20.1.07

ನನ್ನ ಕಲ್ಪನಾ!!!

ಮನ ಮೃದು...
ಮಂದಸ್ಮಿತೆ...
ಮಧುರಭಾಷಿಣಿ
ಹುಚ್ಚೆಬ್ಬಿಸುವ ಪರಿಮಳವಲ್ಲ
ಪಾರಿಜಾತದ ನಸುಗಂಪು..

ಆಕಾಶಕ್ಕೇಣಿ ಇಟ್ಟಾಕೆ
ಬಣ್ಣಗಳ ಮೀರಿ ನಿಂದಾಕೆ..
ನೀಲಿ ಕಂಗಳ ತುಂಬ
ಕನಸುಕಾಣುವಾಕೆ
ಹೃದಯದ ಆಳಕ್ಕಿಳಿದು
ಈಜುತ್ತಾಳೆ!

ಹಸಿರು ಸೀರೆಯ ನೀರೆ
ನೇರನುಡಿಯ ಧೀರೆ
ಮೆಲುವಾಗಿ
ಹಾಡಿದರೆ
ಅರಳೀತು ಕೆಂದಾವರೆ!

4 comments:

Chevar said...

Nanna kalpanaaa!!!!

Gud poem. As you said am ready to start writing in Kannada.Wait for that.

ರಾಧಾಕೃಷ್ಣ ಆನೆಗುಂಡಿ. said...

ಯಾರಿಗೊತ್ತು ಕಲ್ಪನ( ಕಲ್ಪನೆ)... ಹೂ ಕವಿತೆಯಾಗುತ್ತದೆ. ಹುಡುಗಿನೂ ಕವಿತೆಯಾಗುತ್ತಾಳೆ. ಹುಡುಗಿ ಹೂವಾಗುತ್ತಾಳೆ. ಹೂ ಹುಡುಗಿಯಾದರೆ ಅಚ್ಚರಿಯಿಲ್ಲ. ಎಡ್ಡೆ ಬರೆಪರ್ ಬುಡ್ಲೆ.
ರಾಧಾ ಆನೆಗುಂಡಿ

ಶ್ರೀನಿಧಿ.ಡಿ.ಎಸ್ said...

ನವಿರು ಬರಹ, ಭಾರಿ ಶೋಕುಂಡು!!

VENU VINOD said...

ಮಹೇಶ್, ಆನೆಗುಂಡಿ, ಶ್ರೀನಿಧಿ,
ನಿಕ್ಲು ಮಾತೆರೆಗ್ಲಾ ಸೊಲ್ಮೆಲು. ಬರೋಮದಿಪ್ಪುಲೆ!

Related Posts Plugin for WordPress, Blogger...