ಮಂಜಲ್ಲಿ ತೊಯ್ದ
ಗಿಡಗಳು
ತೆಕ್ಕೆಯಲ್ಲಿ ಹಾಯಾಗಿ
ಮಲಗಿದ್ದರೂ,
ಪ್ರೀತಿ ತೋರಿಸದೆ
ತಣ್ಣನೆ ಭಾವನಾರಹಿತವಾಗಿ
ಉರುಳಿಹೋಗುತ್ತವೆ
ಈ ರಾತ್ರಿಗಳಿಗೇನು ಧಾಡಿ?
ವಿರಹಿಗಳ ನೋವು
ನರಳಿಕೆಯ ಕಾವು
ನವವಿವಾಹಿತರ
ಬಿಸುಪು, ಪ್ರೇಮಿಗಳ
ಕನವರಿಕೆ
ಎಲ್ಲವನ್ನೂ ನೀವಾಳಿಸಿ
ಎಸೆಯುವಂತೆ
ಬಣ್ಣಗೆಟ್ಟ ರಾತ್ರಿಗಳು
ಮುಗಿದುಬಿಡುತ್ತಿವೆ!
ಕನಿಷ್ಠ ಚಂದಿರನಾದರೂ
ಅಂಧಕಾರದ ರಾತ್ರಿಗಳಿಗೆ
ಬಣ್ಣಕೊಡುತ್ತಿದ್ದರೆ
ಚೆನ್ನಾಗಿರುತ್ತಿತ್ತು
ಭಾವರಹಿತರಾತ್ರಿಗಳಿಗೆ
ಒಂದಷ್ಟು ಅರ್ಥಸಿಗುತ್ತಿತ್ತು
ಚಂದಿರನನ್ನೂ
ಹದಿನೈದು ದಿನಕ್ಕೇ
ಓಡಿಸುವ ರಾತ್ರಿಗಳಿಗೆ
ಅದೆಷ್ಟು ಅಹಂಕಾರ?
1 comment:
ಕವಿತೆ ಚೆನ್ನಾಗಿದೆ. ಚಿತ್ರವಂತೂ ಸೂಪರ್. ಕೊನೆಯ ಚರಣ ಬಹಳ ಹಿಡಿಸಿತು.
Post a Comment