19.10.07

ಅಮ್ಮನ ಕೈತೋಟ(mothers' garden)



ಅಮ್ಮನ ಪ್ರೀತಿಯ
ಕೈತೋಟದಲ್ಲಿ
ಅರಳಿವೆ ಖುಷಿಯ
ಹೂವುಗಳು
ವಸಂತಕ್ಕೆ ವಸಂತವೇ
ಮೈಮರೆತು ಕುಳಿತಂತೆ....

ಕೆಂಗುಲಾಬಿಯ ಒನಪು
ಮಂದಾರಪುಷ್ಪದ ನಲಿವು
ಕೆಂಪು-ಹಳದಿ
ದಾಸವಾಳಗಳು ಎಲ್ಲೆಲ್ಲು
ಅರೆಬಿರಿದ ಜಾಜಿಮಲ್ಲಿಗೆ
ಸೇವಂತಿಗೆ ತೋಟತುಂಬ
ನಗುವೇ ನಗು
ಲಾವಣ್ಯದ ಪ್ರಭೆಯಲ್ಲಿ
ತೊಯ್ದಾಡಿವೆ ಹೂಗಳು

ಅಮ್ಮನ ಬೆತ್ತದ
ಬುಟ್ಟಿಗೆ ಸೇರಿದ
ಹೂಗಳಿಗೆ ದೇವರ
ಪಾದಸ್ಪರ್ಶದ ಭಾಗ್ಯ
ಇನ್ನೊಂದಿಷ್ಟು ಕುಸುಮಗಳಿಗೆ
ನೆರೆಮನೆ ಪೋರಿಯ
ಕೂದಲ ಮೇಲೆ ಮೆರೆಯುವ
ಅದೃಷ್ಟ.

ಅಮ್ಮನ ಕೈತೋಟದ
ಹೂಗಳು ಯಾವಾಗಲೂ
ನಗುತ್ತವೆ,
ಅಮ್ಮನನ್ನೂ ನಗಿಸುತ್ತವೆ!

4 comments:

ರಾಜೇಶ್ ನಾಯ್ಕ said...

೩ನೇ ಚರಣ ತುಂಬಾ ಇಷ್ಟವಾಯಿತು.

PRAVINA KUMAR.S said...

ಸೂಪರ್ ಕಣ್ರಿ.....ಅಮ್ಮನೇ ಹಾಗೇ....ಏನೇ ಮಾಡಿದರು ಚಂದ.....

Unknown said...

I really liked ur post, thanks for sharing. Keep writing. I discovered a good site for bloggers check out this www.blogadda.com, you can submit your blog there, you can get more auidence.

VENU VINOD said...

ರಾಜೇಶ್, ಪ್ರವೀಣ್ , ಕಿರಣ ಧನ್ಯವಾದಗಳು

Related Posts Plugin for WordPress, Blogger...