29.5.10

ಕತ್ತಲು ಕಡಲು


ಕತ್ತಲಿನ್ನು ಬರಿಯ ಕತ್ತಲೆಯಲ್ಲ
ಕತ್ತಲಿನ ಸನ್ನಿಧಿಗೆ
ಸರಿದಿವೆ ಸಾಲುಸಾಲು ಜೀವ
ನಿನ್ನ ಪಾದತಳಕ್ಕೆ ಇದೋ
ತಲಪಿದೆ ಎನ್ನುವಾಗಲೇ
ತಪ್ಪಿದ ಆಯ, ಎಲ್ಲಾ ಮಾಯ
ಮೃತ್ಯು ಆಲಿಂಗನ
ಕತ್ತಲಿನ್ನು ಏಕಾಂಗಿಯಲ್ಲ

ಭೋರ್ಗರೆವ ಕಡಲಿನ
ರೋಧನಕ್ಕೆ ಸೇರಿಕೊಂಡಿದೆ
ಅವರ ಕಡೆಯವರ ಕಣ್ಣೀರು
ಕಡಲಿನ್ನು ಒಂಟಿಯಲ್ಲ
ಅಳುವವರಿಗೆ
ಸಾಲು ಅಲೆಗಳದ್ದಷ್ಟೇ
ಸಾಂತ್ವನ

ನೋಟಕ್ಕೆ ನಿಲುಕದ್ದು
ಬರಿಗೈಗೆ ಸಿಲುಕಿದ್ದು
ಸುಟ್ಟು ಕರಕಲಾದದ್ದು
ಎಲ್ಲದರ
ಕೊನೆಗೆ ಉಳಿದದ್ದು
ಬರಿಯ ಕತ್ತಲು
ಕತ್ತಲಿನ್ನು ಬರಿಯ ಕತ್ತಲಲ್ಲ.

10 comments:

Subrahmanya said...

ಕನ್ನಡಪ್ರಭದಲ್ಲಿ ನಿಮ್ಮ ವರದಿಗಳನ್ನು ಓದಿ ಮನ ಕಲಕಿತ್ತು. ಇಲ್ಲಿ ಆ ನೋವಿನ ಭಾವನೆಗಳನ್ನು ಸಕಾಲಿಕವಾಗಿ ಹೊರಹಾಕಿದ್ದೀರಿ.

sunaath said...

ವಿಮಾನ ಅಪಘಾತದ ದುರ್ದೈವಿಗಳಿಗೆ ಇದು ಕಣ್ಣೀರಿನ ಸ್ಮರಣೆಯಾಗಿದೆ.

ದಿನಕರ ಮೊಗೇರ said...

very very sad thing........ kavanadalli chennaagi barediddeeraa......

ಹರೀಶ ಮಾಂಬಾಡಿ said...

vishaada notada saalugalu

shivu.k said...

ಕನ್ನಡಪ್ರಭದಲ್ಲಿ ನಿಮ್ಮ ವರದಿಗಳನ್ನು ಓದಿದ್ದೆ. ನೀವು ಕಂಡ ದೃಶ್ಯಗಳನ್ನು ಭಾವನೆಗಳ ಸಮೇತ ಚೆನ್ನಾಗಿ ಬರೆದಿದ್ರಿ. ಅಪಘಾತಕ್ಕೊದವರ ಬಗ್ಗೆ ನನ್ನ ಕಡೆಯಿಂದ ವಿಶಾದವಿದೆ.

ಸಾಗರದಾಚೆಯ ಇಂಚರ said...

ವೇಣು
ಮನ ಕಲಕಿತು ನಿಮ್ಮ ವರದಿ ಓದಿ

Unknown said...

vishaada thumbida kavana
bahusha allina drishyavannu
kannare kandavarige maathra saadya
intha novannu vyakthapadisalu

ಸೀತಾರಾಮ. ಕೆ. / SITARAM.K said...

ಉತ್ಕಟ ಭಾವನೆಯ ಸಾಲುಗಳು. ಚೆನ್ನಾಗಿದೆ ತಮ್ಮ ಕವನ ಶ್ರ೦ದ್ಧಾ೦ಜಲಿ. ಅಪಘಾತದಲ್ಲಿ ಮಡಿದವರ ಆತ್ಮಕ್ಕೆ ಶಾ೦ತಿ ಸಿಗಲಿ ನೊ೦ದ ಆಪ್ತರಿಗೆ ಅಗಲಿಕೆ ತಡೆಯುವ ಶಕ್ತಿ ದೊರಕಲಿ.

shravana said...

Venu,

It's heart breaking thing to happen in our land. We can just pray as of now. Nice lines..

VENU VINOD said...

ಸುಬ್ರಮಣ್ಯ, ಸುನಾಥ, ದಿನಕರ‍್,ಹರೀಶ್, ಶಿವು, ಸುನಿಲ್, ಗುರು, ಸೀತಾರಾಮ್,ಶ್ರವಣ...ನಿಮ್ಮೆಲ್ಲರ ನೋವು, ಘಟನೆಯ ಬಗ್ಗೆ ಸಹಾನುಭೂತಿ ಹಂಚಿಕೊಂಡಿದ್ದೀರಿ..ವಂದನೆಗಳು

Related Posts Plugin for WordPress, Blogger...