ಕೆಂದಾವರೆಗೆ
ಕೆಸರುಕೆರೆಯ
ಸಹವಾಸವೇಕೆ?
ಪ್ರೇಮವೇ
ಪ್ರೀತಿಯೇ
ಗೆಳೆತನವೇ?
ಅಥವಾ...ಸಹವಾಸವೇಕೆ?
ಪ್ರೇಮವೇ
ಪ್ರೀತಿಯೇ
ಗೆಳೆತನವೇ?
ಹೆಣ್ಣು
ತವರಿನಲ್ಲಿ ಬಾಲ್ಯ,
ತಾರುಣ್ಯ ಕಳೆದು
ಗಂಡನ ಮನೆಗೆ ಹೋಗುವ
ಹಾಗೆ
ದೇವರ ಪಾದಕ್ಕೋ
ಚೆಂದದ ಯುವತಿಯರ
ಮುಡಿಗೋ ಹೋಗುವ ಈ
ತಾವರೆಗೆ
ಕೆರೆಯೊಂದು
ತಾಯಿಮನೆಯೇ?!
ಸುವಾಸನೆಬೀರುವ
ಕಮಲಕ್ಕೆ ಕೆಸರಕೆರೆಯಲ್ಲಿರಲು
ತುಸುವೂ ಮುಜುಗರವಿಲ್ಲ
ಮನುಜರೊಳಗೆ
ಮಾತ್ರ ಈ ಭೇದವೇಕೆ
ಸಂಬಂಧಗಳಿಗೊಂದು
ಹೆಸರು ಯಾಕೆ?
ಕಮಲದಳ-೧
ನನ್ನೆದೆಯ ಕೊಳದಲ್ಲಿ
ಇದುವರೆಗೆ ಬೀಜವಾಗಿಯೇ
ಉಳಿದಿದ್ದ ತಾವರೆಯ
ಗಿಡವೊಂದು ಅರಳಿ
ನಿಂತು ನಗತೊಡಗಿದೆ
ಕಮಲದಳ-೨
ಮುಂಜಾನೆಯ ಮಂಜಿಗೆ
ಪರಿಮಳವೆಲ್ಲ
ತೊಳೆದುಹೋಗಿ
ಮುಖ ಕೆಂಪಾಗಿಸಿ
ಕುಳಿತಿದ್ದ ಕೆಂದಾವರೆಯ
ನೋಡಿದ
ಕೊಳದ ಕಪ್ಪೆ ನಸುನಕ್ಕಿತು!
3 comments:
ಕಮಲದ ಸುಂದರ ಚಿತ್ರಗಳಂತೆ,ಕವನವೂ ಸುಂದರವಾಗಿದೆ.
ವೇಣು ವಿನೋದ್ ಅವರೆ...
"ಕಮಲಕ್ಕೆ ಕೆಸರಕೆರೆಯಲ್ಲಿರಲು
ತುಸುವೂ ಮುಜುಗರವಿಲ್ಲ
ಮನುಜರೊಳಗೆ
ಮಾತ್ರ ಈ ಭೇದವೇಕೆ
ಸಂಬಂಧಗಳಿಗೊಂದು
ಹೆಸರು ಯಾಕೆ?"
ಮೇಲಿನ ಸಾಲುಗಳು ಹೆಚ್ಚು ಇಷ್ಟವಾದವು.
ಕಪ್ಪೆಗೇನು ಗೊತ್ತು ಕೆಂದಾವರೆಯ ದುಃಖ?
ಕವನಗಳು ಚೆನ್ನಾಗಿವೆ. ಚಿತ್ರಗಳು- ಕೆನ್ನೈದಿಲೆಯವು. ತಾವರೆಗಳಲ್ಲ.
ತಾವರೆಯೆಲೆ ನೀರಿನಿಂದ ಮೇಲೆದ್ದು ನಿಲ್ಲುತ್ತೆ, ಎಲೆ ಉರುಟಾಗಿರುತ್ತೆ. ಹೂವುನ ಎಸಳೂ ತುಸು ಉರುಟು, ಚೂಪಾದ ತುದಿ ಇರುವುದಿಲ್ಲ.
Post a Comment