2.9.09

ಮಂಜುಮುಸುಕಿದ ದಾರಿಯ ಮೂರನೇ ತಿರುವಿನಲ್ಲಿ

ಮಂಜುಮುಸುಕಿದ ದಾರಿಯಲ್ಲಿ ನನ್ನ ಪಯಣವೀಗ ಮೂರು ವರ್ಷ ಎಂಬ ಮೈಲಿಗಲ್ಲು ತಲಪಿದೆ....
ಈ ಮೊದಲು ನೂರು ಪೋಸ್ಟ್ ಆದಾಗ ಇರಲಿ, ಕಳೆದ ಎರಡು ವರ್ಷಗಳಲ್ಲಿ ಯಾವುದೇ ಇಂತಹ ಮೈಲಿಗಲ್ಲನ್ನು ನೆನಪಿಸಿಕೊಳ್ಳಲು ನಾನು ಹೋಗಿರಲಿಲ್ಲ.
ಆದರೆ ಮೂರು ವರ್ಷ ಬ್ಲಾಗಿಂಗ್ ಎಂದರೆ ಅದು ನನ್ನಂಥ ಸೋಮಾರಿಗಳ ಪಾಲಿಗೆ ದೊಡ್ಡ ವಿಚಾರವೇ...
೨೦೦೬ರ ಆಗಸ್ಟ್ ೩೧ರಂದು ಮಂಜು ಮುಸುಕಿದ ದಾರಿಯಲ್ಲಿ ನನ್ನ ಮೊದಲ ಹೆಜ್ಜೆ ಗುರುತು ಮೂಡಿತ್ತು. ಗೆಳೆಯರಾದ ಚೇವಾರ‍್, ದೀಪಾ, ಕೃಷ್ಣ ಮೋಹನ್ ಅವರ ಮಾಹಿತಿಯಿಂದಾಗಿ ಬ್ಲಾಗ್ ನನಗೆ ಪರಿಚಯವಾದದ್ದು.
ಆರಂಭದಲ್ಲಿ ಸುಮ್ಮನೇ ಏನೇನೋ ಗೀಚುತ್ತಿದ್ದೆ. ಆಗಲೇ ಬ್ಲಾಗಿಗರ ಸಂಖ್ಯೆ ಏರುಗತಿಯಲ್ಲಿ ಇತ್ತು. ಆದರೂ ಅನೇಕ ಮಂದಿ ನನ್ನ ಪುಟ ಗಮನಿಸಿದರು, ನನ್ನ ಫಡಪೋಶಿ ಬರಹಗಳಿಗೂ ಪ್ರತಿಸ್ಪಂದಿಸಿದರು. ಅನೇಕ ಹಿರಿಯರ ಬರಹಗಾರರೂ ಪ್ರತಿಕ್ರಿಯಿಸಿದರು.
ಏನೇ ಇರಲಿ ಬ್ಲಾಗ್ ಎನ್ನುವುದು ನನ್ನ ಬರಹಕ್ಕೆ ಒಂದು ರೂಪ ಕೊಟ್ಟಿದೆ. ಅನೇಕ ಒಳ್ಳೆಯ ಗೆಳೆಯರನ್ನು ಕೊಟ್ಟಿದೆ. ಸಂಪರ್ಕ ವೃದ್ದಿಸಿದೆ.
ಅದುವರೆಗೆ ಕವನ ಎಂದರೆ ದೂರ ಓಡುತ್ತಿದ್ದವನು ನಾನು. ಬ್ಲಾಗ್‌ನಲ್ಲಿ ಇತರರ ಕವನಗಳನ್ನು ಓದತೊಡಗಿದಾಗಲೇ ನಾನೂ ಯಾಕೆ ಪ್ರಯತ್ನ ಮಾಡಬಾರದು ಎಂದು ಒಂದೆರಡು ಸಾಲು ಗೀಚಲಾರಂಭಿಸಿದೆ. ಅದೆಂತಹ ಕಳಪೆಯಾಗಿದ್ದರೂ ಬ್ಲಾಗ್ ಗೆಳೆಯರು ಎಲ್ಲೂ ನನ್ನನ್ನು ಮಾತಿನಿಂದ ಚುಚ್ಚದೆ ಪ್ರೋತ್ಸಾಹಿಸಿದ್ದು ಮರೆಯಲಾರೆ. ಕೆಲವೊಮ್ಮೆ ಉದಾಸೀನವಾದಾಗ ಯಾಕೆ ಅಪ್‌ಡೇಟಾಗಿಲ್ಲ ಎಂದು ಜವಾಬ್ದಾರಿ ನೆನಪಿಸಿಕೊಟ್ಟಿದ್ದಕ್ಕೆ ಥ್ಯಾಂಕ್ಸ್.
ಮಂಜುಮುಸುಕಿದ ದಾರಿಯಲ್ಲಿ ಮುಂದೆ ಸಾಗುತ್ತ, ಸಾಗುತ್ತಾ ಹಿಂದಿರುಗಿ ನೋಡಿದರೆ ನನಗೇ ಅಚ್ಚರಿಯಾಗುತ್ತದೆ. ಕೆಲವಾದರೂ ಸ್ಮರಣೀಯವೆನಿಸುವ ಸಾಲುಗಳು, ಬರಹಗಳು ನನ್ನಿಂದ ಸೃಷ್ಟಿಯಾಗಿವೆ. ಇವೆಲ್ಲ ನಾನೇ ಬರೆದೆನೇ ಎಂಬ ಅಚ್ಚರಿ ಮಿಶ್ರಿತ ಖುಷಿ ಸಿಕ್ಕುತ್ತದೆ. ಬಹುಷಃ ಯಾವುದೇ ಮ್ಯಾಗಝಿನ್, ಪುಸ್ತಕ, ವಾರ್ತಾಪತ್ರಿಕೆ ನೀಡದಷ್ಟು ಅವಕಾಶ, ಫೀಡ್‌ಬ್ಯಾಕ್ ಬ್ಲಾಗ್‌ನಲ್ಲಿ ಸಿಕ್ಕಿದೆ.

