29.7.09

ಮಳೆ ನನಗೆ ಎಲ್ಲವೂ....

ಈ ಮಳೆ ಅನ್ನೋದು...
ನನಗೆ
ನಗು,
ಏಕಾಂತ,
ಪ್ರೇಮಿ,
ಜೋಗುಳ,
ನಿದ್ದೆ,
ಈ ಎಲ್ಲವೂ ಹೌದು...
ಆದರೆ
ನಿನಗೋ
ಅದು
ಬರೀ ಮಳೆ ಅಷ್ಟೇ !


********

ಮಳೆ ಬಂದು
ಹುಲ್ಲು ಚಿಗುರಿದೆ
ಹಕ್ಕಿ ಚಿಲಿಪಿಲಿಗುಟ್ಟಿವೆ
ಹೂದಳಗಳಲ್ಲಿ
ನಕ್ಕಿವೆ ಜಲಬಿಂದು,
ಏನು ಪ್ರಯೋಜನ ಹೇಳು
ಹೂವಿನ
ಸುತ್ತ ದುಂಬಿಯ ಸುಳಿವಿಲ್ಲ!


*********
ರಾತ್ರಿ
ಮಳೆ ಸುರಿದದ್ದಾಗಿದೆ
ಸಿ.ಡಿ ಪ್ಲೇಯರಿನ
ಹಾಡೂ ನಿಂತಿದೆ
ಕಣ್ಣೆವೆಯಲ್ಲಿ ನಿದ್ದೆಯಿಲ್ಲ
ನನ್ನೆದೆಯಲ್ಲಿ ನೀ ಬಂಧಿಯಾಗಲು
ಸಿಡಿಲು ಬಡಿಯಲೇಬೇಕಾ !!

10 comments:

shivu.k said...

ವೇಣು ವಿನೋದ್,

ಮಳೆಯ ಬಗ್ಗೆ ಸೊಗಸಾದ ಕವನ. ಅದಕ್ಕೆ ತಕ್ಕಂತೆ ಫೋಟೋ.

ಈಗ ತಾನೆ ಮೈಸೂರಿನಿಂದ ಒಂದಷ್ಟು ಮಳೆಹನಿಗಳ ಫೋಟೋ ತೆಗೆದುಕೊಂಡು ಬಂದಿದ್ದೇನೆ. ಮುಂದಿನ ಲೇಖನ ಸಮೇತ ಬ್ಲಾಗಿಗೆ ಹಾಕುತ್ತೇನೆ. ಖಂಡಿತ ನೋಡಲು ಬನ್ನಿ.

Unknown said...

ವೇಣು ಸಾರ್,
ಸು೦ದರ ಮಳೆ ಕವಿತೆ .. ಅದಕ್ಕೆ ಸರಿಯಾದ ಜಿನುಗುತ್ತಿರುವ ಮಳೆಯ ಚಿತ್ರ .. ಕಾ೦ಬಿನೇಷನ್ ತು೦ಬಾ ಒಳ್ಳೆಯದಿದೆ .. ಆಪ್ತ ಅನ್ನುವ ಅನುಭವ ನೀಡುತ್ತಿದೆ ..
ಧನ್ಯವಾದಗಳು

Anonymous said...

ತುಂಬಾ ಚೆನ್ನಾಗಿವೆ

ಶರಶ್ಚಂದ್ರ ಕಲ್ಮನೆ said...

ವೇಣು,
ಮಳೆ ಹನಿಗಳು ಚನ್ನಾಗಿವೆ.. ಮೊದಲ ಹನಿ ತುಂಬಾ ಇಷ್ಟವಾಯಿತು..

ಏಕಾಂತ said...

ಹಲೋ ವೇಣು ಅವರೆ...
ತಣ್ಣನೆ ಮಳೆಯಲ್ಲಿ ಬೆಚ್ಚನೆ ಕಾಫಿ ಹೀರಿದಂತಿದೆ ಸಾಲುಗಳು. ಕೊನೇಯ ಎರಡು ಸಾಲುಗಳಿಂದಾಗಿ ಮತ್ತೆ ಮತ್ತೆ ಓದುವಂತಾಗಿತ್ತಿದೆ. ಮತ್ತೆ ಬರೆಯಿರಿ...

ವಿನಾಯಕ ಭಟ್ಟ said...

ಕವನಗಳು ಅದ್ಭುತವಾಗಿವೆ. ಕೊನೆಯ ಕವನವಂತೂ ಸೂಪರ್
ಅವಳಿಗೆ ನಿನ್ನೆದೆಗೆ ಒರಗಿದರೇ ಸಿಡಿಲು ಬಡಿದರೆ ಎಂಬ ಭಯವೇನೊ????!!!

ಹರೀಶ ಮಾಂಬಾಡಿ said...

ಮಳೆ-ಏಕಾಂತ...
ಅನುಭವಿಸಿದವರಿಗೇ ಗೊತ್ತು.
ಮುಂದಿನ ವರ್ಷ ಪ್ರೇಮಹನಿಗಳನ್ನು ಬ್ಲಾಗ್ನಲ್ಲಿ ಕಾಣಿಸಿ :)

mouna said...

nimma photo, venu, thumba ne chennagide, fantastic! keep it up!

ಮಂಜುನಾಥ ತಳ್ಳಿಹಾಳ said...

ನಮಸ್ಕಾರ ವೇಣು ಸಾರ್,
"ಮಳೆ ನನಗೆ ಎಲ್ಲವು" ಕವನ ತುಂಬಾ ಚನ್ನಾಗಿವೆ,
ತಮಗೆ ಸಮಯ ಸಿಕ್ಕರೆ ನನ್ನ ಬ್ಲಾಗ್ "http://snehakkagi.blogspot.com"ಗೆ ಬೆಟ್ಟಿ ಕೊಡಿ,
**ಮಂಜುನಾಥ ತಳ್ಳಿಹಾಳ

Shiv said...

ವೇಣು,

ಮಳೆ ಕವನ ಚೆನ್ನಾಗಿ ಜಿನುಗಿದೆ.

ಮಳೆ ನಂತರ ಯಾಕೋ ಎನೂ ಬಂದಾಗೆ ಇಲ್ಲ?

-ಪಾತರಗಿತ್ತಿ

Related Posts Plugin for WordPress, Blogger...