19.10.08

ಎಸ್‌ಎಂಎಸ್ ಕನವರಿಕೆಗಳು

ಇನ್‌ಬಾಕ್ಸ್‌ಗೆ ಬಂದು
ಬಿದ್ದ ನಿನ್ನ
ಎಸ್ಸೆಂಎಸ್
ಡಿಲೀಟಾಗುವ
ತನಕವಾದರೂ
ನನ್ನೊಂದಿಗಿರು ಸಾಕು!
******
ಆಕೆಗಾಗಿ
ಮನಸಿನಾಳದಿಂದ
ಸುಂದರ ಮೆಸೇಜ್
ರೂಪಿಸಿ ಕಳುಹಿಸುತ್ತಿದ್ದೆ
ಅದನ್ನೇ ಫಾರ್ವರ್ಡ್
ಮಾಡಿ ಅವಳು ಕನಸಿನ
ಹುಡುಗನನ್ನು ಪಡೆದಳು!
ಈಗ ನನ್ನ ಮನಸಿನ
ಟೈಪ್‌ಪ್ಯಾಡ್ ಬರಿದು...

******
ನಾನು ನಿನ್ನನ್ನು
ಎಷ್ಟು ಪ್ರೀತಿಸುವೆನೆಂಬುದಕ್ಕೆ
ನಿನಗೆ ಮೆಸೇಜ್
ಟೈಪಿಸಿ ನೋಯುತ್ತಿರುವ
ಈ ಬೆರಳುಗಳೇ ಸಾಕ್ಷಿ!

11 comments:

Lakshmi S said...

very nice ! :-) :-)

ರಾಜೇಶ್ ನಾಯ್ಕ said...

ಯಾರವಳು?..!

ಜೋಮನ್ said...

ಹ್ಹ ಹ್ಹ...

sunaath said...

ಕರನ್ಸಿ ತೀರುವವರೆಗೆ ಕುಟ್ಟುತ್ತಿರು ಕೀಪ್ಯಾಡ್.

ಸಂಭವಾಮಿ ಯುಗೇ ಯುಗೇ said...

chennagive...

ಕೆನೆ Coffee said...

:)

shivu K said...

ಯಾರವಳು ನಿಮಗೆ ಕೈಕೊಟ್ಟವಳು ? ಚೆನ್ನಾಗಿದೆ.
ಶಿವು.ಕೆ
ನನ್ನ ಬ್ಲಾಗಿಗೆ ಬನ್ನಿ ಅಲ್ಲ್ಲಿ ನಾಚಿಕೆಯಿಲ್ಲದ್ ಪಾರಿವಾಳ ಕುಟುಂಬ ಬಂದಿದೆ.
ಮತ್ತೊಂದು ಕ್ಯಾಮೆರಾ ಹಿಂದೆ ಬ್ಲಾಗಿನಲ್ಲಿ ಮತ್ತೊಂದು ಲೇಖನ ಬರೆದಿದ್ದೇನೆ ಓದಿ ಕಾಮೆಂಟಿಸಿ.

ಮಧುಬನ್‌ ಮೆ ರಾಧಿಕೆ... said...

ಎಸ್‌ಎಂಎಸ್‌ ಕನವರಿಕೆಗೆ ಗರಿಯ ನೇವರಿಕೆ... ವಾವ್ಹ್‌. ಸುಂದರ ಕಲ್ಪನೆ ವೇಣು.
- ರಾಧಿಕಾ

ರಾಧಾಕೃಷ್ಣ ಆನೆಗುಂಡಿ. said...

sms kavana.........

yaradu kavana......

ಮಾಂಬಾಡಿ said...

ನಿಮ್ಮ ಕರೆನ್ಸಿ ಖಾಲಿ ಅಗುವವರೆಗೆ,
ಎಸ್ಸೆಂಎಸ್ ಟೈಪ್ ಮಾಡುತ್ತಲೇ ಇರಿ,
ಹಳೆಯದ್ದೇ ಯಾಕೆ ಹೊಸ ‘ಆಕೆ’
ಸಿಕ್ಕೇ ಸಿಗುತ್ತಾಳೆ ನೋಡ್ತಾ ಇರಿ..

VENU VINOD said...

ಪ್ರತಿಕ್ರಿಯಿಸಿದ ಎಲ್ಲರಿಗೂ ವಂದನೆಗಳು:)

Related Posts Plugin for WordPress, Blogger...