29.5.07

ಆಸರೆ

ಮುಂಗಾರು ಮಳೆಗೆ
ಗುಡುಗು ಬೊಬ್ಬಿರಿದಾಗ
ಸಿಡಿಲು ಕೋರೈಸಿದಾಗ
ಭೂಗರ್ಭದಲ್ಲೊಂದು
ಸಂಚಲನ...
ಒಣಗಿ ಬಿದ್ದಿದ್ದ
ಬೀಜಕ್ಕೆ ಜೀವಾಂಕುರ...
ಒಡೆದ ಕವಚ, ಮೆಲ್ಲನೆ
ಹೊರಕ್ಕಿಣುಕಿದ
ಪುಟ್ಟ ಎರಡೆಲೆ
ಇಡೀ ಪ್ರಪಂಚದ
ಅಚ್ಚರಿಯಷ್ಟನ್ನೂ
ಕಣ್ಣಲ್ಲಿ ತುಂಬಿಕೊಂಡಂತೆ


ಗಿಡಕ್ಕೆ ಗೊತ್ತಿಲ್ಲ
ತಾನು ಮರದ
ಅಡಿಯಲ್ಲಿರುವೆ ಎಂದು
ಅಲ್ಲಿ ಸಾಕಷ್ಟು ನೆರಳಿದೆ
ಆದರೂ ಗಿಡಕ್ಕೆ
ಉಸಿರುಗಟ್ಟಬಹುದು
ಹಸಿರೆಲೆಗಳ
ರುಚಿನೋಡಬಯಸುವ
ದವಡೆಗಳಿಂದ
ರಕ್ಷಿಸಿಕೊಂಡು ಬೆಳೆಯಬೇಕಿದೆ

ತನಗೆ ಆಸರೆ ನೀಡಿರುವ
ಮರ ಒಣಗಿದಾಗಲೇ
ಗಿಡಕ್ಕೆ ಸರಿಯಾಗಿ
ದೇಶ ನೋಡುವ ಭಾಗ್ಯ!

5 comments:

ರಾಜೇಶ್ ನಾಯ್ಕ said...

ಅಮ್ಮನ ನೆರಳಿನಲ್ಲಿ ಬೆಳೆಯುವ ಮಗುವಂತಿದೆ ಈ ಪುಟ್ಟ ಗಿಡಕ್ಕೆ 'ಆಸರೆ' ನೀಡುವ ಮರದ ನೆರಳು.

ಪ್ರವೀಣ್ ಮಾವಿನಸರ said...

super................

jagadeesh sampalli said...

Sensing the fragrance of soil after the first rain is like a life giving inspiration. Its a rare experience one can get before the on set of monsoon. But in Mangalore, I get only fish smell and nothing else.

ಜಯಂತ್ said...

ಬೀಜ-ಮರ ಕವನ ನೆನಪಿಗೆ ತರಿಸಿತು ಈ ಕವಿತೆ.....ಸೊಗಸಾಗಿದೆ

mouna said...

i liked the first stanza. oNagida beeja dinda jeevankura vagalu maLeyu sahakarisuvudhu, beautiful!! :)

Related Posts Plugin for WordPress, Blogger...