26.9.06

ಕರಾಳ ರಾತ್ರಿಯಲ್ಲಿ!

ನಡುರಾತ್ರಿ ಪೇಟೆಗೆ ಪೇಟೆಯೇ
ಥರಗುಟ್ಟುತ್ತಿದೆ ಛಳಿಗೆ
ಒಂದೆರಡು
ಬರಡು ಮರಗಳೂ
ತೊಯ್ದು ಹೋಗಿವೆ
ಸುರಿವ ಮಂಜಿಗೆ

ಅದೋ ಅಲ್ಲಿ...
ಆ ಸೋಮಾರಿಗಳ ಕಟ್ಟೆಯಲ್ಲಿ
ನಾಯಿಮರಿಯೊಂದು
ಕುಕ್ಕರಕುಳಿತಿದೆ
ಕುಂಯ್ಗುಡುತ್ತಿದೆ..
ಪಾಪ,
ಛಳಿಯೋ, ಹಸಿವಾಗಿದೆಯೋ
ಅಥವಾ
ಮೊನ್ನೆ ಅಂಗಡಿಯಾತ
ಬಾರುಕೋಲಿನಿಂದ
ಬಾರಿಸಿದ ಗಾಯದ
ವ್ರಣವೋ..
ಕೇಳುವವರ್ಯಾರಿಲ್ಲ
ಅಲ್ಲಿ..

ಅಂಥ ಕರಾಳ ಛಳಿ, ಗಾಢ ರಾತ್ರಿಯದು

ಮನೆಯೊಳಗೆ ತೊಟ್ಟಿಲಲ್ಲಿ
ದಿವ್ಯನಗುತೊಟ್ಟು
ಮಲಗಿದೆ ಮಗು
ಅದರ ತಾಯಿ ಅಲ್ಲೆ ಕೆಳಗೆ
ಮಲಗಿ ಭವಿಷ್ಯದ ಕನಸುಕಾಣುತ್ತಿದ್ದಾಳೆ
ಯಜಮಾನನೂ ಚಾಪೆಯಲ್ಲಿ
ಹೊರಳುತ್ತಿದ್ದಾನೆ, ಬಹುಷ:
ಪತ್ನಿಯ ಆಪರೇಶನ್ನಿಗೆ ಮಾಡಿದ
ಸಾಲ ಬಾಕಿ ನೆನಪಾಗಿರಬೇಕು

ಈಗ ನಾಯಿಮರಿಯ ಕೂಗು
ತಾರಕಕ್ಕೆ ಏರಿದೆ.
ನರಕವೇ ಧರೆಗೆ ಬಿದ್ದಂತೆ
ಕಿರಿಚುತ್ತಿದೆ..
ಯಜಮಾನ ಎದ್ದಿದ್ದಾನೆ,
ಏನೋ ಗೊಣಗುತ್ತಾನೆ, ಈಗ
ನಿದ್ದೆ ಹಾಳಾಗಿದ್ದಕ್ಕೆ
ಥತ್‌!
ನಿದ್ರಿಸಲೂ ಬಿಡುವುದಿಲ್ಲ
ಕೆಟ್ಟಪ್ರಾಣಿ.
ಬಾಗಿಲು ತೆರೆದು ಹೊರಗೆ
ಬಕೆಟ್ಟಿನಲ್ಲಿರುವ
ಬರ್ಫದಂಥ ಕೊರೆಯುವ
ನೀರನ್ನು ನಾಯಿಮರಿಯ
ಮೇಲೆ ಸುರಿಯುತ್ತಾನೆ.
ನಾಯಿ ಮುಲುಗುತ್ತಾ
ಓಡತೊಡಗಿದೆ ಈಗ..
ಎಲ್ಲಗೋ ಗೊತ್ತಿಲ್ಲ..

ಇನ್ನೂ ಪೇಟೆಯಲ್ಲಿ
ಛಳಿಯ ತೆರೆ ಸರಿದಿಲ್ಲ...

8 comments:

Pramod P T said...

ನಮಸ್ಕಾರ..ವೇಣು ಅವರಿಗೆ,
ವಂದನೆಗಳು..ನಿಮ್ಮ comment-ಗೆ...
ನಿಮ್ಮ ಎಲ್ಲ ಕವನ ಮತ್ತು ಲೇಖನಗಳನ್ನ ಓದಿದೆ.
ಎಲ್ಲವೂ ತುಂಬಾನೆ ಚೆನ್ನಾಗಿದೆ!
ಎಲ್ಲಕ್ಕಿಂತ ಮುಖ್ಯವಾಗಿ ನನಗೆ ಖುಶಿ ನೀಡಿದ್ದು ನಿಮ್ಮ blog-ನ tittle.
ಮುಂದುವರೆಯಲಿ....

reborn said...

Do you write for some magazines too ? if not , U should I feel.They need to be published out side the blog too ..

ರಾಜೇಶ್ ನಾಯ್ಕ said...

as pramod p t said, 'munduvareyali'....

Anveshi said...

ನಟ್ಟಿರುಳ ರಾತ್ರಿಯಲ್ಲಿ...
ಮಂಜು ಮುಸುಕಿದ ದಾರಿಯಲ್ಲಿ...
ಹೋಗಿ
ಹೋಗಿ
ಹೋಗಿ
ಹೋಗಿ
ಧಢಾಲ್ಲನೆ ಸದ್ದು ಕೇಳಿದ್ದು ಕೇಳಿಸಲಿಲ್ಲವೇ?

ಅದುವೇ ಸ್ವಾಮಿ
ನಾನು ಜಾರಿ ಬಿದ್ದದ್ದು...!!!! :)

ಕಥಾ-ಕವನ ಚೆನ್ನಾಗಿದೆ.

VENU VINOD said...

pramod, welcome to my blog. thanks for appreciation, keep visiting.

reborn, good advice, but i fear whether my writings qualify for magazines. anyway thanks for visiting

rajesh naik, munduvarisuve:)

asatyanweshi, welcome to my blog. dadhallane bidda novu kadame ayithe? :)

ಮನಸ್ವಿನಿ said...

ಚೆನ್ನಾಗಿದೆ. ಮುಂದುವರಿಯಲಿ

VENU VINOD said...

manaswini,
DhanyavadagaLu, prayatnisuttene

ಶ್ರೀನಿಧಿ.ಡಿ.ಎಸ್ said...

Chennagi bareyutteeri.

Related Posts Plugin for WordPress, Blogger...