26.1.09

ಶಾಂತಿಪ್ರಿಯ ದೇಶಕ್ಕೊಂದು ಕಂಗ್ರಾಟ್ಸ್!

ಮತ್ತೊಮ್ಮೆ ಗಣರಾಜ್ಯೋತ್ಸವ ಸಮಾರಂಭ ಅದ್ದೂರಿಯಾಗಿ ನಡೆದಿದೆ...
ಸಾಕಷ್ಟು ಭದ್ರತೆ ನಡುವೆ ಯಾವುದೇ ಅಹಿತಕರ ಘಟನೆ ಇಲ್ಲದೆ ನಡೆದಿರುವುದೇ ಅಚ್ಚರಿ!
ಅಷ್ಟರ ಮಟ್ಟಿಗೆ ಭಾರತೀಯರಲ್ಲಿ ಭಯೋತ್ಪಾದನೆ ಭೀತಿ ಮೂಡಿಸಿದೆ. ಭಾರತೀಯ ಗಣತಂತ್ರ ವ್ಯವಸ್ಥೆ ೬೦ನೇ ವರ್ಷ ಪೂರೈಸಿದೆ. ಜಗತ್ತಿನಲ್ಲೇ ವಿಶೇಷ ನಮ್ಮ ಜಾತ್ಯತೀತ ಪ್ರಜಾಪ್ರಭುತ್ವ ಗಣತಂತ್ರ ವ್ಯವಸ್ಥೆ.
ಭೀತಿವಾದ,
ಪ್ರತ್ಯೇಕತಾವಾದ,
ಒಡಕು,
ಕೋಮುವಾದ,
ನಕಲಿ ಜಾತ್ಯತೀತತೆ
ಬಡತನ,
ಹಸಿವು,
ಇವೆಲ್ಲ -veಗಳ ನಡುವೆಯೂ ನಾವು ಭಾರತೀಯರು...ಇದನ್ನು ಅಲ್ಲಗಳೆಯುವಂತಿಲ್ಲ. ಎಂತಹ ಸಂಕಷ್ಟ ಬಂದೊದಗಿದರೂ ಆಂತರಿಕ ಪರಿಸ್ಥಿತಿಗಳು ವಿರುದ್ಧವಾಗಿ ನಿಂತರೂ ನಾವೆಲ್ಲರೂ ಒಂದಾಗಬಲ್ಲೆವು ಎಂಬ ಸಂದೇಶ ಇತ್ತೀಚೆಗೆ ಮುಂಬೈ ಮೇಲೆ ಉಗ್ರರ ದಾಳಿ ನಡೆದ ಬಳಿಕ ಇಡೀ ದೇಶದಲ್ಲಿ ಹೊರಹೊಮ್ಮಿದೆ.
ಪಾಕಿಸ್ತಾನ ವಿರುದ್ಧ ಆರಂಭದಲ್ಲಿ ಭಾರತೀಯ ಸರ್ಕಾರ ತೋರಿದ ಜಿಗುಟು ಕಠಿಣ ಧೋರಣೆಯನ್ನು ಮುಂದುವರಿಸಿಲ್ಲ ಎನ್ನುವ ನೋವು ಅನೇಕ ಭಾರತೀಯರಲ್ಲಿ ಇರುವುದು ನಿಜ. ಆದರೂ ಭಾರತದಂತಹ ಶಾಂತಿಪ್ರಿಯ ದೇಶವನ್ನು ಪದೇ ಪದೇ ತೊಂದರೆಗೆ ಸಿಲುಕಿಸುವ ಪಾಕಿಸ್ತಾನ ಸ್ವಯಂಕೃತಾಪರಾಧಕ್ಕೆ ತಾನೇ ಸಿಲುಕುವ ಹಂತದಲ್ಲಿದೆ.
ಬಾಂಗ್ಲಾದೇಶವೆನ್ನುವ ಪುಟ್ಟ ರಾಷ್ಟ್ರವೂ ಭಾರತಕ್ಕೆ ತಲೆನೋವು ತರುತ್ತಿದೆ, ಭಾರತದ ೭ ಸೋದರಿಯರ ಒಡಲೊಳಗೆ ಪ್ರತ್ಯೇಕತಾವಾದ ಹುಟ್ಟುಹಾಕಲು ಬಾಂಗ್ಲಾ ಉಗ್ರರು ಮಸಲತ್ತು ನಡೆಸುತ್ತಿದ್ದಾಗಲೇ ಶೇಖ್ ಹಸೀನಾ ಸರ್ಕಾರ ಆಡಳಿತ ವಹಿಸಿಕೊಂಡಿದ್ದು ಒಂದಷ್ಟು ಆಶಾವಾದಕ್ಕೆ ಕಾರಣ.

