6.7.08

ಗೆಲ್ಲು ಚಿಗುರು ಹಾಗೂ ಹನಿ


ಗಾಳಿಮಳೆಗೆ
ಹಳೆಗೆಲ್ಲು
ಮುರಿದು
ಬೀಳುವಾಗ
ಮರ
ಕಣ್ಣೀರಿಳಿಸಿತು
ಮರದ ತೆಕ್ಕೆಯಲ್ಲಿ
ಮೂಡಿದ
ಹೊಸ ಚಿಗುರು
ಮರದ ಕಣ್ಣೀರೊರೆಸಿತು!

***********

ತಲೆಮೇಲೆ
ಗಿರಗಿರ ಸುತ್ತುವ
ಸೀಲಿಂಗ್ ಫ್ಯಾನು
ಮನೆಹಿಂದಿನ
ಹಳಿಯಲ್ಲಿ
ಶಬ್ದವೇದಿ ರೈಲು
ಹೈವೇಯಲ್ಲಿ
ಹರಿಹಾಯುವ
ಸೂಪರ್‍ ಫಾಸ್ಟ್
ಕಾರು

ಆ ದ ರೆ

ಹೃದಯಲ್ಲಿ
ಮಾತ್ರ
ನಿನ್ನ ಚಿತ್ರಗಳ
ಸ್ಲೋಮೋಶನ್
ಮೆರವಣಿಗೆ

********

ಗಾಯಕ ಈಗ
ಹಾಡಿದ್ದು ಹಾಡನ್ನಲ್ಲ
ಪ್ರೇಕ್ಷಕರಲ್ಲಿ ಹಲವರ
ಶೋಕವನ್ನು

3 comments:

ಹಳ್ಳಿಕನ್ನಡ said...

ಹನಿಗಳು ಚೆನ್ನಾಗಿವೆ ಮ್ಯಾನ್.
ಚಿಗುರೊಂದೇ ಭರವಸೆ ಅಲ್ವಾ?

ರಾಧಿಕಾ ವಿಟ್ಲ said...

ವೇಣು,
ಈಗಷ್ಟೇ ಹನಿಯೊಂದಕ್ಕೆ ಚಿಗುರಿದ ತಿಳಿ ಹಸಿರುಗೆಂಪು ಚಿಗುರಿನಷ್ಟೆ ಮುದ್ದಾಗಿವೆ ಈ ಸಾಲುಗಳು.
- ರಾಧಿಕಾ

ತೇಜಸ್ವಿನಿ ಹೆಗಡೆ said...

ಎಲ್ಲಾ ಹನಿಗಳೂ ತುಂಬಾ ಚೆನ್ನಾಗಿವೆ. ಮೊದಲ ಹನಿ ಘನೀಭವಿಸಿ ಮನದೊಳಗೆ ನಿಂತಿತು.

Related Posts Plugin for WordPress, Blogger...