ಆದರೆ ಮುಷ್ಟಿಯಲ್ಲಿ ನಿಲ್ಲದ
ನೀರಿನಂತೆ ಹರಿದು ಹೋಗುವ
ಓ ನಲ್ಮೆಯ ಕ್ಷಣವೇ
ನನಗೆ ನೀನು ಒಗಟು
ಎಲ್ಲ ಇದ್ದು ಏನೂ
ಇಲ್ಲದ ಭಾವ ತರುವ
ಭಾರ ಹೃದಯ, ಆರ್ದೃ ಕಂಗಳ
ಕಾಡುವ ಓ ಮನವೇ
ನಿನಗೆ ನಾನು ಕೃತಜ್ಞ
ನಗರದೆಲ್ಲೆಡೆ ದೀಪಗಳು
ಝಗಮಗಿಸಿದರೂ
ನನ್ನ ಕಣ್ಣ ಕೋಣೆಯಲ್ಲಿ
ಇನ್ನೂ ನೆಲೆಸಿರುವ
ಓ ಕತ್ತಲೆಯೇ
ನಾನು ನಿನ್ನಿಂದ ಧನ್ಯ
ಇನ್ನಿಲ್ಲದ ಒತ್ತಡದಲ್ಲೂ
ನನ್ನ ಬೆರಳ ತುದಿಗೆ
ಹರಿದು ಬಂದು ಭಾವದಲೆಯಲ್ಲಿ
ನಲಿದಾಡಿಸುವ
ನಾಲ್ಕು ಅಕ್ಷರಗಳೇ
ನಿಮಗೆ ನಾನು ಚಿರಋಣಿ