ಮಣ್ಣಿನ ಮಕ್ಕಳು ನಾವೆಲ್ಲಾ....
ಈ ಮಾತು ನೆನಪಾಗಬಹುದು ಈ ಚಿತ್ರಗಳನ್ನು ನೋಡಿದರೆ...ಯಾವುದೋ ಹಳ್ಳಿಗಾಡಿನ ದೃಶ್ಯದಂತೆ ಕಂಡೀತು ಕೂಡಾ.
ಮಂಗಳೂರೆಂಬುದು ಮಾಯಾನಗರಿಯಾಗುತ್ತಿದ್ದರೂ ಅದರ ಹೊರವಲಯದಲ್ಲಿ ಇನ್ನೂ ಹಸಿರು ಹೊದ್ದ ತಾಣಗಳು ಕೆಲವಾದರೂ ಉಳಿದುಕೊಂಡಿರುವ ಕಾರಣ ಈ ಚಿತ್ರ ನಿಮ್ಮ ಮುಂದಿವೆ.
ಬೊಂಡಂತಿಲ ಎಂಬಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉತ್ಸಾಹಿ ಯುವಕರು ಸೇರಿಕೊಂಡು ಪ್ರತಿ ವರ್ಷ ಇಡೀ ದಿನ ಕೆಸರಲ್ಲಿ ಕಳೆಯುತ್ತಾರೆ.
ಹಾಗೆಂದ ಮಾತ್ರಕ್ಕೆ ಮೂಗು ಮುರಿಯಬೇಡಿ. ಕ್ರಮಬದ್ಧವಾಗಿ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಗ್ರಾಮೀಣ ಕ್ರೀಡೆಗಳಾದ ಕೆಸರುಗದ್ದೆ ಓಟ, ಹಗ್ಗ ಜಗ್ಗಾಟ, ಕೆಸರಿನಲ್ಲಿ ಚೆಂಡಾಟದ ಸ್ಪರ್ಧೆ, ನೇಜಿ ನಡುವ ಸ್ಪರ್ಧೆ ನಡೆಯುತ್ತದೆ. ಮಹಿಳೆಯರಿಗಾಗಿ ಪಾಡ್ದನ ಹೇಳುವ ಸ್ಪರ್ಧೆ ಇದೆ.
ಗ್ರಾಮಾಭಿವೃದ್ಧಿ ಯೋಜನೆಯ ‘ಯಶಸ್ವಿನಿ’ಯರು ತುಳು ನಾಡಿನ ಪಾರಂಪರಿಕ ಕಡುಬು(ಅಡ್ಯೆ) ತಯಾರಿಸುತ್ತಾರೆ, ಅದರ ಪ್ರದರ್ಶನ ಇರುತ್ತದೆ.
ಈ ಭಾನುವಾರ ಮೂರನೇ ವರ್ಷದ ಕಾರ್ಯಕ್ರಮವಿತ್ತು. ಎಂದಿನಂತೆ ಭರ್ಜರಿ ಜನ. ಎಂದಿನಂತೆ ಸ್ಪರ್ಧೆಗಳು, ಸ್ಪರ್ಧಿಗಳು. ಮಹಿಳೆಯರು, ಮಕ್ಕಳೂ ದೊಡ್ಡಸಂಖ್ಯೆಯಲ್ಲಿದ್ದರೆ ನೋಡಲೂ ಸಾಕಷ್ಟು ಪ್ರೇಕ್ಷಕರು. ಮೊದಲ ವರ್ಷ ಈ ಹಬ್ಬಕ್ಕೆ ಆಟಿಡೊಂಜಿ ದಿನ ಎಂಬ ಹೆಸರು ಕೊಟ್ಟಿದ್ದರೆ, ಕಳೆದ ವರ್ಷ ಕೆಸರಡೊಂಜಿ ದಿನ ಎಂಬ ನಾಮಕರಣ. ಈ ಬಾರಿ ಗ್ರಾಮೊದ ಗೌಜಿ!ಹೆಚ್ಚೇನೂ ಕೊರೆಯುವುದಿಲ್ಲ ಇಲ್ಲಿ....ಈ ಚಿತ್ರಗಳನ್ನು ನೋಡಿದರೆ ನಿಮಗೆ ಒಂದಿಷ್ಟಾದರೂ ಮಾಹಿತಿ ಸಿಗಬಹುದು.
