15.1.08

ಮಂಜಿನ ಎರಡು ಹನಿ!ರಾತ್ರಿ ಪೂರ್ತಿ
ಪ್ರೀತಿ ಮಾಡಿದ
ನಕ್ಷತ್ರ ಹಾಗೂ
ಹುಲ್ಲುಕಡ್ಡಿ
ಪ್ರೇಮದ ಕುರುಹಾಗಿ
ಮಂಜಿನಹನಿಯನ್ನೂ
ಬಿಡದೆ
ಹಗಲಿನಲ್ಲಿ
ಮರೆಯಾಗಿ ಹೋದವು

**************

ಬೇಲಿಯ ಹೂ
ಸುಂದರವಾಗಿ
ಅರಳಿತ್ತು...
ಚೆಂಗುಲಾಬಿ ಮುಡಿದ
ಹುಡುಗಿ
ನೋಡಿದರೂ ನೋಡದಂತೆ
ಮುಖ ತಿರುವಿ
ಹೋದಳು
ಬೇಲಿ ಹೂ
ರಪ್ಪನೆ ರೆಪ್ಪೆ
ಮುಚ್ಚಿ ಅಳತೊಡಗಿತು

15 comments:

Sree said...

ಚೆನ್ನಾಗಿದೆ ರೀ, ಹೈಕು ಥರಾ ಅನ್ನಿಸ್ತು...ಬರೀತಿರಿ

ರಾಜೇಶ್ ನಾಯ್ಕ said...

ನಕ್ಷತ್ರ-ಹುಲ್ಲುಕಡ್ಡಿ ಪ್ರೇಮ; ಚೆನ್ನಾದ ಕಲ್ಪನೆ.

ರಾಜೇಶ್ ನಾಯ್ಕ said...
This comment has been removed by the author.
ವಿನಾಯಕ ಭಟ್ಟ said...

ನೀವು ಯಾಕೋ ಚುಟುಕು ಕವಿಯಾಗೋ ಅಪಾಯ ಕಾಣಿಸ್ತಾ ಇದೆ. good.
ಕವಿ ಗೆಳೆಯನಾಗೋದಕ್ಕಿಂತ ಗೆಳೆಯ ಕವಿಯಾಗೋದ್ರಲ್ಲಿ ಹೆಚ್ಚು ಸಂತೋಷ ಇದೆ.

ಶಾಂತಲಾ ಭಂಡಿ (ಸನ್ನಿಧಿ) said...

ವೇಣು ವಿನೋದ್ ಅವರೆ,

ಎಲ್ಲ ಸಾಲುಗಳೂ ಚುಟುಕಾಗಿ ಅರ್ಥವನ್ನು ಮಾತ್ರ ಎತ್ತರಕ್ಕೆ ಬೆಳೆಸಿಕೊಂಡಂತಿವೆ. ಹೀಗೆ ಇನ್ನೂ ಒಂದಿಷ್ಟು ಬರಲಿ ನಮ್ಮಂಥ ಓದುಗರಿಗಾಗಿ. ಚೆನ್ನಾಗಿ ಬರೆದಿದ್ದೀರಿ.

VENU VINOD said...

ಶ್ರೀ,
ನನ್ನ ಬ್ಲಾಗ್‌ಗೆ ಸ್ವಾಗತ. ಹೈಕು ಥರ ಅನ್ನಿಸಿದೆ ಎಂದದ್ದು ಖುಷಿ ಕೊಡ್ತು :)

ರಾಜೇಶ್, ಥ್ಯಾಂಕ್ಸ್

ವಿನಾಯಕ,
ಹಹ್ಹ, ಅಪಾಯಾನ? ಕವಿ, ಗಿವಿ ಅಂದ್ರೆ ಭಯವಾಗುತ್ತೆ ಮಾರಾಯ :)

ಶಾಂತಲಾ,
ನಿಮ್ಮೆಲ್ಲರ ಹಾರೈಕೆಗೆ ಫಲಕೊಡಲಿ ಎಂದು ನಾನೂ ಬಯಸುವೆ

ಸುಪ್ತದೀಪ್ತಿ suptadeepti said...

ಹನಿಗವನಗಳು ಖುಷಿ ಕೊಡುತ್ತಲೇ ಯೋಚನೆಗೂ ಹಚ್ಚುತ್ತವೆ. ಒಳ್ಳೆಯ ಪ್ರಯತ್ನಗಳು. ಹೀಗೇ ಬರೆಯುತ್ತಿರಿ. ಓದಲು ನಾವಂತೂ ಇದ್ದೇವೆ.

H.S. Dharmendra said...

Hi beautiful verses... Gives one more reason to fall in love with Kannada all over again.

Sorry, don't know how to post this in Kannada yet.

PRANJALE said...

