ನಿನ್ನ ನಗೆಮಲ್ಲಿಗೆ
ನೋಡುತ್ತಲೇ
ವಿಗ್ರಹವಾಗಿ
ಹೂರಾಶಿಯೊಳಗೆ
ಹೂತುಹೋಗಿದ್ದೇನೆ
ಕೊರಳವರೆಗೂ
ಸ್ವರ ಅಡಗಿಹೋಗಿದೆ!
***********
ಎಂದೋ ಕಂಡು
ಮನದಗೂಡೊಳಗೆ
ಹೂತಿಟ್ಟ ಪ್ರತಿಮೆ
ಹೊರತೆಗೆಯಲೆಂದು
ಮನದ ಕದತೆರೆದೆ
ಹೊರಚಿಮ್ಮಿದ
ಸಾವಿರಾರು ಮುಖಬಿಂಬ
ಪ್ರವಾಹದಲ್ಲಿ
ಕೊಚ್ಚಿಹೋಗಿದ್ದೇನೆ !
**********
ನಿನ್ನ ಮೈಸೋಕಿ
ನಸುನಾಚಿ
ಸುಂಯ್ಗುಟ್ಟಿದ
ಮಂದಾನಿಲಕ್ಕೆ ಥರಗುಟ್ಟಿದೆ
ತನು
ಹಾರಿಹೋದೇನು
ನಾನು, ಕಾದಿಟ್ಟುಕೋ
ನಿನ್ನೊಡಲಲ್ಲಿ
ಜೋಪಾನ!
6 comments:
ವೇಣು ವಿನೋದ್ ಅವರೇ..
"ಮನದಗೂಡೊಳಗೆ
ಹೂತಿಟ್ಟ ಪ್ರತಿಮೆ
ಹೊರತೆಗೆಯಲೆಂದು
ಮನದ ಕದತೆರೆದೆ
ಹೊರಚಿಮ್ಮಿದ
ಸಾವಿರಾರು ಮುಖಬಿಂಬ
ಪ್ರವಾಹದಲ್ಲಿ
ಕೊಚ್ಚಿಹೋಗಿದ್ದೇನೆ !"
ಸುಂದರ ಸಾಲುಗಳು. ಕವಿತೆ ತುಂಬ ಇಇಷ್ಟವಾಯಿತು.
ವೇಣು,
ಈಗ ತಾನೆ ನಿಮ್ಮ ಬ್ಲಾಗಿಗೆ ಬಂದಿಣುಕಿದೆ. ಮಲ್ಲಿಗೆ ಕವಿತೆ ಚೆನ್ನಾಗಿದೆ. ದಿನದ ಎಲ್ಲ ಹಿಂಸೆಗಳ ನಡುವೆ ನಮ್ಮನ್ನು ಜೀವಂತವಾಗಿಡುವುದು ಪ್ರೇಮವೇ ಅಲ್ಲವೆ?
ನಿಮ್ಮ ಪ್ರವಾಸಕಥನಗಳು ಕೂಡ ತುಂಬ ಹಿಡಿಸಿದುವು. ಸುಲಲಿತ ಬರವಣಿಗೆ. ಇನ್ನು ಮುಂದೆ ಮಾತಾಡುವ!
ವಿನೋದ್, ತುಂಬಾ ಸುಂದರವಾದ ಸಾಲುಗಳು.ಕಟ್ಟಿಕೊಟ್ಟ ರೀತಿಯೇ ಸೊಗಸು.
ಧನ್ಯವಾದಗಳು.
ಜೋಮನ್
ವೇಣು,
ಎಷ್ಟು ಚೆನಾಗಿ ಬರೀತೀರ. ನಿಮ್ಮ ಮಲ್ಲಿಗೆ ಎಸಳುಗಳೇ ಇಷ್ಟು ಆಹ್ಲಾದ ತುಂಬಿದರೆ ಮಲ್ಲಿಗೆಯ ಮಾಲೆ ಹೇಗಿದ್ದೀತು?!
ಇದೊಂದೇ ಅಲ್ಲದೆ ಹೊಸವರ್ಷಕ್ಕೆ ಬರೆದ ಕವಿತೆ, ಮೂರುಬಿಂದುಗಳು, ಅರಿಕೆ ಎಲ್ಲವೂ ತುಂಬ ಇಷ್ಟವಾಯಿತು.
ಸಿಂಧು
ಒಂದು ಮತ್ತು ಮೂರು ಚೆನ್ನಾಗಿದೆ ವೇಣು. ನಗೆಮಲ್ಲಿಗೆ ಸರಿ, 'ಬೈಯಮಲ್ಲಿಗೆ’ಯೂ ಇದೆಯಲ್ಲ !
ಶಾಂತಲಾ,
ಧನ್ಯವಾದಗಳು, ಬರ್ತಾ ಇರಿ
Shashismiles,
ನನ್ನ ಬ್ಲಾಗಂಕಣಕ್ಕೆ ಸ್ವಾಗತ, ಇಣುಕುತ್ತಾ ಇರಿ :)
ಜೋಮನ್,
ವಂದನೆಗಳು, ನಿಮ್ಮಂಥವರ ಮಾತುಗಳು ಸ್ಫೂರ್ತಿ ತರುತ್ತವೆ
ಸಿಂಧು
ಉಫ್, ಎಸಳು ಹುಡುಕುವಾಗಲೇ ಕಷ್ಟಪಟ್ಟೆ, ಮಾಲೆ ಪೋಣಿಸುವುದು ಇನ್ನಷ್ಟು ಕ್ಲಿಷ್ಟ ಇರಬಹುದೇನೋ :)
ಸುಧನ್ವ, thanks
ಬೈಯಮಲ್ಲಿಗೆ? ಗೊತ್ತಾಗಿಲ್ಲ!
Post a Comment