ಕಲ್ಪನೆಯೆಂಬ ಪೆಡಂಭೂತಕ್ಕೆ
ತಲೆ, ಕೈಕಾಲು
ಕಣ್ಣು, ಮೂಗು ಯಾವುದೂ ಇಲ್ಲ
ಆದರೂ, ಕಲ್ಪನೆ
ಹೆದರಿಸಿಬಿಡುತ್ತದೆ
ಬ್ರಹ್ಮರಕ್ಕಸನಿಗಾದರೂ
ವಿಕರಾಳ ಮುಖ,
ಉದ್ದುದ್ದ ಉಗುರು
ಕೋರೆ ಹಲ್ಲು ಇರುತ್ತದಂತೆ
ಅದಕ್ಕಾದರೂ ಬೆದರದೇ ಇರಬಹುದು
ಆದರೆ
ಕಲ್ಪನೆ ಎದೆ ನಡುಗಿಸಿಬಿಡುತ್ತದೆ
ಕಲ್ಪನೆಗೆ ಆದಿ ಅಂತ್ಯ ಇಲ್ಲ
ಹುಡುಗಿಯ ಸುಂದರ
ಜಡೆ ಕಾಳಸರ್ಪವಾಗುತ್ತದೆ
ನಳನಳಿಸುವ ಹೂಗಳೆಲ್ಲ
ಭಗ್ಗನೆ ಉರಿದು ಕೆನ್ನಾಲಿಗೆ
ನಲಿಯಬಹುದು!
ತಣ್ಣನೆ ಮಲಗಿದ ಸರೋವರ-
-ದ ಗರ್ಭದಿಂದ ಸುನಾಮಿ
ಎದ್ದು ಬರಬಹುದು.
ಅದಕ್ಕೇ ಕಲ್ಪನೆಗೆ
ಹೆದರುತ್ತೇನೆ ನಾನು
5 comments:
odugaru hedaralla bidi !
ಅರಳುವ ಕಲ್ಪನೆಗಳೂ ಕೆಲವಿರುತ್ತವೆ..
ಕವಿತೆ ಚೆನ್ನಾಗಿದೆ.
ನಾಯಕರ ಬ್ಲಾಗ್ ಇನಿಷಿಯೇಟ್ ಮಾಡಿದ್ದಕ್ಕೆ ತುಂಬ ಥ್ಯಾಂಕ್ಸ್.
ಪ್ರೀತಿಯಿಂದ
ಸಿಂಧು
ಬರಿಯ ಕಲ್ಪನೆಗೇ ಹೆದರುತ್ತೀರಿ ಹಾಗಿದ್ರೆ... ದುಃಸ್ವಪ್ನಗಳಿಗೆ ವೇಣು ಗೋವಿಂದ!!!
ಸುಧನ್ವ
ಅಷ್ಟಿದ್ರೆ ಸಾಕು :)
ಸಿಂಧು,
ಅರಳುವ ಕಲ್ಪನೆ ಬಗ್ಗೆ ಇನ್ನೊಮ್ಮೆ ಬರೆಯೋಣ:)
ಕಮೆಂಟಿಸಿದ್ದಕ್ಕೆ ವಂದನೆ
ವೀ ಮನಸ್ಸಿನ ಮಾತು,
ಸುಸ್ವಪ್ನ, ದುಃಸ್ವಪ್ನಗಳೂ ಒಂಥರಾ ಕಲ್ಪನೆಗಳೇ ತಾನೇ? ಬರುತ್ತಿರಿ
'ಕಲ್ಪನೆ' ಚೆನ್ನಾಗಿದೆ
Post a Comment