28.10.07

ನಾವ್ಯಾಕೆ ಹಿಂಗೆ?

ಎಲ್ಲಿಂದಲೋ ಬಂದವರು ನಮ್ಮ ಮನಸೊಳಗೆ ಜಾಗ ಪಡೆದುಬಿಡುತ್ತಾರೆ, ಇನ್ನು ಕೆಲವರು ನಮ್ಮ ನಡುವೆಯೇ ಇದ್ದೋರೂ ಅಪರಿಚಿತರಾಗುತ್ತಾರೆ! ಅದೂ ಭಾಷೆಯ ಕಾರಣದಿಂದ.
ಅಲ್ಲಿಲ್ಲಿ ನೋಡಿದಾಗ, ಕೇಳಿದಾಗ ನಂಗೆ ಕಂಡುಬಂದದ್ದಿದು.
ಯು೨ ಚಾನೆಲ್ಲಿನ ನಿರೂಪಕರು ಕನ್ನಡ ಬಾರದೆ, ಕಷ್ಟಪಟ್ಟು ಆಂಗ್ಲಮಿಶ್ರಿತ ಕನ್ನಡದಲ್ಲಿ ಮಾತನಾಡುವುದೇ ತಮಗೆ ಹೆಮ್ಮೆ ಎಂದುಕೊಳ್ಳುತ್ತಾರೆ. ಆದ್ರೆ ಭಾನುವಾರ ರಾತ್ರಿ ‘ಎದೆತುಂಬಿ ಹಾಡಿದೆನು’ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುವ ತೆಲುಗುಮೂಲದ ಆದರೆ ಕನ್ನಡದ ಹೆಮ್ಮೆಯ ಗಾಯಕ ಎಸ್ಪಿ ಬಾಲಸುಬ್ರಹ್ಮಣ್ಯಂ ಕನ್ನಡ ಓದಲು ಬರದಿದ್ದರೂ ಅದೆಷ್ಟು ಚೆನ್ನಾಗಿ ಆದಷ್ಟು ಶುದ್ಧವಾಗಿ ಕನ್ನಡ ಮಾತನಾಡಲು ಯತ್ನಿಸುತ್ತಾರೆ ಎನ್ನುವುದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಅಷ್ಟೇ ಅಲ್ಲ, ಅಲ್ಲಿ ವೇದಿಕೆಗೆ ಬರುವ ಮಕ್ಕಳಲ್ಲಿ ಉಚ್ಛಾರ, ವ್ಯಾಕರಣ ಸರಿಪಡಿಸಲು ಯತ್ನ ಮಾಡುತ್ತಾರೆ!
ನಮ್ಮವರೇ ಅಂದುಕೊಳ್ಳುವ ಕನ್ನಡದ ನಟೀಮಣಿಯರಾದ ರಮ್ಯ, ರೇಖಾ ಮುಂತಾದವರೆಲ್ಲ ಲವ್ಲಿ ಲಂಡನ್ನಿಂದ ಬಂದ ಹಾಗೆ ಮಾಡಿದ್ರೆ ದೂರದ ಪಂಜಾಬಿನಿಂದ ಬಂದು ಮುಂಗಾರು ಮಳೆಯಲ್ಲಿ ಮಿಂದ ಬಳಿಕ ಕನ್ನಡಿಗರಿಗೆ ಆಪ್ತವಾದ ಸಂಜನಾ ಗಾಂಧಿ ಮಾತ್ರ ಕನ್ನಡ ಕಲಿತೇ ಬಿಟ್ಟಿದ್ದಾರೆ. ವರದಿಗಾರರಲ್ಲಿ ‘ಕನ್ನಡದಲ್ಲಿ ಪ್ರಶ್ನೆ ಕೇಳಿ ಪರವಾಗಿಲ್ಲ’ ಎಂದು ಸರಳತೆ ಮೆರೆಯುತ್ತಾರೆ.
ನಾವು ನಾವಾಗಲು
ಮರೆತುಬಿಟ್ಟಿದ್ದೇವೆ
ಬೇರೆ ಯಾರೋ
ಆಗಲು ಹೋಗಿ
ನಮ್ಮವರಿಂದ
ದೂರವಾಗುತ್ತಿದ್ದೇವೆ...
ನಮ್ಮತನವನ್ನೂ ಕಳೆಯುತ್ತೇವೆ
ಬಲುಹೆಮ್ಮೆಯಿಂದ!

6 comments:

ಬ್ರಹ್ಮಾನಂದ ಎನ್.ಹಡಗಲಿ said...

ವೇಣುರವರೇ,

ಟಿವಿ ಚಾನೆಲ್‌ಗಳಲ್ಲಿ ನಿರೂಪಕರು ಕನ್ನಡ ಮಾತನಾಡಲು ಕಷ್ಪಪಟ್ಟು ಆಂಗ್ಲ ಮಿಶ್ರಿತ ಕನ್ನಡ ಮಾತನಾಡಿದರೆ ಹೆಮ್ಮೆ ಎಂದು ತಿಳಿದುಕೊಳ್ಳುತ್ತಾರೆ ಎಂದುಕೊಂಡರೆ, ಅದೇ ಎಫ್.ಎಮ್. ರೇಡಿಯೋಗಳಲ್ಲಿ ನಿರೂಪಣೆ ಮಾಡುತ್ತಿರುವವರ ಶೈಲಿಯನ್ನು ನೋಡಿದರೆ ಏನನಿಸಬಾರದು ಹೇಳಿ?
ಆದರೆ, ನೀವು ಹೇಳಿರುವ ಪ್ರಸ್ತಾಪಿತ ವಿಷಯ ಚರ್ಚಾರ್ಹವಾದದ್ದು.

ಧನ್ಯವಾದಗಳೊಂದಿಗೆ,
ಬ್ರಹ್ಮಾನಂದ.ಎಚ್.ಎನ್.

VENU VINOD said...

ಬ್ರಹ್ಮಾನಂದರೆ,

ಎಫ್ ಎಂನವರ ಬಗ್ಗೆ ಮಾತಾಡದಿರುವುದೇ ಲೇಸು, ಅವರಷ್ಟು ದೊಡ್ಡವರಲ್ಲ ನಾವು ಅಲ್ವೇ? ಲೇಖನಕ್ಕೆ ಸ್ಪಂದಿಸಿದ್ದಕ್ಕೆ ಧನ್ಯವಾದ. ಬರುತ್ತಿರಿ

VENU VINOD said...
This comment has been removed by the author.
Harisha - ಹರೀಶ said...

ನಿಜ. ಕನ್ನಡಿಗರ ಕನ್ನಡಾಭಿಮಾನ ಗಮನಕ್ಕೆ ಬರುವುದು ನವೆಂಬರ್ ನಲ್ಲಿ ಮಾತ್ರ

Shrilatha Puthi said...

ಹೌದು.. ಪೂಜಾ ಗಾಂಧಿ ಕನ್ನಡದಲ್ಲಿ ಮಾತಾಡಿದ್ದನ್ನು ನೋಡಿ ಖುಷಿ ಆಯ್ತು.

jagadeesh sampalli said...

Yes, your observation is true. Many of our Kannada film artists are behaving like they are alien to Kannada and its culture. Really its disgusting. Being artists, they have more responsibility than others in promoting Kannada or any mother tongue. Last week, I saw an interview with 'Aa Dinagalu' film hero taking in pure Kannada though he was born and brought-up in the USA. Why our film actors are behaving like this? Perhaps the only thing is, they may think that speaking in English forgetting their own mother tongue is an issue of prestige.

Related Posts Plugin for WordPress, Blogger...