13.7.14

ಭಾನುವಾರದ ಲಹರಿಯಲ್ಲಿ....

ಸಿಕ್ಕಿದಂತೆಯೇ ಆಗುವ
ಆದರೆ ಮುಷ್ಟಿಯಲ್ಲಿ ನಿಲ್ಲದ 
ನೀರಿನಂತೆ ಹರಿದು ಹೋಗುವ
ಓ ನಲ್ಮೆಯ ಕ್ಷಣವೇ
ನನಗೆ ನೀನು ಒಗಟು

ಎಲ್ಲ ಇದ್ದು ಏನೂ
ಇಲ್ಲದ ಭಾವ ತರುವ
ಭಾರ ಹೃದಯ, ಆರ್ದೃ ಕಂಗಳ
ಕಾಡುವ ಓ ಮನವೇ 
ನಿನಗೆ ನಾನು ಕೃತಜ್ಞ

ನಗರದೆಲ್ಲೆಡೆ ದೀಪಗಳು
ಝಗಮಗಿಸಿದರೂ 
ನನ್ನ ಕಣ್ಣ ಕೋಣೆಯಲ್ಲಿ 
ಇನ್ನೂ ನೆಲೆಸಿರುವ 
ಓ ಕತ್ತಲೆಯೇ 
ನಾನು ನಿನ್ನಿಂದ ಧನ್ಯ

ಇನ್ನಿಲ್ಲದ ಒತ್ತಡದಲ್ಲೂ
ನನ್ನ ಬೆರಳ ತುದಿಗೆ
ಹರಿದು ಬಂದು ಭಾವದಲೆಯಲ್ಲಿ
ನಲಿದಾಡಿಸುವ
ನಾಲ್ಕು ಅಕ್ಷರಗಳೇ
ನಿಮಗೆ ನಾನು ಚಿರಋಣಿ

3 comments:

Badarinath Palavalli said...

" ನನ್ನ ಕಣ್ಣ ಕೋಣೆಯಲ್ಲಿ
ಇನ್ನೂ ನೆಲೆಸಿರುವ
ಓ ಕತ್ತಲೆಯೇ
ನಾನು ನಿನ್ನಿಂದ ಧನ್ಯ"

ನಮ್ಮ ಹಲವು ಭಾನುವಾರಗಳು ಯಥಾವತ್ತು!

sunaath said...

ಸುಂದರ ಕವನದ ಕವಿಯೆ,
ನಿನಗೆ ಅಬಿನಂದನೆ!

VENU VINOD said...

ಫೇಸ್ ಬುಕ್, ವಾಟ್ಸಪ್ ಯುಗದಲ್ಲೂ ಬ್ಲಾಗಿಗೆ ಭೇಟಿ ಕೊಟ್ಟು ಪ್ರೋತ್ಸಾಹಿಸುತ್ತಿರುವ ಹಿರಿಯ ಸುನಾಥರಿಗೆ ಪಲವಳ್ಳಿಯವರಿಗೆ ವಂದನೆ

Related Posts Plugin for WordPress, Blogger...