3.6.07

ಎರಡು ಅಸಂಬದ್ಧ ಪ್ರಲಾಪಗಳು



ಪ್ರಲಾಪ ೧

ಬಾವಿಯೊಂದಿಗೆ
ಹಗ್ಗಕ್ಕೆ ಗಾಢ ಸ್ನೇಹ...
ಅದಕ್ಕೆ ಇರಬಹುದು
ಬಾವಿಗೆ ಹಾರುವವರನ್ನು
ಹಗ್ಗ
ಕುಣಿಕೆಗೆ ಕೊರಳೊಡ್ಡುವವರನ್ನು
ಬಾವಿ ತಡೆಯುವುದಿಲ್ಲ?!









ಪ್ರಲಾಪ ೨
ಸಂಜೆಯಾಗುತ್ತಲೇ
ಈ ಬೀಚಿನಲ್ಲಿ ನಡೆಯುವ
ವ್ಯವಹಾರ-ಅವ್ಯವಹಾರ
ನೋಡಲು ನಾಚಿಕೆಯಾಗಿ
ದಿಗಂತದಂಚಿಗೆ
ಸರಿಯುವ
ಈ ಸೂರ್ಯ
ಮತ್ತೆ
ಬೆಳಗ್ಗೆ ತಿರುಗಾ
ಬರುವುದೇತಕ್ಕೆ?

8 comments:

ಸಿಂಧು sindhu said...

ನಿಮ್ಮ ಎರಡನೇ ಪ್ರಲಾಪದ ಬಗ್ಗೆ..

ಇವತ್ತು ಹಾಗಿಲ್ಲದಿರಬಹುದು,
ನನಗೆ ನಾಚಿಕೆಯಾಗದಿರಬಹುದು,
ಎಂಬ,
ಒಳ್ಳೆಯತನದಲ್ಲಿ ಇರುವ ನಿತ್ಯನೂತನ ನಂಬಿಕೆಯಿಂದ..

ಇರಬಹುದು ಅಂತ ನನಗನ್ನಿಸುತ್ತದೆ.

VENU VINOD said...

ಸಿಂಧು,
ಶಕ್ತಿವಂತನಾದ ಸೂರ್ಯನಿಗೆ ಅಂಥದ್ದೊಂದು ಧನಾತ್ಮಕ ಯೋಚನೆ ಬರಬಹುದೆನ್ನುವ ಕಿಂಚಿತ್ ಆಲೋಚನೆ ಬರ್‍ಲೇ ಇಲ್ಲ ನೋಡಿ:)
ಆಗಾಗ ಬರ್‍ತಾ ಇರಿ.

ರಾಜೇಶ್ ನಾಯ್ಕ said...

ಅಸಂಬದ್ಧ? ನನಗೆ ಹಾಗೆನಿಸಲಿಲ್ಲವಲ್ಲ.....

Anonymous said...

ತಿರುಗಾ ಬೆಳಿಗ್ಗೆ ನಾವೂ ಹೋಗುತ್ತೇವಲ್ಲ...

ಸೂರ್ಯನಿಗಾಗಿ!!


ಅಸೂಯೆಯಾಗುವಷ್ಟು ಚೆನ್ನಾಗಿದೆ ನಿಮ್ಮ ಬ್ಲಾಗ್. ಲಿಂಕ್ ಹಾಕಿಕೊಂಡಿದ್ದೇನೆ, ಮತ್ತೆ ಮತ್ತೆ ಬರಲು...

PRAVINA KUMAR.S said...

ವೇಣು ಸಾರ್.. ಅಸಂಬದ್ಧ ಪ್ರಲಾಪಗಳನ್ನು ಸಕತ್ ಆಗಿ ಗುರುತಿಸಿದ್ದೀರಿ. ಜತೆಗೆ ಚಿತ್ರಗಳು ಸೂಪರ್...

Anveshi said...

ವೇಣು ಅವರೆ,
ನಿಮ್ಮ ಎರಡನೇ ಪ್ರಲಾಪಕ್ಕೆ ಈಗಿನ ದಿನಗಳಲ್ಲಿ ಸಂಜೆಯಾಗಲೇಬೇಕಿಲ್ಲ ಎಂಬ ಸತ್ಯವು ಆ ಸೂರ್ಯನಾರಾಯಣನಿಗೂ ಅರಿವಾಗಿದೆ. ಅದಕ್ಕಾಗಿಯೇ ಆತ ತಲೆಕೆಡಿಸಿಕೊಳ್ಳದೆ ಮತ್ತೆ ಮತ್ತೆ ಬರುತ್ತಾ ಇರುತ್ತಾನೆ...!!!

ಜಯಂತ ಬಾಬು said...

ತಪ್ಪು ಅನಿಸಿದ್ದನ್ನ..ಮತ್ತೆ ಮತ್ತೆ ಮಾಡೋ..ವಿವೇಕ,ನಮಗೆ.. ಯಾರಿಂದ ಸಿಕ್ತ ಇದೆ ಅಂತ ಸ್ವಲ್ಪ ಅರ್ಥ ಆಗ್ತ ಇದೆ [:)]

Susheel Sandeep said...

ಹಗ್ಗ ಬಾವಿಯ ಕೋ-'ಆಪರೇಶನ್'! - ಸಖತ್ ಯೋಚನೆ!
ಪಾಪ ಸೂರ್ಯ..ಇನ್ನೆಲ್ಲಿಗ್ ಹೋಗ್ತಾನೆ...ಅವನ ಈ ಅಸಹಾಯಕತೆ ಕಂಡೇ ನಾವುಗಳೂ ಬಂಡುಬಿದ್ದೋಗಿದೀವಿ ಬಿಡಿ!

ನಿಮ್ಮನೆ ಅಡ್ರೆಸ್ ನಮ್ಮನೇ ಗೋಡೆ ಮೇಲ್ ಬರೆದಿದೀನಿ ಆಗಾಗ ಬಂದುಹೋಗೋಕೆ...:)

Related Posts Plugin for WordPress, Blogger...