ದಾರಿಯುದ್ದಕ್ಕೂ ನವಿರು
ಭಾವನೆಗಳ
ಮೆರವಣಿಗೆ
ಚೇತೋಹಾರಿ ಕ್ಷಣಗಳ
ನರ್ತನ,
ದಾರಿಹೋಕರ
ಚೆಲವು ನಗುವಿನ ತೋರಣ
ಸವಿಯುತ್ತಾ
ಮಂಜುಮುಸುಕಿದ ದಾರಿಯಲ್ಲಿ
ಇನ್ನಷ್ಟು ಹೆಜ್ಜೆ ಇರಿಸುವಾಸೆ..

ನಿಮ್ಮೆಲ್ಲರ ಪ್ರೋತ್ಸಾಹಕ್ಕೆ, ಪ್ರೀತಿಗೆ ಒಂದು ಸಲಾಂ....

19 comments:

Unknown said...

ವೇಣು ಸಾರ್,
ನಿಮ್ಮ ಮಂಜುಮುಸುಕಿದ ದಾರಿಯಲ್ಲಿ ನಡೆಯುವಾಗಿನ ಖುಷಿ ವರ್ಣಿಸ ಅಸದಳ .. ನನ್ನ ಆತ್ಯಾಪ್ತ ಬರಹಗಳ ಬ್ಲಾಗ್ ನಲ್ಲಿ ನಿಮ್ಮ ಬ್ಲಾಗ್ ಇದೆ ಸರ್ . ನಿಮ್ಮ ಮೂರು ವರ್ಷದ ಎಂಬ ಮೈಲಿಗಲ್ಲು ೧೦೦ ,೧೦೦೦ ವಾಗಲಿ ಎ೦ದು ಮನ ತು೦ಬಿ ಹಾರೈಸುತ್ತೇನೆ .
ಧನ್ಯವಾದಗಳು

Sushrutha Dodderi said...

ಶುಭಾಶಯ.. ಕಂಟಿನ್ಯೂ ಮಾಡಿ..

ರಾಜೇಶ್ ನಾಯ್ಕ said...

ಬರೆಯುತ್ತಾ ಇರಿ. ಶುಭಾಶಯಗಳು. ನೀವು ’ಸೋಮಾರಿ’ ಎಂದು ಇವತ್ತು ಗೊತ್ತಾಯಿತು!

shivu.k said...

ವೇಣು ವಿನೋದ್,

ಶುಭಾಶಯಗಳು....ಮುಂದಿನ ವರ್ಷಕ್ಕೆ ಮತ್ತಷ್ಟು ಒಳ್ಳೆಯ ಪ್ರಯತ್ನವಾಗಲಿ...