12 comments:
ತಿಂಡಿ ಬರೀ ಪ್ರದರ್ಶನಕ್ಕೆ ಮಾತ್ರ ಸೀಮಿತವಿತ್ತೋ... ಅಥವಾ ಬಂದವರಿಗೆ ತಿನ್ನಲಿಕ್ಕೆ ಅವಕಾಶವಿತ್ತೋ?
ee benglooral kootu nan hotte urithide!:(
prathi gramadalli inthaha karyakrama nadesa beku venu ,e karyakrama full nodida pratyakshadarshiyalli naanobba antha hemme paduthiddene
Tumba chennagide nimma lekhana & also photos....
ಚೆನ್ನಾಗಿದೆ ಮಣ್ಣಿನ ಮಕ್ಕಳಾ ಚಿತ್ರ!
-ಜಿತೇಂದ್ರ
issa. bayalli neeruride!
ರಾಜೇಶ್,
ಬಂದವರಿಗೆ ಕಣ್ಣಲ್ಲೇ ತಿನ್ನುವ ಅವಕಾಶ ಇತ್ತು :)
ಶ್ರೀನಿಧಿ,
:):):)
ಸುಧೀರ್,
ನೀವಂದಿದ್ದು ಖಂಡಿತಕ್ಕೂ ಒಪ್ಪತಕ್ಕ ಮಾತು.
ರಾಕೇಶ್,
ಧನ್ಯವಾದ
ಜೀತೇಂದ್ರ
ವಂದನೆ.
ಮಿಥುನ್
ಹೆಲ್ಪ್ಲೆಸ್ :(
ಆಹ್, ಕೆಸರೋಟ ಸೂಪರ್.
ಏನೇನ್ರಿ ತಿಂಡಿಗಳು ಅವು.... ಸುಮ್ನೆ ಆಸೆ ಹುಟ್ಟಿಸ್ತೀರ :(
ಪೇಟೆಯ ಮಕ್ಕಳಲ್ಲಿ ಕಾಣಲು ಸಿಗದಂತಹ ಅಪೂರ್ವ ಆನಂದ, ಉತ್ಸಾಹ, ಕಳೆ ಆ ಮಕ್ಕಳ ಮುಖದಲ್ಲಿ ಕಂಡು ತುಂಬಾ ಸಂತೋಷವಾಯಿತು. ಹಾಗೆಯೇ ತುಸು ಬೇಸರವೂ ಆಯಿತು. ಇಂತಹ ಸಿಟಿಗಳಲ್ಲಿ ಮಕ್ಕಳು ಇಷ್ಟು ನಿರುಮ್ಮಳರಾಗಿ ಮನಸಿಗೆ ಬಂದಂತೆ ಆಟವಾಡಲು ಅವಕಾಶವಿಲ್ಲವಲ್ಲ ಎಂದು.
ಒಟ್ಟಿನಲ್ಲಿ ಮೈ ಕೆಸರಾದರೆ ಮನಸಿಗೆ ಸೊಗಸು..:)
ವಿಕಾಸ್, ಈಗೀಗ ಹಳ್ಳಿಗಳಲ್ಲೂ ಈ ಗ್ರಾಮ್ಯ ತಿನಸು ವಿರಳ ಆಗುತ್ತಿದೆ :(
ತೇಜಸ್ವಿನಿ,
ಸಿಟಿಯಲ್ಲಿ ಇಂತಹದ್ದು ಮಾಡಿದರೂ ಯಾರೂ ಬರುವುದಿಲ್ಲ. ಹಳ್ಳಿಯವರಿಗೆ ಮಾತ್ರ ಇಷ್ಟು ಆಸಕ್ತಿ ಇದರಲ್ಲಿ
ತು೦ಬಾ ಥ್ಯಾ೦ಕ್ಸ್ ಉತ್ತಮ ಬರಹಕ್ಕೆ. ಬರಹ ನನ್ನನ್ನು ಹಳ್ಳಿಯ ಜೀವನಕ್ಕೆ ಮತ್ತು ಬಾಲ್ಯಕ್ಕೆ ಕರೆದೊಯ್ಯಿತು. ಅದರಲ್ಲಿ ತೊರಿಸಿದ ತಿ೦ಡಿಗಳನ್ನು ತಿ೦ದು ವರುಷಗಳೇ ಕಳೆದವು. ಈ ಬಾರಿ ಊರಿಗೆ ಹೋದಾಗ ಅಮ್ಮನ ಕೈಯಲ್ಲಿ ಮಾಡಿಸಿ ತಿನ್ನಬೇಕು. ಏನೇ ಹೇಳಿ, ಈ ಬೆ೦ಗಳೂರಿನ ಬದುಕು ಹಳ್ಳಿಯ ಆ ಬದುಕಿನಷ್ಟು ಸೊಗಸಲ್ಲ.
Post a Comment