ಅಲೆಗಳಲ್ಲಿ ನನ್ನ ನೋವುಗಳೆಲ್ಲ
ಕೊಚ್ಚಿಕೊಂಡು ಹೋಗಲಿ
ನಿನ್ನ ನಾಳೆಗಳಲ್ಲಿ
ನನ್ನ ಇಂದು
ಪಿಳಿ ಪಿಳಿ
ಕಣ್ಣು ಬಿಡಲಿ
ಕ್ಷಣಕ್ಷಣಕ್ಕೂ ಬದಲಾಗುವ
ನಿನ್ನ ಮಾತಿನ ಮೋಡಿಯಲ್ಲಿ
ಸಿಲುಕಿದ ನನ್ನ ಹಾಡುಗಳೆಂದಿಗೂ
ಮಾಧುರ್ಯ ಕಳೆದುಕೊಳ್ಳದಿರಲಿ
ದಿನರಾತ್ರಿ ಕನಸುಕಾಣುವ
ನಿನ್ನ ಕಂಗಳ ರೆಪ್ಪೆಗಳು
ನನ್ನೆದೆಯ ಕ್ಯಾನ್ವಾಸಲ್ಲಿ
ಚಿತ್ತಾರ ಬರೆಯಲಿ..
ನಮ್ಮ ಅಗಲುವಿಕೆಯ
ಬೇಗುದಿಯೆ ಈ ಛಳಿಗೆ
ಹೊದಿಕೆಯಾಗಲಿ..
11 comments:
ವೇಣು ಆನಂದ್,
ಮತ್ತೊಬ್ಬರ ಸಂತೋಷದಲ್ಲಿ ನಿಮ್ಮ ನೋವುಗಳನ್ನು ಮರೆಯುವ ಪ್ರಯತ್ನದಲ್ಲಿ ಕವನ ತುಂಬಾ ಚೆನ್ನಾಗಿದೆ...
:)
ವೇಣುವಿನೋದ್,
ಕವನ ಚೆನ್ನಾಗಿದೆ.,
ವೇಣು ವಿನೋದ್ ಅವರೆ...
"ನಿನ್ನ ನಾಳೆಗಳಲ್ಲಿ
ನನ್ನ ಇಂದು
ಪಿಳಿ ಪಿಳಿ
ಕಣ್ಣು ಬಿಡಲಿ "
ಈ ಸಾಲು ಇನ್ನಷ್ಟು ಇಷ್ಟವಾಯಿತು.
ಚೆಂದ ಕವನ ಯಾವತ್ತಿನಂತೆ. ಬರೆಯುತ್ತಿರಿ.
ವೇಣು,
ತುಂಬಾ ಸುಂದರ ಕವನ,
ನಿಮಗೆ ಹಾಗೂ ನಿಮ್ಮ ಕುಟುಂಬದವರಿಗೆ ಯುಗಾದಿಯ ಹಾರ್ದಿಕ ಶುಭಾಶಯಗಳು.
ಕವನ ಚೆನ್ನಾಗಿತ್ತು.ತಡವಾಗಿ ಕಮೆ0ಟ್ ಮಾಡಿದಕ್ಕೆ ವಿಷಾದ... ನಿಮಗೆ ಹಾಗೂ ನಿಮ್ಮ ಕುಟುಂಬದವರಿಗೆ ಯುಗಾದಿಯ ಹಾರ್ದಿಕ ಶುಭಾಶಯಗಳು.
ಎಷ್ಟು ಚೆನ್ನಾಗಿ ಕವನ ಬರೀತೀರಿ..(:)
-ಧರಿತ್ರಿ
ವಾಹ್
Shivu, mambady,paranjape, shantala, guru, lancy, dharitri matthu mithunge thanks... :)
ನಮ್ಮ ಅಗಲುವಿಕೆಯ ಬೇಗುದಿಯೆ ಈ ಛಳಿಗೆ ಹೊದಿಕೆಯಾಗಲಿ..
V nice...
Post a Comment