17.6.08

ಜೂನ್ ಮಳೆಯ ಮತ್ತಷ್ಟು ಹನಿತುಂತುರು ಹನಿಗಳು
ಭಾವವಿಲ್ಲದೆ ಸುರಿದು
ಕೊಚ್ಚೆ ಸೇರುತ್ತಿವೆ
ಈ ಥಂಡಿಯಲ್ಲಿ
ಬಿಸಿಕಾಫಿ ಹಂಚಿಕೊಳ್ಳಲು
ನೀನಿಲ್ಲದೆ ಹಾಗೇ ಆರಿಹೋಗಿದೆ....


*************

ವಸುಂಧರೆಯ ಸೇರಲು
ತವಕಿಸಿದ್ದ
ಅಷ್ಟೊಂದು ಮಳೆ
ಹನಿಗಳೆಲ್ಲಾ ಸುರಿದು
ಎತ್ತಲೋ ಹರಿದು
ಅಪರಿಚಿತರಂತೆ
ಹೋಗಿಬಿಟ್ಟವು********


ಅಂಗಳದಲ್ಲಿ ಧೋ ಎಂದು
ಸುರಿವ ಆಟಿ ಮಳೆಗೆ
ಮಕ್ಕಳಿಲ್ಲದ ಮನೆಯಲ್ಲಿ
ಕುಳಿತ
ಅಜ್ಜ ಅಜ್ಜಿ
ಯಾವಾಗಲೋ
ಮೆದ್ದ ಹಪ್ಪಳ, ಚಕ್ಕುಲಿ
ನೆನೆದುಕೊಳ್ಳುತ್ತಿದ್ದಾರೆ..

**********

ಹಳ್ಳಿಯಲ್ಲಿ ಆಕಾಶ
ತೂತುಬಿದ್ದಂತೆ
ಸುರಿವ ಮಳೆಗೂ
ಯಾಕೋ ಉತ್ಸಾಹವಿಲ್ಲ
ಮಳೆಗೆ ನೆನೆದು ಸೀನುತ್ತಾ
ತೋಡಲ್ಲಿ ಮೀನು
ಹಿಡಿವ ಪುಟಾಣಿಗಳೂ ಊರಲ್ಲಿಲ್ಲ...

8 comments:

satish said...

dear venu

hope this mungaru male increase ur hudugata and create more cheluvina chittara and u will have madura milana

satish kumar

ಮಧುಬನ್‌ ಮೆ ರಾಧಿಕೆ... said...

ಮೊದಲ ಹಾಗೂ ಕೊನೆಯ ಹನಿ ಇಷ್ಟವಾಯ್ತು ವೇಣುವಿನೋದ್‌. ‘ತೋಡಲ್ಲಿ ಮೀನು ಹಿಡಿವ ಪುಟಾಣಿಗಳೂ ಊರಲಿಲ್ಲ...’ ಸಾಲು ಯಾಕೋ ಕಾಡಿತು. ಇನ್ನಷ್ಟು ಹನಿ ಮಳೆ ಸುರಿಸಿ.
- ರಾಧಿಕಾ

Harish kera said...

good
- kera

sunaath said...

ನೀವು ಸೆರೆ ಹಿಡಿದ ಚಿತ್ರ ತುಂಬ ಚೆನ್ನಾಗಿದೆ. ಅದರೊಟ್ಟಿಗೆ ನೀವು ಬರೆದ ಹನಿ-ಹನಿ-ಕವನ ಸಹ ತುಂಬಾ ಹಿಡಿಸಿತು.

ಜೋಮನ್ said...

ವಿನೋದ್,

ಜೂನ್ ಹನಿಗಳು ಮುದ್ದಾಗಿವೆ.

ಧನ್ಯವಾದಗಳು.

ಜೋಮನ್.

ಮನಸ್ವಿನಿ said...

ವೇಣು,

ಚಂದದ ಹನಿಗಳು.ಎಲ್ಲವೂ ತುಂಬಾ ಇಷ್ಟವಾದವು.
ಸುಮಾರು ಬ್ಲಾಗುಗಳಲ್ಲಿ ಮಳೆಗಾಲ ಶುರುವಾಗಿದೆ. :)

Deepasmitha said...

ಫೋಟೋಗಳು ನೀವೆ ತೆಗೆದಿದ್ದೆ? ತುಂಬಾ ಚೆನ್ನಾಗಿ ಬಂದಿವೆ. ಕವನಗಳೂ ಅಷ್ಟೆ.

ನಾನೊಬ್ಬ ಹೊಸ ಬ್ಲಾಗಿಗ. ನನ್ನದು http://www.ini-dani.blogspot.com/. ದಯವಿಟ್ಟು ಓದಿ ವಿಮರ್ಶಿಸಿ.

VENU VINOD said...

ಸತೀಶ್,
:) :) :)

ರಾಧಿಕ,
ಹಳ್ಳಿಗಳಿಗೆ ಹೋದಾಗ, ಇಂತಹ ಅನೇಕ ವಿಷಯಗಳು ನನ್ನನ್ನೂ ಕಾಡುತ್ತವೆ...

ಕೇರ,
ನನ್ನ ಪುಟಗಳಿಗೆ ಸ್ವಾಗತ...ವಂದನೆ...

ಸುನಾಥ್,
ಚಿತ್ರ ನನ್ನದಲ್ಲ...ಅಂತರ್ಜಾಲದಲ್ಲಿ ಸಿಕ್ಕಿದ್ದು, ಕವನ ಮಾತ್ರ ನಂದು, ನೀವು ಮೆಚ್ಚುಗೆಗೆ ಧನ್ಯ...

ಜೋಮನ್,
ಮಳೆಹನಿ ಜೂನ್‌ ಮಳೆಯೊಂದಿಗೆ ಸೇರಿತು :)

ಮನಸ್ವಿನಿ,
ಥ್ಯಾಂಕ್ಸ್, ಮಳೆಗಾಲ ಸದ್ಯಕ್ಕೆ ಬ್ಲಾಗಲ್ಲಿ ಮಾತ್ರ...ನಮ್ಮಲ್ಲಿ ಈಗ ನಾಲಕ್ಕು ದಿನದಿಂದ ಬಿಸಿಲು :(

ದೀಪಸ್ಮಿತ,
ಬ್ಲಾಗ್ ಲೋಕಕ್ಕೆ ಮತ್ತು ನನ್ನ ಪುಟ ಎರಡಕ್ಕೂ ನಿಮಗೆ ಸ್ವಾಗತ..ಖಂಡಿತ ನಿಮ್ಮ ಪುಟಗಳನ್ನೂ ನೋಡುವೆ..ಬರ್‍ತಾನೇ ಇರಿ..

Related Posts Plugin for WordPress, Blogger...