ತೇಜಸ್ವಿನಿ ಹೆಗಡೆ said...

ವೇಣು,

ಮಂಜು ಮುಸುಕಿದ ಹಾದಿಯು ಎಂದೂ ಹೀಗೇ ಮುಂದುವರಿಯುತ್ತಿರಲಿ ಎಂದೇ ಹಾರೈಸುವೆ.

KRISHNA said...

congratulations... really ur kavanas are amazing. thanks to blogs...

Ittigecement said...

ವೇಣು...

ಅಭಿನಂದನೆಗಳು...
ನಿಮ್ಮ ಬ್ಲಾಗಿನ ವೈವಿಧ್ಯತೆ ಕಂಡು ಖುಷಿಯಾಗುತ್ತದೆ...

ನಿಮ್ಮ ಕವಿತೆ ತುಂಬಾ ಚೆನ್ನಾಗಿದೆ...

ಮೂರು ವರ್ಷ ತುಂಬಿದ್ದಕ್ಕೆ ಶುಭಾಶಯಗಳು...

sudheer kumar said...

shubhashayagalu venu.bareyutha iri.

sunaath said...

ವೇಣು,
ಹುಟ್ಟುಹಬ್ಬದ ಶುಭಾಶಯಗಳು. ನಿಮ್ಮದು ಮಂಜು ಮುಸುಕಿದ ಹಾದಿ ಎಂದು ನೀವು ಹೇಳುತ್ತೀರಿ. ಆದರೆ ನನಗೇನೊ ಇದು ‘ವಸಂತಪಥ’ದಂತೆ ತೋರುತ್ತದೆ!

ವಿ.ರಾ.ಹೆ. said...

Venu,

ಶುಭಾಶಯಗಳು.
Happy blogging...

ಮಿಥುನ ಕೊಡೆತ್ತೂರು said...

ಬರೀರಿ ಬರೀರಿ
ಪತ್ರಕರ್ತನಾದರೆ ಆತನಲ್ಲಿನ ಕಥೆ, ಕವನಗಳು ಒತ್ತಡದಿಂದಾಗಿ ಕಳೆದು ಹೋಗುತ್ತವೆ ಅಂತ ಮಾತಿದೆ. ನೀವು ಹಾಗೆ ಕಳೆದು ಹೋಗದಂತೆ ಮಂಜು...ನೋಡಿಕೊಂಡಿದೆ.
ಸುಬ್ಬವಾಗಲಿ ಅಲ್ಲ, ಶುಭವಾಗಲಿ!

ಸಾಗರದಾಚೆಯ ಇಂಚರ said...

ವೇಣು
ನಿಮ್ಮ ಬರಹ ಹೀಗೆಯೇ ಮುಂದುವರಿಯುತ್ತಿರಲಿ ಎಂಬ ಹಾರೈಕೆ ನನ್ನದು, ಸುಂದರ ನಿರೂಪಣೆ ನಿಮ್ಮ ಬರಹದ ವೈಶಿಷ್ಟ್ಯ

ಧರಿತ್ರಿ said...

ಅಭಿನಂದನೆಗಳು ವೇಣು ಸರ್...
ಇನ್ನಷ್ಟು ಬರಹಗಳು ಬರಲಿ
-ಧರಿತ್ರಿ

mouna said...

venu,
shubhashayagaLu, neevu kavangaLannu bareyalu blogging nimage initiation koTTidre, oLLede, innashtu barli antha bayasthini.
hardhika shabhashayagaLu! :)

Shiv said...

ವೇಣು,

ಅಭಿನಂದನೆಗಳು !
ಹೀಗೆ ಸಾಗಲಿ ಪಯಣ..

- ಪಾತರಗಿತ್ತಿ

VENU VINOD said...

ಎಲ್ಲ ಸಹೃದಯ ಮಿತ್ರರಿಗೂ ಪ್ರೋತ್ಸಾಹಕ್ಕಾಗಿ ವಂದನೆ

Srik said...

Venu,

Hearty congratulations. And I hope this journey continues and reach many more such milestones.

All the best,
Srik

VENU VINOD said...

@SRIKANTH,
THANK YOU FRIEND....

Shyama Soorya said...

all the very best - shyama

Related Posts Plugin for WordPress, Blogger...