಯಸ್ಸಿನ ಭಂಡಾರಿಯವರನ್ನು ನೋಡುವಾಗಲೇ ಗೌರವ ಬರುವುದು. ಅವರು ಹಳೇ ಅಲ್ಮಾರಿಯ ಮೂಲೆಗೆ ಕೈಹಾಕಿ, ಅಲ್ಲಿಂದ ನಶ್ಯ ತುಂಬಿದ್ದ ಆಕರ್ಷಕ ಗಾಜಿನ ಚಿಕ್ಕ ಗಾತ್ರದ ಸಪುರ ಕೊರಳಿನ ಬಾಟಲಿಯನ್ನು ಹೊರ ತೆಗೆದು, ಹೊರ ಬಂದು ಎಡಗೈ ಅಗಲಿಸಿ, ಬಾಟಲಿಯಿಂದ ನಶ್ಯವನ್ನು ಕೈಗೆ ಹಾಕಿಕೊಂಡು ಅದರಿಂದ ಒಂದು ಚಿಟಿಕೆ ಪುಡಿ ಮಾತ್ರವೆ ಬಲ ಅಂಗುಷ್ಠ ಮತ್ತು ತೋರು ಬೆರಳಿನಲ್ಲಿ ಇರಿಸಿ, ಉಳಿದದ್ದು ಕೊಡವಿ ಅದೊಂದು ಗತ್ತಿನಲ್ಲಿ ನಶ್ಯ ಏರಿಸುತ್ತಿದ್ದರೆ ನನಗೇ ನಶ್ಯ ಹಾಕಿದ ಹಾಗೆ ಆಗುತ್ತಿತ್ತು.
ಇನ್ನು ಮದುವೆ, ಪೂಜೆಯಂತಹ ಸಮಾರಂಭಗಳಲ್ಲೂ ನಶ್ಯ ಹಾಕುವವರು ಒಂದು ಕಡೆ ಸೇರಿಕೊಂಡು ಅದೋ ಇದೋ ರಾಜಕೀಯ ಮಾತಾಡುತ್ತಾ ಹೇಗೆ ಈ ಬಾರಿ ಅಡಕೆಗೆ ರೇಟ್ ಏರಬಹುದೋ ಏನೋ ಎನ್ನುತ್ತಾ ನಶ್ಯ ಹಾಕುವುದು, ಆ ಬಳಿಕ ಲಯಬದ್ಧವಾಗಿ ಅನೇಕರು ‘ಆಆಆಆಆಆ ಕ್ಷೀಈಈಈಈಈಈ’ ಎಂದು ಸೀನುವುದು ಏನು ದೃಶ್ಯ!
ಇನ್ನು ಕೆಲವರು ಒಂದೊಂದು ಪದವನ್ನು ಮಧ್ಯೆ ಆಕ್ಷೀ ಬೆರೆಸಿಕೊಂಡು ಹೇಳುವುದಂತೂ ನಾಟಕೀವಾಗಿರುತ್ತಿತ್ತು.
ಇದರಿಂದ ನಾನೂ ಪ್ರೇರಿತನಾಗಿ ಅನುಸರಿಸಲು ಹೋಗಿ ಮನೆಯಲ್ಲಿ ಚೆನ್ನಾಗಿ ಬೈಗುಳ ತಿಂದದ್ದಿದೆ. ನಾನು, ನನ್ನ ಓರಗೆಯ ಇತರ ಕೆಲ ಮಕ್ಕಳಿಗೂ ನಶ್ಯದಲ್ಲಿ ಆಕರ್ಷಣೆ ಬರಲು ಕಾರಣವೇ ಈ ಆಕ್ಷಿ ಎಂದರೂ ತಪ್ಪಲ್ಲ! ನಶ್ಯವನ್ನು ಹದವಾಗಿ ಏರಿಸಿದಾಗ ಶ್ವಾಸಕೋಶದ ಅಂತರಾಳದಲ್ಲೆಲ್ಲೋ ಉದ್ಭವವಾಗುವ ಆಕ್ಷಿ ನಿಧಾನವಾಗಿ ಕಂಠದ ಮೂಲಕ ಹೊರ ಬರುತ್ತಿರುವಾಗ ಕೆಲವರು ಕಣ್ಮುಚ್ಚಿ ಅಥವಾ ಅರೆಕಣ್ಣು ಮುಚ್ಚಿ, ಬಾಯಿ ಆಆಆಆ ಮಾಡಿಕೊಂಡು ಕೊನೆಗೆ ಆಕ್ಷೀ ಎನ್ನುತ್ತಾ ಮಹದಾನಂದ ಪಡೆಯುವುದನ್ನು ನೋಡಿದ್ದೇನೆ :) ಜೋರು ಶೀತವಾದ ಸಂದರ್ಭದಲ್ಲಿ ಮಾತ್ರ ಮೂಗು ಕ್ಲಿಯರಾಗಲು ಕೆಲವೊಮ್ಮೆ ಅಜ್ಜನೇ ನನಗೆ ನಶ್ಯವನ್ನು ಕರುಣಿಸುತ್ತಿದ್ದರು.