ಪ್ರಜಾಪ್ರಭುತ್ವದಿನದಂದು ದೆಹಲಿ ರಾಜಪಥದಲ್ಲಿ ಶಿಸ್ತುಬದ್ಧ ಹೆಜ್ಜೆ ಹಾಕುವಷ್ಟೇ ನೀಟಾಗಿ ವೈರಿಗಳ ಹುಟ್ಟಡಗಿಸುವ ನಮ್ಮ ಯೋಧರು, ಭಾರತವಿನ್ನೂ ದೇಶವಾಗಿ ಉಳಿದಿರಲು ಕಾರಣವಾದ ಎಲ್ಲರಿಗೂ ಗಣರಾಜ್ಯ ದಿನದ ಶುಭಾಶಯಗಳು...

3 comments:

shivu.k said...

ವೇಣು ಆನಂದ್,

ನಿಮ್ಮ ಅಭಿಪ್ರಾಯದಂತೆಯೇ ನನಗೂ ಅನ್ನಿಸಿತ್ತು....ದೇವರೆ ಗಣರಾಜ್ಯ ದಿನದಂದೂ ಏನು ಆಗದಿರಲಿ ಅಂತ ಬೇಡಿಕೊಂಡಿದ್ದು ಉಂಟು.....ಸದ್ಯ ಏನು ಆಗಿಲ್ಲ...ಕಾರಣ ಭಾರತೀಯರೆಲ್ಲಾ ಮಾನಸಿಕವಾಗಿ ಒಂದಾಗಿರುವುದು.....ಮತ್ತೊಮ್ಮೆಈ ದಿನ ನಮ್ಮ ಭಾರತಾಂಬೆಗೊಂದು ಸಲಾಂ!!

Shree said...

ಹೊರಗಿದ್ದು ಶಾಂತಿ ಕದಡುವ ವೈರಿಗಳ ಜತೆಗೆ ನಮ್ಮ ಒಳಗೆಯೇ ಇದ್ದು ಶಾಂತಿ ಪ್ರಿಯ ರಾಷ್ಟ್ರವೆಂಬ ನಮ್ಮ ಹೆಗ್ಗಳಿಕೆಯನ್ನು ನುಚ್ಚುನೂರಾಗಿಸುವ ನಮ್ಮೊಳಗಿನ ವೈರಿಗಳನ್ನೂ ಗೆಲ್ಲುವಂತಾಗಲಿ, ಗಣರಾಜ್ಯೋತ್ಸವದಂದು ಅಸ್ತಿತ್ವಕ್ಕೆ ಬಂದ ನಮ್ಮ ಸಂವಿಧಾನವೇ ನಮ್ಮ ಬದುಕಿನ ರೀತಿಗೆ ದಾರಿದೀಪವಾಗಲಿ...

ಗಣರಾಜ್ಯೋತ್ಸವದ ಶುಭಾಶಯ.

sunaath said...

ಭಾರತವು ಯಾವಾಗ ನಿಜವಾದ ಪ್ರಜಾಪ್ರಭುತ್ವವುಳ್ಳ ಗಣರಾಜ್ಯವಾಗುವುದೋ ದೇವರೇ ಬಲ್ಲ!

Related Posts Plugin for WordPress, Blogger...