11.5.08

ಅಮ್ಮ ಎಂಬ ಸಂಜೀವಿನಿ

ಕತ್ತಲಮೂಲೆಯಲ್ಲಿ
ದುಃಖವನ್ನೇ ಹೊದ್ದು
ಮಲಗಿದ್ದ ನನ್ನ
ಮೌನವನ್ನೇ ಹೆಕ್ಕಿ
ಅರಗಿಸಿಕೊಳ್ಳುತ್ತಾಳೆ
ಬಿಕ್ಕುವ ಮನಕ್ಕೆ
ಸದಾ ಸಂಜೀವಿನಿ ನನ್ನಮ್ಮ!

ಅಗಲ ಮುಖ, ಸುಕ್ಕು
ಗಟ್ಟಿದ ಚರ್ಮ
ನಸುವೇ ಹರಡಿದೆ ಕುಂಕುಮ
ಆಕೆಯ ಬಟ್ಟಲು ಕಂಗಳೇ
ನನಗೆ ಲಾಲಿ ಹಾಡುವ ಚಂದ್ರಮ

ದೇವರಕೋಣೆಯಲ್ಲಿ ಅಮ್ಮನ ಪೂಜೆ
ಮುಖತುಂಬಾ ದೀಪದ ಬೆಳಗು
ಕೋಣೆಯಿಂದ ನಸುನಸುವೇ
ಹರಡುತ್ತಾ ಬರುವ
ಅಗರಬತ್ತಿಯ ಪರಿಮಳ
ದೇವರಿಗೆ ನೈವೇದ್ಯದ ಕಲ್ಲುಸಕ್ಕರೆ
ಮಕ್ಕಳಿಗೆ ಮನತುಂಬಿದ ಅಕ್ಕರೆ

ಅಮ್ಮನ ದಿನ ಎಂಬ ದಿನ ಮಾತ್ರ ಆಕೆಯನ್ನು ನೆನಪಿಸಬೇಕೇ?
ಇಲ್ಲ ಯಾವಾಗಲೂ ನೆನಪಿಸಬೇಕು...ಅದೇನೋ ಸರಿ.... ಆದರೆ ಅಮ್ಮನ ದಿನ ಎಂಬ ವಿಶೇಷ ಅವಕಾಶ ಸಿಕ್ಕರೆ ಅಂದೂ ವಿಶೇಷವಾಗಿ ಸ್ಮರಿಸಿಕೊಂಡರೆ ನಷ್ಟವೇನು?
ಅದಕ್ಕೇ ಈ ನಾಲ್ಕು ಸಾಲು ನನ್ನ ಹೆತ್ತಬ್ಬೆಗೆ.....

4 comments:

ಸುಪ್ತದೀಪ್ತಿ suptadeepti said...

ಅಮ್ಮನನ್ನು ನೆನಪಿಸಿಕೊಳ್ಳಲು ಇಂಥಾ ಒಂದು ದಿನವೇ ಆಗಬೇಕಿಲ್ಲ, ನಿಜ. ಆದ್ರೆ ಇಂದೂ ನೆನೆಸಿಕೊಳ್ಳುವವರು ವಿರಳ. ಅಂಥಾದ್ರಲ್ಲಿ ಅಬ್ಬೆಗೊಂದು ಕವನ ಕುಸುಮ ಕೊಟ್ಟಿದ್ದೀ. ನಿನ್ನಮ್ಮ ಧನ್ಯೆ.

ತೇಜಸ್ವಿನಿ ಹೆಗಡೆ said...

ತುಂಬಾ ಇಷ್ಟವಾಯಿತು ಕವನ. ಕೊಯೆಯಲ್ಲಿ ನೀವು ಬರೆದ ಸಾಲುಗಳೂ ಕೊಡಾ..

VENU VINOD said...

ಇಬ್ಬರೂ ಅಕ್ಕಯ್ಯನವರಿಗೂ ವಂದನೆ

ವಿನಾಯಕ ಭಟ್ಟ said...

ವಸುಧೇಂದ್ರ ಅವರ ನನ್ನಮ್ಮ ಅಂದ್ರೆ ನಂಗಿಷ್ಟ ಪ್ರಬಂಧ ಸಿಕ್ಕಿದ್ರೆ ಓದು. ನಾನು ಅದನ್ನು ಓದಿ ಅತ್ತಿದ್ದು ನಂಗಿನ್ನೂ ನೆನಪಿದೆ.

Related Posts Plugin for WordPress, Blogger...