ಯಾಕೆ ಇದೆಲ್ಲಾ ನೆನಪಾಯಿತೆಂದರೆ,ಈಗೀಗ ನಮ್ಮ ಕಡೆಯಂತೂ ನಶ್ಯ ಹಾಕುವವರೇ ಕಾಣಸಿಗುವುದಿಲ್ಲ, ಕೆಲವೊಂದು ಅಜ್ಜಂದಿರನ್ನು ಬಿಟ್ಟರೆ. ಇದು ಒಳ್ಳೆಯದೋ ಕೆಟ್ಟದೋ ಎಂದು ವಿಶ್ಲೇಷಿಸೋದು ನನ್ನ ಉದ್ದೇಶವಲ್ಲ.
ನಿಜ ಹೊಗೆಸೊಪ್ಪಿನಿಂದ ತಯಾರಿಸಿದ ಎಲ್ಲಾ ರೀತಿಯ ವಸ್ತುಗಳೂ ಅತಿಯಾದರೆ ದೇಹಕ್ಕೆ ಮಾರಕವೇ. ಬಹುಷಃ ಸಿಗರೇಟ್, ಗುಟ್ಕಾದ ಜನಪ್ರಿಯತೆಯಲ್ಲಿ ನಶ್ಯದ ಚಟ ಮಸುಕಾಗಿರಬಹುದೇನೋ..
ಯಾವಾಗಲೋ ಒಮ್ಮೆ ನಶ್ಯ ಏರಿಸಿ ಆಕ್ಷೀ ಎನ್ನುವ ಆನಂದ ಅನುಭವಿಸಿದವರಿಗೆ ಮಾತ್ರ ಆ ಖುಷಿ ಬೇರೆಲ್ಲೂ ಸಿಗದು :)
9 comments:
ಆಆಆಆಆಆ ಕ್ಷೀಈಈಈಈಈಈ...!!
ನಿಜ..ನಿಜ...ನನಗೂ ಒಂಚೂರು(!) ಅನುಭವವಿದೆ...ಅದರ ಮಜವೇ ಬೇರೆ ಬಿಡಿ..! ಆಆಆಆಕ್ಷೀಇಇಇಇಇಇ
ನನಗೆ ಈ ಚಟ ತುಂಬಾ ಸೋಜಿಗ ಎನಿಸುತ್ತದೆ..
ಈ ಮನುಷ್ಯ ಚಟ ಮಾಡಲಿಕ್ಕೆ ಏನೆಲ್ಲ ಹುಡುಕಿಕೊಳ್ಳುತ್ತಾನೆ ಅಲ್ಲವಾ...?
ಈ ತಂಬಾಕಿನ ಪುಡಿಯನ್ನು ಮುಗಿಗೆ ಹಾಕಿಕೊಂಡರೆ ಮಜಾ ಬರುತ್ತದೆ ಎಂದು ಕಂಡು ಹಿಡಿದ ಪುಣ್ಯಾತ್ಮನಿಗೆ ನಮೋನ್ನಮಃ...!!
ಮದುವೆಯಾಗುವ ಹುಡುಗಿಯ ಮುಂದೆ ಈ ಚಟ ಮಾಡಿದರೆ ಹೇಗೆ...?
ಅವಳನ್ನೂ ಜೊತೆಗೂಡಿಸಿಕೊಂಡರೆ ಹೇಗೆ...?
ಇಬ್ಬರೂ ಸೇರಿ "ಆಕ್ಷೀ.... " ಎಂದರೆ ಮಸ್ತ್ ಇರ್ತದೆ ಅಲ್ಲವಾ...?
ಹ್ಹಾ..ಹ್ಹಾ...!
ಅಂದ ಹಾಗೆ ಹೆಣ್ಣುಮಕ್ಕಳು ಈ ಚಟ ಮಾಡಿದ್ದನ್ನು ನಾನು ನೋಡಿಲ್ಲ...!!!
ಏನೇ ಹೇಳಿ ಸ್ವಲ್ಪ ಗಲೀಜು ಚಟ ಇದು... ಅಲ್ಲವಾ...?
nammooralli nashyakke anthle appannara agndige hogtaare jana, eegloo:)
chennagide!!!!
Nangu omee nashya erisabekemba aase!
Yavaga pooraisattoooo!!!!???? :(
hello
My naani (grandma) was addicted to nashya. i was so fascinated that one day i tried to imitate her. But by night i felt dizzy and nauseous. that was one 'hell' of an experience.
but i will not say thanks for reminding me of it, hehehehe
:-)
malathi S
ನಶ್ಯ ಪುರಾಣ ಸಕ್ಕತ್. ಓದಿ ನನಗೂ ಆಕ್ಷಿ ಬಂತು.
ಆಆಆಆಆಆ ಕ್ಷೀಈಈಈಈಈಈ...!!ನಾನೂ ತುಂಬಾ ಜನರನ್ನು ನೋಡಿದ್ದೇನೆ........
ಇಲ್ಲಿ ತುಂಬಾ ಮಂದಿಗೆ ಆಆಆಕ್ಷೀಈಈಈ ಬಂದಿದ್ದು ನೋಡಿ ಖುಷಿಯಾಯ್ತು... :) ಓದಿ ಪ್ರತಿಕ್ರಿಯಿಸಿದ ಎಲ್ಲರಿಗೂ ನನ್ನಿ...
Post a Comment