ನಿದ್ದೆಯಲ್ಲೂ ಮುಳುಗದೆ
ಇತ್ತ ಎಚ್ಚರವೂ ಆಗಿರದ
ಪ್ರೇಕ್ಷಕರು ಸುತ್ತೆಲ್ಲಾ...
ಎಲ್ಲೋ ದೂರದಲ್ಲಿ ಕೋಳಿ ಕೂಗಲು
ಗಂಟಲು ಸರಿಪಡಿಸುತ್ತಿರುವಾಗ
ಇತ್ತ ನೇಪಥ್ಯದಲ್ಲಿ
ವೇಷ ಕಳಚುತ್ತಿದ್ದಾರೆ!
ಅದೋ ಹೊರಡುವ ಹೊತ್ತಾಗಿದೆ
ರಂಜಿಸಿದ್ದಾಗಿದೆ
ಬೆರಗುಗಣ್ಣಲ್ಲಿ ನೋಡಿದವರ
ರಂಗದಲ್ಲಿ ಬೊಬ್ಬಿರಿದ ರಾವಣ
ರಾಮರಾಜ್ಯ ಕಟ್ಟಲು ಹೊರಟ ರಾಮ
ಅಕ್ಕಪಕ್ಕದಲ್ಲಿ ಕುಳಿತು
ವಾಟ್ಸಪ್ಗೆ ಬಂದ ಸಂದೇಶಗಳ
ಅರಗಿಸಿಕೊಳ್ಳುತ್ತಿದ್ದಾರೆ
ಬಿಲ್ಲು ಬಾಣ ಗದೆಗಳು
ರಿಲ್ಯಾಕ್ಸ್ ಆಗಿವೆ!
ಪಥ್ಯವಾಗದಿದ್ದರೂ
ನೋಡಿ ಬಿಡಿ ಒಮ್ಮೆ
ಕತ್ತಿ ಝಳಪಿಸಿದವರೂ ಕಾದಿ ಬಳಲಿದವರೂ,
ಇದ್ದಾರೆ ಅಲ್ಲಿ
ರಂಗದ ಮೇಲೆ ಕಂಡದ್ದೇ ಸತ್ಯವಲ್ಲ
ನೇಪಥ್ಯದಲ್ಲೂ ಇದೆ ತತ್ವ
ನಾಳೆ ಮತ್ತೆ ಕಿರೀಟ ಧಾರಣೆ
ಖಡ್ಗ ಒರೆಯಿಂದ ಹೊರಗೆ
ಭೀಷಣ ಭಾಷಣ,
ಪ್ರಜೆಗಳ ರಕ್ಷಣೆ
ಬಗ್ಗೆ
ಮುಗಿಯದ ಕಥೆ
ಇನ್ನೂ ಇದೆ!
pic courtesy: yakshachaya.blogspot.com
6 comments:
Super sir..
ಎಂದೂ ಬಿಚ್ಚದ ವೇಷ..
ಮೈಗೇ ಹಿಡಿಯದ ಬಣ್ಣ..
ಮೊಗೇರರೇ ಧನ್ಯವಾದಗಳು..
ಮೊಗೇರರೇ ಧನ್ಯವಾದಗಳು..
ಅಭಿನಂದನೆ ಚೆನ್ನಾಗಿದೆ
ವೇಷಧಾರಿಗಳ ವೇಷವನ್ನು ನೀವು ಸರಿಯಾಗಿ ಕಳಚಿದ್ದೀರಿ!
thanks good post ♥
Post a Comment