25.8.09

ಹಿಂಗಾರಿನ ಕನವರಿಕೆಗಳು

ಅಬ್ಬ...!
ಆ ನಿಮ್ಮ ಅಪರಾತ್ರಿಯ
ಯೋಜನೆಗಳ ನೋಡಿಯೇ
ಬೆಳದಿಂಗಳ ಕನಸು ಹಾರಿಹೋಯಿತು

---------------

ನನ್ನ ಕನವರಿಕೆಗಳ
ಕೇಳಬಯಸುವೆಯಾ
ಹಾಗಾದರೆ ನನ್ನ
ತಲೆದಿಂಬಿಗೆ ಕಿವಿಯಾಗು
---------------
ರುಚಿಗೆ ತಕ್ಕಷ್ಟು ಉಪ್ಪು,
ನಗುವಿಗೆ ಬೇಕಾದಷ್ಟು ಮಾತು
ಹಾಗೂ
ಪ್ರೀತಿಗೆ ಬೇಕು
ಒಂದಿಷ್ಟು ಕನಸು!

---------------

ಪಾಪ...
ಚಂದಿರ ಬೆಳದಿಂಗಳ
ರಾತ್ರಿಯಲ್ಲೂ ಅತ್ತಿರಬೇಕು
ಹುಲ್ಲಗರಿಗಳ ತುಂಬ
ಕನಸಿನ ಹನಿ ಚೆಲ್ಲಿವೆ

--------------

ನಾನು ನಿನ್ನ ಕನಸುಗಳಲ್ಲಿ ಬಾರದೇ
ಇದ್ದರೂ ಚಿಂತೆಯಿಲ್ಲ
ನಿನ್ನ ನಾಳೆಗಳಲ್ಲಿ
ಪಾಲ್ಗೊಳ್ಳಲು ಬಿಡು
ಅಷ್ಟು ಸಾಕು

9 comments:

roopa said...

ವೇಣು ಸಾರ್ ,
ಒಳ್ಳೆಯ ಕವಿತೆಗಳು .. ತು೦ಬಾ ಅರ್ಥ ಪೂರ್ಣ .

ಹರೀಶ ಮಾಂಬಾಡಿ said...

ನಿದ್ರಿಸಲು ಬಿಡದೆ ಕಾಡಿದ ಕವನವಾ?
ವಾಹ್ ಚೆನ್ನಾಗಿದೆ

sunaath said...

ಚೆನ್ನಾಗಿವೆ ಈ ಹನಿಗವನಗಳು.

PARAANJAPE K.N. said...

ಪಾಪ...
ಚಂದಿರ ಬೆಳದಿಂಗಳ
ರಾತ್ರಿಯಲ್ಲೂ ಅತ್ತಿರಬೇಕು
ಹುಲ್ಲಗರಿಗಳ ತುಂಬ
ಕನಸಿನ ಹನಿ ಚೆಲ್ಲಿವೆ
..... ಚೆನ್ನಾಗಿದೆ

ತೇಜಸ್ವಿನಿ ಹೆಗಡೆ- said...

"ನನ್ನ ಕನವರಿಕೆಗಳ
ಕೇಳಬಯಸುವೆಯಾ
ಹಾಗಾದರೆ ನನ್ನ
ತಲೆದಿಂಬಿಗೆ ಕಿವಿಯಾಗು"

--ತುಂಬಾ ಇಷ್ಟವಾದ ಸಾಲುಗಳು.

shivu said...

ವೇಣು ವಿನೋದ್,

ಚುಟುಕು ಕವನಗಳು ಇಷ್ಟವಾದವು..ಅದರಲ್ಲೂ
ಪಾಪ...
ಚಂದಿರ ಬೆಳದಿಂಗಳ
ರಾತ್ರಿಯಲ್ಲೂ ಅತ್ತಿರಬೇಕು
ಹುಲ್ಲಗರಿಗಳ ತುಂಬ
ಕನಸಿನ ಹನಿ ಚೆಲ್ಲಿವೆ

ತುಂಬಾ ಚೆನ್ನಾಗಿದೆ..

ಸಿಬಂತಿ ಪದ್ಮನಾಭ said...

venu, ivu baree naviru saalugalalla, manassina aalakke iliyuva berugalu. nimma kaavya shakti nijakku gaadhavaagide.

VENU VINOD said...

ರೂಪ, ಮಾಂಬಾಡಿ, ಸುನಾಥ್, ಪರಾಂಜಪೆ,ತೇಜಸ್ವಿನಿ, ಶಿವು, ಸಿಬಂತಿ ನಿಮ್ಮೆಲ್ಲರ ಪ್ರೋತ್ಸಾಹ ಖುಷಿಕೊಟ್ಟಿದೆ

Ramya said...

ನಾನು ನಿನ್ನ ಕನಸುಗಳಲ್ಲಿ ಬಾರದೇ
ಇದ್ದರೂ ಚಿಂತೆಯಿಲ್ಲ
ನಿನ್ನ ನಾಳೆಗಳಲ್ಲಿ
ಪಾಲ್ಗೊಳ್ಳಲು ಬಿಡು
ಅಷ್ಟು ಸಾಕು

Related Posts Plugin for WordPress, Blogger...