14.2.07

ಬಾರೆ, ಬರಸೆಳೆಯೆ!

ಮಾತಿಲ್ಲದೇ ಮೌನದ
ಗುಹೆ ಹೊಕ್ಕು ಕುಳಿತವಳೆ
ನವಿರು ಹಾಸ್ಯಕ್ಕೂ
ಮುಖವೂದಿಸಿದವಳೆ
ಬಾರೆ, ಬರಸೆಳೆಯೆ!

ಗದ್ದೆಹಾದಿಯುದ್ದಕ್ಕೂ
ಬಿಸಿಯುಸಿರು ಬಿತ್ತಿರುವೆ,
ಜಡೆಯೆಳೆದವನ
ಕಡೆಗೊಂದು ಬಿರುನೋಟ ಬೇರೆ!

ಆಕಾಶದಗಲಕ್ಕು
ದಟ್ಟೈಸಿದೆ ಮುಗಿಲು,
ನಿನ್ನ ಕಂಗಳಾಗಸದಲ್ಲು
ಸಿಡಿಯುತಿದೆ ಸಿಡಿಲು
ಸಾಕಿನ್ನು ಹುಸಿಗೋಪ
ಸಾಕುಮಾಡಿನ್ನು

(ಗಾಢವಾಗಿ ಪ್ರೇಮಿಸುವ ಪ್ರೇಮಿಗಳಿಗಾಗಿ !)

7 comments:

ಜಯಂತ ಬಾಬು said...

ವಿನೋದ್..

ಮನದಟ್ಟುವ ಕವನ..ನಿಮ್ಮ ಬ್ಲಾಗ್ ಚೆನ್ನಾಗಿದೆ..ಕವನಗಳು ಸೂಪರ್...

Shiv said...

ವೇಣು,

>>ಗದ್ದೆಹಾದಿಯುದ್ದಕ್ಕೂ
ಬಿಸಿಯುಸಿರು ಬಿತ್ತಿರುವೆ

ಬಿತ್ತಿದ್ದನ್ನು ಬೆಳೆ ಅಂತಾರೆ..ಸೋ ನೀವು ಬೆಳದದ್ದು ಎನು :)

ಅಂದಾಗೆ ಆ ಜಡೆ ಹುಡುಗಿ ಮುಖವೂದಿಸಿದ್ದಕ್ಕೆ..ನೀವು ಜಡೆ ಎಳೆದೆದಕ್ಕಾ..

mouna said...

i liked the first few lines and the last stanza, beautiful!

Shree said...

ಕೊನೆಗೂ ಬ೦ದ್ಲಾ ವಾಪಸ್ ಕೋಪ ಬಿಟ್ಟು? :-)

VENU VINOD said...

ಜಯಂತ,
ನನ್ನ ಪುಟಕ್ಕೆ ಸುಸ್ವಾಗತ, ಶ್ಲಾಘನೆಗೆ ವಂದನೆ

ಶಿವ,
ನಾನು ಜಡೆ ಎಳೆದಾಗ ಆಕೆಯಿಂದ ತಪರಾಕಿ ಸಿಕ್ತು. ತಡಬಡಿಸಿದಾಗ ನಿದ್ದೆಯಿಂದ ಎಚ್ಚರವಾಯ್ತು! ಇದು ಕಲ್ಪನೆ ಮಾತ್ರಾ ಸರ್‍:)

ಮೌನ,
ಮೆಚ್ಚುಗೆಯ ನುಡಿಗೆ ಧ.ವಾ, ಆಗಾಗ್ಗೆ ಬರುತ್ತಿರಿ

ಶ್ರೀ,
ಇನ್ನೂ ಬಂದೇ ಇಲ್ಲ. ಹೋಗೇ ಬಿಟ್ಲು:(
ನಿಮ್ಮ ಕಳಕಳಿಗೆ ಧನ್ಯೋಸ್ಮಿ :)ಬ್ಲಾಗ್‌ಗೆ ಸ್ವಾಗತ

Jagali bhaagavata said...

ಸುಂದರ ಕವನ. ನವಿರಾಗಿದೆ.

ನಿಮ್ಮಾಕೆ ಬರಸೆಳೆದಳೆ?
ಗುಹೆ ತೊರೆದು ಬಂದಳೆ?
ಪ್ರೀತಿಯ ಮಳೆ ಸುರಿಯಿತೆ
ಗುಡುಗು ಸಿಡಿಲಿನ ನಂತರ?

VENU VINOD said...

ಭಾಗವತರೇ,
ನೀವು ಕೇಳಿದ ಹಾಗೆ ಏನೂ ಆಗಲಿಲ್ಲ.
ನನ್ನ ಬ್ಲಾಗ್‌ಗೆ ಸ್ವಾಗತ, ಬರುತ್ತಿರಿ

Related Posts Plugin for WordPress, Blogger...