12.4.12
ನನಗೆ ಗತ್ತು ಬಂದಿದೆಯಂತೆ !
ನನಗೆ ಗತ್ತು ಬಂದಿದೆಯಂತೆ
ಹತ್ತಿರದಿಂದ ಬಲ್ಲವರು
ಹಾಗೆ ಹೇಳುತ್ತಾರೆ.
ಇರಬಹುದೋ ಏನೋ!
ನನಗೆ ನನ್ನನ್ನು ಹೊಗಳಿದರೆ
ಖುಷಿಯಾಗುತ್ತದೆ,
ಅದನ್ನು ತೋರಿಸದೆ
ಸುಮ್ಮನೆ ಒಳಗೊಳಗೆ
ಹಿಗ್ಗುತ್ತೇನೆ
ನನ್ನ ಸಹೋದ್ಯೋಗಿಗಳು
ಖುಷಿ ಪಡುವುದು
ಕಂಡು ಹಿಗ್ಗಿದ ಬಲೂನಿಗೆ
ತೂತು ಬೀಳುತ್ತಿರುತ್ತದೆ
ನನಗೆ ಶ್ರೀಮಂತಿಕೆ
ಒಲಿದಿದೆಯಂತೆ
ಬಲ್ಲವರು ಹೇಳುತ್ತಾರೆ
ಇದ್ದರೂ ಇರಬಹುದು
ಬಟ್ಟೆಗಳು ಬಿಗಿಯಾಗುತ್ತವೆ
ಅಷ್ಟೇ ಅಲ್ಲ
ನಗು ಬಹಳ ದುಬಾರಿಯಾಗುತ್ತಿದೆ
ನಾನು ಕನಸಗೋಪುರದಲ್ಲಿ
ವಿಹರಿಸುತ್ತೇನಂತೆ
ಗೊತ್ತಿಲ್ಲ...
ನನ್ನ ಹೊತ್ತು ಕೈ ಗನ್ನಡಿಯೆದುರು
ಕಳೆಯುತ್ತದೆ,
ಬೇರೆಯವರ ಪುಟ್ಟ ಸಾಧನೆಗೆ
ಮೆಚ್ಚುಗೆ ಸೂಸುವುದಕ್ಕೆ ನನಗೆ
ಸಮಯ ಸಿಗುವುದಿಲ್ಲ,
ಸಿಗುವ ಪರಾಕು ಸ್ವೀಕರಿಸುವುರಲ್ಲೇ
ನಾನು ಸಂಭ್ರಮಿಸುತ್ತೇನೆ...
ಹೇಳು ಓ ದೇವರೆ?
ನಾನು ದುಷ್ಟನಲ್ಲ ತಾನೇ!
Labels:
ನವಿರು ಸಾಲು,
ನವಿರುಸಾಲು
Subscribe to:
Post Comments (Atom)
7 comments:
ಚೆನ್ನಾಗಿದೆ :)
nice one
ನಮ್ಮ ಆನಂದ,ಬಿಗುಮಾನಗಳು ನಮ್ಮ ಮಟ್ಟಿಗೆ ಸರಿ...ಇನ್ನೊಬ್ಬರ ದೃಷ್ಟಿಯಲ್ಲಿ ತಪ್ಪಾಗುವಂತೆ ಗೋಚರಿಸುತ್ತದೆ.. ಬಲು ಸರಳ ಸುಂದರಾಗಿ ನಿರೂಪಿಸಿದ ನಿಮ್ಮ ಬಗೆ ನಿಜಕ್ಕೂ ಅದ್ಭುತ....ಇಷ್ಟವಾಯ್ತು,...
ನಿಜಕ್ಕೂ ತುಂಬಾ ಚೆನ್ನಾಗಿವೆ ಸಾಲುಗಳು...
ಇಷ್ಟು ಚೆನ್ನಾಗಿರೋ ಕವನ ಬರೆದಿರೋರು ದುಷ್ಟರಾಗಲು ಸಾಧ್ಯವೆ?
Beautiful lines venu.. that to last line...ಹೇಳು ಓ ದೇವರೆ?
ನಾನು ದುಷ್ಟನಲ್ಲ ತಾನೇ!
-Vikas Negiloni
Post a Comment