29.5.08

ಉದುರಿದ ಎಲೆಗಳು




ಮರದ ತೆಕ್ಕೆಯಿಂದ
ಕಳಚಿಕೊಂಡು ಬಿದ್ದ
ಹಣ್ಣೆಲೆಗೆ
ನದಿ ಪ್ರವಾಹದಲ್ಲಿ
ಸಿಲುಕಿಕೊಳ್ಳುವ ಆತುರ

********



ಅರ್ಧ ರಾತ್ರಿ ಮೊಂಬತ್ತಿಗಳು
ಉರಿಯುತ್ತಲೇ ಇವೆ
ಪಾಠ ಪ್ರವಚನ ಸರಿಯಾಗಿಯೇ ನಡೆಯುತ್ತವೆ
ಹೆಣ ಉರುಳೋದು ನಿಂತಿಲ್ಲ



********



ಹಗಲಲ್ಲಿ
ರಂಗು ಮಾರುವ
ಬಾಲೆಯ ಕೈತುಂಬಾ
ಬಣ್ಣಗಳ ಓಕುಳಿ
ರಾತ್ರಿ ಬರೀ
ಕಡುಕಪ್ಪು ಕನಸು



********


ಮಹಾನ್
ಪರ್ವತದ ತುದಿಯಿಂದ
ಉರುಳುರುಳಿ
ಪ್ರತ್ಯೇಕ ಅಸ್ತಿತ್ವ
ಸ್ಥಾಪಿಸಿದ
ಬಂಡೆಗಲ್ಲನ್ನು ಕೇಳುವವರೇ ಇಲ್ಲ!

9 comments:

Unknown said...

ಹಗಲಲ್ಲಿ
ರಂಗು ಮಾರುವ
ಬಾಲೆಯ ಕೈತುಂಬಾ
ಬಣ್ಣಗಳ ಓಕುಳಿ
ರಾತ್ರಿ ಬರೀ
ಕಡುಕಪ್ಪು ಕನಸು

ಇದು ನಂಗೆ ತುಂಬಾ ಇಷ್ಟ ಆಯ್ತು...

ತೇಜಸ್ವಿನಿ ಹೆಗಡೆ said...

ಮಹಾನ್
ಪರ್ವತದ ತುದಿಯಿಂದ
ಉರುಳುರುಳಿ
ಪ್ರತ್ಯೇಕ ಅಸ್ತಿತ್ವ
ಸ್ಥಾಪಿಸಿದ
ಬಂಡೆಗಲ್ಲನ್ನು ಕೇಳುವವರೇ ಇಲ್ಲ!

Memorable lines!

ಕುಕೂಊ.. said...

ಅರ್ಧ ರಾತ್ರಿ ಮೊಂಬತ್ತಿಗಳು
ಉರಿಯುತ್ತಲೇ ಇವೆ
ಪಾಠ ಪ್ರವಚನ ಸರಿಯಾಗಿಯೇ ನಡೆಯುತ್ತವೆ
ಹೆಣ ಉರುಳೋದು ನಿಂತಿಲ್ಲ
------------------------
ಪಿರಿದಾದ ಅರ್ಥದಲ್ಲಿ ಕಿರಿದಾಗಿ ಮೂಡಿಬಂದ ಕವನ.
ನನಗೆ ತುಂಬಾ ಇಷ್ಟವಾಯಿತು.

ಎಲ್ಲ ಹನಿಗಳು ಮುತ್ತು ಪೋಣಿಸಿದಂತಿವೆ.

ಧನ್ಯವಾದದೊಮದಿಗೆ
ಸ್ವಾಮಿ
ಪುಣೆ

AJEYA SIMHA K.V. said...

ಹಗಲಲ್ಲಿ
ರಂಗು ಮಾರುವ
ಬಾಲೆಯ ಕೈತುಂಬಾ
ಬಣ್ಣಗಳ ಓಕುಳಿ
ರಾತ್ರಿ ಬರೀ
ಕಡುಕಪ್ಪು ಕನಸು
ಇದು ಒಂದು ನಿಮಿಷ ನನ್ನ ಯೋಚನೆಗೆ ಹಚ್ಹಿತು ತುಂಬಾ ಚೆನ್ನಾಗಿದೆ ವೇಣು

ರಾಜೇಶ್ ನಾಯ್ಕ said...

ವೇಣು,
ಪತ್ರಕರ್ತ ಹುದ್ದೆಗೆ ರಾಜೀನಾಮೆ ಬಿಸಾಕಿ ಫುಲ್ ಟೈಮ್ ಕವಿಯಾಗೋ ಇರಾದೆಯಿರುವಂತಿದೆ...
ಹನಿಗಳ ಯೋಚನಾಲಹರಿ ವಿಶಿಷ್ಟ!

ಜಾತ್ರೆ said...

Registration- Seminar on the occasion of kannadasaahithya.com 8th year Celebration

ಪ್ರೀತಿಯ ಅಂತರ್ಜಾಲ ಸ್ನೇಹಿತರೆ,

ಕನ್ನಡಸಾಹಿತ್ಯ.ಕಾಂ ತನ್ನ ಎಂಟನೇ ವಾರ್ಷಿಕೊತ್ಸವದ ಅಂಗವಾಗಿ ಜೂನ್ ಎಂಟರಂದು ಕ್ರೈಸ್ಟ್ ಕಾಲೇಜಿನಲ್ಲಿ ಒಂದು ದಿನದ ವಿಚಾರ ಸಂಕಿರಣವನ್ನು ಏರ್ಪಡಿಸುತ್ತಿದೆ.
ವಿಷಯ:
ಅಂತರ್ಜಾಲದ ಸಂಧರ್ಭದಲ್ಲಿ, ಪ್ರಾದೇಶಿಕ ಭಾಷೆಯಲ್ಲಿ ಸೃಜನಶೀಲತೆ: ಗತಿಸ್ಥಿತಿ ಸವಾಲು.