ಚೆನ್ನಾಗಿ ಬರೀತಿರಿ ವೇಣುಜಿ.

Unknown said...

:-)ಚಂದ ಇದ್ದು. ಇಷ್ಟ ಅಯ್ತು.

ಮಲ್ನಾಡ್ ಹುಡ್ಗಿ

Nagesamrat said...

ನಗುವು ಸಹಜದ ಧರ್ಮ
ನಗಿಸುವುದು ಪರ ಧರ್ಮ
ನಗುವ ನಗಿಸುತ ನಗಿಸಿ
ನಗುತ ಬಾಳುವ ವರವ
ಮಿಗೆ ನೀನು ಬೇಡಿಕೊಳೊ ಮಂಕುತಿಮ್ಮ-
ಎಂದವರು ಡಿ.ವಿ.ಜಿ. ಜೀವನವನ್ನು ನೋಡುವ ದೃಷ್ಟಿಯಲ್ಲಿ ನವಿರಾದ ಹಾಸ್ಯವನ್ನು ಬೆರೆಸಿಕೊಂಡು ಬಿಟ್ಟರೆ ಯಾವ ಕಷ್ಟಗಳೂ ನಮ್ಮನ್ನು ಕುಗ್ಗಿಸುವುದಿಲ್ಲ, ಅವಮಾನಗಳು ನಮ್ಮನ್ನು ನಿರ್ನಾಮ ಮಾಡುವುದಿಲ್ಲ. ಹಾಸ್ಯ ಶಾಕ್ ಅಬ್ಸಾರ್ವರ್‌ನಂತೆ ಆಘಾತಗಳನ್ನು ತಾಳಿಕೊಳ್ಳಬಲ್ಲ ಶಕ್ತಿಯನ್ನು ಕೊಡುತ್ತದೆ.
ಕನ್ನಡದಲ್ಲಿ ವೈವಿಧ್ಯಮಯ ಹಾಸ್ಯಕ್ಕಾಗಿ ಮೀಸಲಾದ ಬ್ಲಾಗ್ ‘ನಗೆ ನಗಾರಿ ಡಾಟ್ ಕಾಮ್’.
ವಿಳಾಸ: http://nagenagaaridotcom.wordpress.com/

ದಯವಿಟ್ಟು ಒಮ್ಮೆ ಇಲ್ಲಿ ಭೇಟಿಕೊಡಿ. ನಿಮ್ಮ ಮುಖದ ಮೇಲೆ ತೆಳುನಗೆಯ ಗೆರೆ ಮೂಡದಿದ್ದರೆ ಕೇಳಿ. ಇಷ್ಟವಾದರೆ ನಿಮ್ಮ ಬ್ಲಾಗ್ ಫೀಡಿನಲ್ಲಿ ಇದನ್ನು ಸೇರಿಸಿಕೊಳ್ಳಿ, ಮೆಚ್ಚುಗೆಯಾದರೆ ನಿಮ್ಮ ಇತರೆ ಗೆಳೆಯ, ಗೆಳತಿಯರಿಗೆ ಇದರ ಬಗ್ಗೆ ತಿಳಿಸಿ.

ನಗೆ ಸಾಮ್ರಾಟ್

VENU VINOD said...

ಸುಪ್ತದೀಪ್ತಿ, ಪ್ರಾಂಜಲೆ ಹಾಗೂ ಮಲ್ನಾಡ್ ಬಾಲಕಿಯವರಿಗೆ ಪ್ರಣಾಮ. ನಿಮ್ಮ ಪ್ರೋತ್ಸಾಹಕ್ಕೆ ವಂದನೆ. ಬರ್‍ತಾ ಇರಿ

ತೇಜಸ್ವಿನಿ ಹೆಗಡೆ said...

ಬೇಲಿಯ ಹೂವಿನ ನೋವು ಮನಕಲಕಿತು.. ತುಂಬಾ ಚೆನ್ನಾಗಿದೆ. ಅರ್ಥವತ್ತಾದ ಚುಟುಕಿಗೆ ಸರಿಯಾದ ಚಿತ್ರ. ನೀವೇ Photo shopping ಮಾಡಿದ್ದಾ?

VENU VINOD said...

ತೇಜಸ್ವಿನಿಯವರೇ ನನ್ನ ಬ್ಲಾಗಂಳಕ್ಕೆ ಸ್ವಾಗತ, ಮೆಚ್ಚುಗೆಯ ಪ್ರೋತ್ಸಾಹಕ್ಕೆ ನನ್ನಿ. ಹೌದು ನನ್ನದೇ ಫೋಟೋಶಾಪಿಂಗ್ :)

ತೇಜಸ್ವಿನಿ ಹೆಗಡೆ said...

Then Nice Photo Shopping :)

Related Posts Plugin for WordPress, Blogger...