13.10.06

ಹುಡುಕಾಟ

ಕವಿತೆಗಾಗಿ ಹುಡುಕಾಡಿದೆ
ಕತ್ತಲ ಮರೆಯಲ್ಲಿ
ಬೆಂಕಿಯ ಮುಂದೆ ಧಗಧಗ
ಕೆಂಡಗಳ ಕೆದಕಿ
ಕವಿತೆ ಸಿಗಲಿಲ್ಲ!

ಕೊಳದಲ್ಲಿ ಮುಳುಗೆದ್ದೆ
ಬದಿಯ ಹುಲ್ಲಲ್ಲಿ
ಮನಸೋ‌ಇಚ್ಛೆ
ಉರುಳಾಡಿದೆ
ಕವಿತೆ ಕಂಡುಬರಲಿಲ್ಲ

ರಾತ್ರಿಪೂರಾ ಕುಳಿತು
ಪದ ಪೋಣಿಸುತ್ತಲಿದ್ದೆ
ನನ್ನಷ್ಟಕ್ಕೇ ಗುನುಗುಟ್ಟಿದೆ
ಆದರೂ ಕವಿತೆ ಎನಿಸಲಿಲ್ಲ

ಕಾಡಿನಮಧ್ಯೆ
ಜಲಪಾತದ
ಮುಂದೆ ಕುಳಿತು
ನಿದ್ದೆ ಬಂತೇ ಹೊರತು
ಕವಿತೆ ನನ್ನತ್ತ ಸುಳಿಯಲಿಲ್ಲ

ತುಂಬು ಮಬ್ಬಿನ
ಪಬ್ಬುಗಳಲ್ಲಿ
ತೂರಾಡಿದರೂ ಕವಿತೆ
ಕಣ್ಣೆತ್ತಿ ನೋಡಲಿಲ್ಲ

ಆಸ್ಪತ್ರೆ ವಾರ್ಡ್‌ಗಳಲ್ಲಿ
ನೋವೇ ತುಂಬಿದ
ಕೋಣೆಗಳಲ್ಲಿ,
ವೃದ್ಧರ ಕಣ್ಣಾಲಿಗಳಲ್ಲಿ
ಹೊಕ್ಕುಹೊರಬಂದೆ

ನಡೆಯುತ್ತಾ ಹೋದೆ
ಹಿಂದೆಯೇ ಕವಿತೆ
ಹರಿದು ಬಂದಳು ಕೊನೆಗೆ

10 comments:

ರಾಜೇಶ್ ನಾಯ್ಕ said...

ವೇಣು... 'ಕವಿತೆ'ಯ ಬಗ್ಗೆ ಕವಿತೆ ಉತ್ತಮ. ತುಂಬಾ ಹಿಡಿಸಿತು.

Soni said...

Hi Venu....Sakkath kavithe...konegu bandlalla :-)

bhadra said...

ಬಹಳ ಚಂದದ ಕವನ. ಮರಾಠಿಯಲ್ಲೊಂದು ಇದೇ ತರಹದ ಕವನ 'ವಿಸರಲೇ ಆಹೆ' ಅಂತ ಓದಿದ್ದೆ.

ಇದೀಗ ತಾನೆ ನಿಮ್ಮ ಆಂಗ್ಲದ ಬ್ಲಾಗನ್ನು ನೋಡಿ ಬಂದೆ. ಕನ್ನಡದ ಬ್ಲಾಗನ್ನ್ನು ನೋಡಿ ನನ್ನ ಮನ ತಣಿಯಿತು. ಒಳ್ಳೆಯ ಕೆಲಸ ಅನವರತ ಮುಂದುವರೆಯಲಿ.

Deepa Bhasthi said...

nice very nice, especially the last lines. i have always felt that the best lines comes out through pain.

VENU VINOD said...

@rajesh,
thank you, keep visiting.
@Soni,
DhanyavadagaLu. nOviddalli kavithe bandE barthaLe.
@Srinivas,
nanna kannada, english eradU blaggigu nimage hArdika swagata. protsahakke dhanya. agaGGe barithiri
@deepa,
Thanks, i totally agree with you

Shiv said...

ವೇಣು,

ಕವಿತೆ ಬರಲಿಲ್ಲ ಬರಲಿಲ್ಲ ಅಂತಾ ಹೇಳುತ್ತಲೆ ಸುಂದರವಾದ ಕವಿತೆಯನ್ನು ಪೋಣಿಸಿದ್ದೀರಾ !

ಇಷ್ಟ ಆಯಿತು ನಿಮ್ಮ ಕವಿತೆ..

VENU VINOD said...

SHIVA,
Thanks kanri. nanna putakke swagata. agaga bartha iri.

ಪಬ್ said...

ನೀವ್ಯಾವಾಗ್ರಿ ಪಬ್ಬಿಗೆ ಬಂದಿದ್ದು? ನನ್ ಕಣ್ಣಿಗೆ ಬೀಳ್ಲೇ ಇಲ್ಲ. ಪಬ್ಬಲ್ಲಿ ಕವಿತೆ ಸಿಗ್ತಾಳಂತ ನಿಮಗ್ಯಾರ್ರಿ ಹೇಳಿದ್ದು? ನಾನು ದಿನಾ ಅಲ್ಲೇ ಕುಂತಿರ್ತೀನಿ. ನಂಗೆ ಈ ತನಕ ಕವಿತ ಅನ್ನೋ ಹುಡ್ಗಿ ಅಲ್ಲಿ ಸಿಕ್ಕಿಲ್ಲ. ಯಾವಾಗ್ಲೋ ಒಮ್ಮೆ ಬರೋ ನಿಮ್ಗೆ ಸಿಕ್ಬಿಡ್ತಾಳಾ?

-ಪಬ್

VENU VINOD said...

swami pubbigare,
neevu kavithange alli kayta iddeera?!
nangu alli siglilla, sumne nodoke antha bande ashte:)
welcome to my blog

Unknown said...

thumba jeevanta padagala balake ishta aythu simply superb kanri

Related Posts Plugin for WordPress, Blogger...