ಕಾರ್ಯಕ್ರಮಕ್ಕೆ ಸೀಮಿತ ಆಸನಗಳು ಲಭ್ಯವಿರುವ ಕಾರಣ ಭಾಗವಹಿಸಲು ಆಸಕ್ತಿ ಇರುವವರು ದಯಮಾಡಿ ಮುಂಚಿತವಾಗಿ ಕೆಳಗೆ ಕೊಟ್ಟಿರುವ ಲಿಂಕ್‍ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ.

http://saadhaara.com/events/index/english

http://saadhaara.com/events/index/kannada
ಸಮಾರಂಭದಲ್ಲಿ ಭಾಗವಹಿಸಲು ನೋಂದಾವಣೆ ಕಡ್ಡಾಯ.

ಉತ್ಸಾಹ ಮತ್ತು ಸಮಯ ಇದ್ದರೆ ವಿಚಾರಸಂಕಿರಣದ ನಂತರ ಅನೌಪಚಾರಿಕವಾಗಿ ಬ್ಲಾಗಿಗಳಿಗೆ ‘ಬ್ಲಾಗೀ ಮಾತುಕತೆ’ ನಡೆಸುವ ಉದ್ದೇಶವೂ ಇದೆ.

ನೀವೂ ಬನ್ನಿ ಮತ್ತು ಆಸಕ್ತಿಯಿರುವ ನಿಮ್ಮ ಗೆಳೆಯರನ್ನು ಕರೆತನ್ನಿ.

-ಕನ್ನಡಸಾಹಿತ್ಯ.ಕಾಂ ಬಳಗ

ಸಿಂಧು sindhu said...

ವೇಣು,

ರಾಜೇಶ್ ನಾಯಕರ ಮಾತು ನನ್ನದೂ ಕೂಡ. :)
ಇತ್ತೀಚಿನ ಎಲ್ಲ ಕವಿತೆಗಳೂ ತುಂಬ ಇಷ್ಟವಾಯಿತು. ಹಾಗಂತ ಮೊದಲಿನ ಕವಿತೆ ಕತೆಗಳೂ ಚೆನ್ನಾಗಿಯೇ ಇವೆ. ನಿಮ್ಮ ವರದಿಗಳಿಗಿಂತ ನನಗೆ ಕವಿತೆಗಳೇ ಜಾಸ್ತಿ ಇಷ್ಟ.
ಪುಟ್ಟ ಕಣ್ಣು ಜಗದಗಲ ಅಳೆಯುವಂತೆಯೇ ಈ ಹನಿಗಳು ಹೊಸಹೊಸ ಅರ್ಥ ಹೊಳೆಯಿಸುವ ಬೆಳಕಿನಲ್ಲಿ ಹಾಯುತ್ತಿವೆ.

ಪ್ರೀತಿಯಿಂದ
ಸಿಂಧು

ಅಮರ said...

ಹಗಲಲ್ಲಿ
ರಂಗು ಮಾರುವ
ಬಾಲೆಯ ಕೈತುಂಬಾ
ಬಣ್ಣಗಳ ಓಕುಳಿ
ರಾತ್ರಿ ಬರೀ
ಕಡುಕಪ್ಪು ಕನಸು


ಎಲ್ಲರ ಸಂತಸಕ್ಕೆ ಬಣ್ಣದ ಮೆರಗನ್ನು ಹಚ್ಚುವ ಪೋರಿಯ ಕನುಸುಗಳೆಲ್ಲ ಕಡು ಕತ್ತಲೆ ....... ವಾಸ್ತವ ಅದಕ್ಕೆ ಎಲ್ಲರಂತೆ ನನ್ಗು ಇಷ್ಟ ಆಯ್ತು....:)
-ಅಮರ

VENU VINOD said...

ಕುಮಾರ್‍, ತೇಜಸ್ವಿನಿ
ಧನ್ಯವಾದಗಳು.

ಕುಮಾರಸ್ವಾಮಿಯವರಿಗೆ ನನ್ನ ಬ್ಲಾಗ್‌ಗೆ ಸ್ವಾಗತ. ಮತ್ತೆ ಬರುತ್ತಿರಿ.

ರಾಜೇಶ್‌ಗೆ ವಂದನೆ.
ಒಂದು ವೃತ್ತಿ, ಇನ್ನೊಂದು ಹವ್ಯಾಸ, ಒಂದು ಬಿಟ್ಟು ಇನ್ನೊಂದಿಲ್ಲ ಸಾರ್‍ :)

ಸಿಂಧು,ಥ್ಯಾಂಕ್ಸ್.
ಹಾಗಾದ್ರೆ ಇನ್ನು ವರದಿಯಲ್ಲಿ ಏನು ದೋಷ ಅಂತ ನೋಡ್ಬೇಕು:)


ಅಮರ,
ಅವೇ ಸಾಲು ನನಗೂ ಇಷ್ಟ. ಮೆಚ್ಚಿಕೊಂಡಿದ್ಕೆ ಧನ್ಯ

Related Posts Plugin for WordPress, Blogger...