ಎಲೆಯೊಂದು,
ಮರದಿಂದ ಕಳಚಿಕೊಂಡು
ಸ್ವತಂತ್ರವಾಗಲು
ಆಲೋಚಿಸುತ್ತ...
ಒಂದು ನಿರ್ಧಾರಕ್ಕೆ ಬರುವಾಗ
ಹಣ್ಣಾಗಿತ್ತು !
----------
ಮೊದಲ ಮುತ್ತಿನ
ಮತ್ತಿನಲ್ಲೇ ಮುಳುಗಿ
ರಾತ್ರಿ ಕಳೆದ
ಹುಡುಗನಿಗೆ ಮಾರನೇ
ಹಗಲು ಸುದೀರ್ಘ
ಅನ್ನಿಸಿತು!
------------
ಚಳಿ ಎಂದರೇನು?
ಬಚ್ಚಲಿನ ಒಲೆಯ
ಮಗ್ಗುಲಲ್ಲಿ
ಮುದುಡಿ ಮಲಗಿದ
ನಾಯಿಮರಿಯ ಕೇಳಲೇನು?
------------
ಬಾಗಿದಕತ್ತು,
ಕೆನ್ನೆಮೇಲೆ
ಮೂಡಿದ ನತ್ತಿನ
ಒತ್ತು,
ಮೊದಲ ಮುತ್ತಿನ
ಗಮ್ಮತ್ತು!
11 comments:
ತು೦ಬಾನೇ ಚೆನ್ನಾಗಿತ್ತು... ಮೊದಲಿನದು ತು೦ಬಾ ಇಷ್ಟ ಆಯಿತು....
ಮೊದಲ ಮತ್ತು ಮೂರನೆಯ ಕುರುಕಲು ತುಂಬಾ ಚೆನ್ನಾಗಿದೆ.
ವೇಣು,
ಕಾಫಿ ಕುಡಿಯುತ್ತಾ ನಿಮ್ಮ ಕುರುಕಲು ಓದಿದೆ. ಸಕ್ಕತ್ ಕಾಂಬಿನೇಷನ್ ಅನ್ನಿಸಿತು..ಅದರಲ್ಲೂ
ಚಳಿ ಎಂದರೇನು?
ಬಚ್ಚಲಿನ ಒಲೆಯ
ಮಗ್ಗುಲಲ್ಲಿ
ಮುದುಡಿ ಮಲಗಿದ
ನಾಯಿಮರಿಯ ಕೇಳಲೇನು?
ಇದಂತೂ ತುಂಬಾ ಚೆನ್ನಾಗಿದೆ...
ನವಿರುಸಾಲು..! :-)
ವೇಣು...
ಎಲ್ಲ ಸಾಲುಗಳೂ ಸೂಪರ್...!
ಒಣ ಎಲೆಯ ಫೋಟೊ ಕೂಡ...!
ಅಭಿನಂದನೆಗಳು...
ಚೆನ್ನಾಗಿವೆ... ಇಷ್ಟ ಆಯ್ತು.. :)
ಆಹಾ.. ತುಂಬಾ ಚೆನ್ನಾಗಿವೆ ಕುರುಕಲುಗಳು...
ಮೊದಲನೆಯದು ಮತ್ತು ಮೂರನೆಯದಂತೂ ಅದ್ಭುತ... :)
ಧನ್ಯವಾದಗಳು....
ಸಾಲುಗಳು ಅರ್ಥಗರ್ಭಿತ,ಚನ್ನಾಗಿದೆ.
ವೇಣು ವಿನೋದ್...
`ಚಳಿ ಎಂದರೇನು?
ಬಚ್ಚಲಿನ ಒಲೆಯ
ಮಗ್ಗುಲಲ್ಲಿ
ಮುದುಡಿ ಮಲಗಿದ
ನಾಯಿಮರಿಯ ಕೇಳಲೇನು?'
ಈ ಸಾಲುಗಳಿನ್ನಷ್ಟು ಇಷ್ಟವಾದವು. ಬರೆಯುತ್ತಿರಿ.
ಸುಧೇಶ್, ತೇಜಸ್ವಿನಿಯವರಿಗೆ ವಂದನೆ.
ಶಿವು, ನೀವು ಕಾಫಿ ಜತೆ ಎಂಜಾಯ್ ಮಾಡಿದ್ದೀರಾ...ಥ್ಯಾಂಕ್ಸ್...
ಪೂರ್ಣಿಮಾ, ನನ್ನ ಬ್ಲಾಗ್ಗೆ ಸ್ವಾಗತ...ಬರ‍್ತಾ ಇರಿ.
ಪ್ರಕಾಶ್, ಸಾಲು, ಫೋಟೋ ಬಗ್ಗೆ ಮೆಚ್ಚುಗೆ ಮಾತಾಡಿದ್ದೀರಿ...ವಂದನೆ.
ಅನಂತ, ದಿಲೀಪ್,ಜಗದೀಶ್,ಗೌತಮ್ ನನ್ನ ಬ್ಲಾಗ್ಗೆ ಸ್ವಾಗತ..ಮೆಚ್ಚಿಕೊಂಡಿದ್ದಕ್ಕೆ ವಂದನೆ.
ಶಾಂತಲಾ, ಅವೇ ಸಾಲುಗಳು ನನಗೂ ಫೇವರಿಟ್ :)
ಚೆನ್ನಾಗಿದೆ :)
ಮೊದಲನೇ ಪ್ಯಾರಾ ಬದುಕಿಗೆ ಹಿಡಿದ ಕನ್ನಡಿಯಂತಿದೆ. ಬಹಳಷ್ಟು ಜನರೂ ಹೀಗೇ ಅಲ್ವಾ, ಏನೇ ಮಾಡ್ಬೇಕಾದ್ರೂ, ಯೋಚ್ನೆ ಮಾಡೀ ಮಾಡೀ, ಕೊನೆಗೆ ಮಾಡೋ ಮನಸ್ಸು ಬಂದಾಗ, ಸಮಯ ಮೀರಿರುತ್ತೆ.
Post a Comment