11.11.08

ಚಂದಿರನೊಂದಿಗೆ ಒಂದು ರಾತ್ರಿ....ಧರೆಗಿಂದು ಬಹಳ
ಬಾಯಾರಿಕೆ
ತುಸುತುಸುವಾಗಿ
ಬೆಳದಿಂಗಳ
ಮೊಗೆದು ಕೊಡು

************

ಪೂರ್ತಿ ಹುಣ್ಣಿಮೆಯಾಗಿ
ಅರಳಬೇಡ
ಮೋಡದ ಮರೆಗೆ ಸರಿ
ನಿನ್ನ ಓರಗೆಯ ತಾರೆಯರನ್ನೂ
ಸ್ವಲ್ಪ ನೋಡಬೇಕಿದೆ


**********

ಬೆಳದಿಂಗಳ ನಶೆಗೆ
ಮರಗಿಡಬಳ್ಳಿ
ತೂಗುತ್ತವೆ ಜೋಕಾಲಿ
ಹಾಡೇ ಇಲ್ಲದ
ಬದುಕಲ್ಲಿ ಅರಳಿದೆ ರಂಗೋಲಿ

5 comments:

ಮಾಂಬಾಡಿ said...

ಕೊನೆಯ ಸಾಲುಗಳು ಮುದ ನೀಡಿತು..

ತೇಜಸ್ವಿನಿ ಹೆಗಡೆ- said...

ಎಲ್ಲಾ ಸಾಲುಗಳೂ ಇಷ್ಟವಾದವು.

ಸಿಂಧು Sindhu said...

ವೇಣು,

ತುಂಬ ಚೆನಾಆಆಆಆಆಆಆಆಆಆಆಗಿದೆ.

ಪ್ರೀತಿಯಿಂದ
ಸಿಂಧು

Basavaraj.S.Pushpakanda said...

adddddddddbhutha...

VENU VINOD said...

ಮಾಂಬಾಡಿ, ತೇಜಸ್ವಿನಿ, ಸಿಂಧು, ಬಸವರಾಜ್‌ರಿಗೆ ವಂದನೆ

Related Posts Plugin for WordPress, Blogger...