20.3.08

ಕಾಲ?

ಈಗೀಗ ನಡೆಯುತ್ತ
ಹೋಗುವಾಗ
ಹಿತ್ತಿಲಿನಾಚೆಗಿನ
ತಿರುವಿನಲ್ಲಿ ಕಾಲು
ಎಳೆಯುತ್ತ ಸಾಗುವಾಗ
ಹಿಂದೆ ಯಾರೋ
ಹೆಜ್ಜೆ ಹಾಕಿದಂತೆ
ಭಾಸವಾಗುತ್ತದೆ

ಯಾರೋ ದಾರಿಹೋಕರಿರಬಹುದು
ಅವರಷ್ಟಕ್ಕೆ ನಡೆಯುತ್ತಿರಬಹುದು
ಎಂದು ನಿರಾತಂಕವಾಗಿ
ನಡೆಯುತ್ತಲೇ ಇದ್ದೆ

ಸಮಯ ಉರುಳಿತು....

ಈಗೀಗ ಹಿಂದೆ ಬರುವವರು
ನನ್ನತ್ತಲೇ ಬಂದಂತೆ
ನನ್ನನ್ನು ಕರೆವಂತೆ
ಭಾಸವಾಗತೊಡಗಿದೆ

1 comment:

ರಾಜೇಶ್ ನಾಯ್ಕ said...

ಯಾಕೆ ವೇಣು,
'ಈಗೀಗ ಹಿಂದೆ ಬರುವವರು
ನನ್ನತ್ತಲೇ ಬಂದಂತೆ
ನನ್ನನ್ನು ಕರೆವಂತೆ
ಭಾಸವಾಗತೊಡಗಿದೆ'
ಎಂದು ಕೊನೆಗೊಳಿಸಿ ಅದರ ಮೇಲೆ 'ಕಾಲ' ಎಂದು ಶಿರ್ಷೀಕೆ ಬೇರೆ ಕೊಟ್ಟಿದ್ದೀರಾ. ಯಮರಾಜ ಎಲ್ಲಾದರೂ ಕನಸಲ್ಲಿ ಭೇಟಿ ನೀಡಿದ್ದನೋ?

Related Posts Plugin for WordPress, Blogger...