ಜೂನ್ ಮಳೆಯ ಮತ್ತಷ್ಟು ಹನಿ
ತುಂತುರು ಹನಿಗಳು
ಭಾವವಿಲ್ಲದೆ ಸುರಿದು
ಕೊಚ್ಚೆ ಸೇರುತ್ತಿವೆ
ಈ ಥಂಡಿಯಲ್ಲಿ
ಬಿಸಿಕಾಫಿ ಹಂಚಿಕೊಳ್ಳಲು
ನೀನಿಲ್ಲದೆ ಹಾಗೇ ಆರಿಹೋಗಿದೆ....*************
ವಸುಂಧರೆಯ ಸೇರಲುತವಕಿಸಿದ್ದಅಷ್ಟೊಂದು ಮಳೆಹನಿಗಳೆಲ್ಲಾ ಸುರಿದುಎತ್ತಲೋ ಹರಿದುಅಪರಿಚಿತರಂತೆಹೋಗಿಬಿಟ್ಟವು********
ಅಂಗಳದಲ್ಲಿ ಧೋ ಎಂದುಸುರಿವ ಆಟಿ ಮಳೆಗೆಮಕ್ಕಳಿಲ್ಲದ ಮನೆಯಲ್ಲಿಕುಳಿತಅಜ್ಜ ಅಜ್ಜಿಯಾವಾಗಲೋಮೆದ್ದ ಹಪ್ಪಳ, ಚಕ್ಕುಲಿನೆನೆದುಕೊಳ್ಳುತ್ತಿದ್ದಾರೆ..**********ಹಳ್ಳಿಯಲ್ಲಿ ಆಕಾಶತೂತುಬಿದ್ದಂತೆಸುರಿವ ಮಳೆಗೂಯಾಕೋ ಉತ್ಸಾಹವಿಲ್ಲಮಳೆಗೆ ನೆನೆದು ಸೀನುತ್ತಾತೋಡಲ್ಲಿ ಮೀನುಹಿಡಿವ ಪುಟಾಣಿಗಳೂ ಊರಲ್ಲಿಲ್ಲ...
9 comments:
dear venu
hope this mungaru male increase ur hudugata and create more cheluvina chittara and u will have madura milana
satish kumar
ಮೊದಲ ಹಾಗೂ ಕೊನೆಯ ಹನಿ ಇಷ್ಟವಾಯ್ತು ವೇಣುವಿನೋದ್. ‘ತೋಡಲ್ಲಿ ಮೀನು ಹಿಡಿವ ಪುಟಾಣಿಗಳೂ ಊರಲಿಲ್ಲ...’ ಸಾಲು ಯಾಕೋ ಕಾಡಿತು. ಇನ್ನಷ್ಟು ಹನಿ ಮಳೆ ಸುರಿಸಿ.
- ರಾಧಿಕಾ
good
- kera
ನೀವು ಸೆರೆ ಹಿಡಿದ ಚಿತ್ರ ತುಂಬ ಚೆನ್ನಾಗಿದೆ. ಅದರೊಟ್ಟಿಗೆ ನೀವು ಬರೆದ ಹನಿ-ಹನಿ-ಕವನ ಸಹ ತುಂಬಾ ಹಿಡಿಸಿತು.
ವಿನೋದ್,
ಜೂನ್ ಹನಿಗಳು ಮುದ್ದಾಗಿವೆ.
ಧನ್ಯವಾದಗಳು.
ಜೋಮನ್.
ವೇಣು,
ಚಂದದ ಹನಿಗಳು.ಎಲ್ಲವೂ ತುಂಬಾ ಇಷ್ಟವಾದವು.
ಸುಮಾರು ಬ್ಲಾಗುಗಳಲ್ಲಿ ಮಳೆಗಾಲ ಶುರುವಾಗಿದೆ. :)
ಫೋಟೋಗಳು ನೀವೆ ತೆಗೆದಿದ್ದೆ? ತುಂಬಾ ಚೆನ್ನಾಗಿ ಬಂದಿವೆ. ಕವನಗಳೂ ಅಷ್ಟೆ.
ನಾನೊಬ್ಬ ಹೊಸ ಬ್ಲಾಗಿಗ. ನನ್ನದು http://www.ini-dani.blogspot.com/. ದಯವಿಟ್ಟು ಓದಿ ವಿಮರ್ಶಿಸಿ.
ಸತೀಶ್,
:) :) :)
ರಾಧಿಕ,
ಹಳ್ಳಿಗಳಿಗೆ ಹೋದಾಗ, ಇಂತಹ ಅನೇಕ ವಿಷಯಗಳು ನನ್ನನ್ನೂ ಕಾಡುತ್ತವೆ...
ಕೇರ,
ನನ್ನ ಪುಟಗಳಿಗೆ ಸ್ವಾಗತ...ವಂದನೆ...
ಸುನಾಥ್,
ಚಿತ್ರ ನನ್ನದಲ್ಲ...ಅಂತರ್ಜಾಲದಲ್ಲಿ ಸಿಕ್ಕಿದ್ದು, ಕವನ ಮಾತ್ರ ನಂದು, ನೀವು ಮೆಚ್ಚುಗೆಗೆ ಧನ್ಯ...
ಜೋಮನ್,
ಮಳೆಹನಿ ಜೂನ್ ಮಳೆಯೊಂದಿಗೆ ಸೇರಿತು :)
ಮನಸ್ವಿನಿ,
ಥ್ಯಾಂಕ್ಸ್, ಮಳೆಗಾಲ ಸದ್ಯಕ್ಕೆ ಬ್ಲಾಗಲ್ಲಿ ಮಾತ್ರ...ನಮ್ಮಲ್ಲಿ ಈಗ ನಾಲಕ್ಕು ದಿನದಿಂದ ಬಿಸಿಲು :(
ದೀಪಸ್ಮಿತ,
ಬ್ಲಾಗ್ ಲೋಕಕ್ಕೆ ಮತ್ತು ನನ್ನ ಪುಟ ಎರಡಕ್ಕೂ ನಿಮಗೆ ಸ್ವಾಗತ..ಖಂಡಿತ ನಿಮ್ಮ ಪುಟಗಳನ್ನೂ ನೋಡುವೆ..ಬರ್ತಾನೇ ಇರಿ..
Loved reading this thank yyou
Post a Comment