ಅವಳು ನನ್ನನ್ನು
ಬಿಟ್ಟಿರಲಾರದಷ್ಟು ಪ್ರೀತಿಸಿದೆವು
ಮಾವು ಚಿಗುರಲಿಲ್ಲ,
ಕೋಗಿಲೆ ಹಾಡಲಿಲ್ಲ

ಪ್ರೀತಿಯ ಬೆಂಕಿಯಲ್ಲಿ
ಚಿಂತೆಗಳು ಚಿತೆಯಾದವು
ಒಲವಿನ ಗುಸುಗುಸು
ಮಾತುಕತೆಯಾಗಿ
ಅರಳಿಕೊಂಡವು
ಹಚ್ಚಡತುಂಬ ಹರಡಿಬಿದ್ದವು
ಪಾರಿಜಾತದಂತೆ
ಇಬ್ಬನಿಯಾಗಿ ಕಂಡಿದ್ದು
ಸಾಗರವಾಗಿ ಭೋರ್ಗರೆಯಿತು
ನಾವು ಅದರ ಅಲೆಗಳಲ್ಲಿ
ತೇಲಿ ಹೋದೆವು
ಪ್ರೀತಿ ಪ್ರೀತಿಯಲ್ಲಿ
ಸೇರಿಕೊಂಡಿತು
pic courtesy: tandi venter
6 comments:
ಹೊಸವರುಷದ ಶುಭಾಶಯಗಳು
ವೇಣು,
ಪ್ರೀತಿಯ ಬಗೆಗೆ ಇದು ಸುಂದರವಾದ ಕವನ. ಈ ಭಾವನೆ ಕೊನವರೆಗೆ ಉಳಿದರೆ ಅದು ಸುಂದರ ದಾಂಪತ್ಯವಾದೀತು.
ವೇಣುರವರೆ,
ವಸಂತ ಗಾನ ಚೆನ್ನಾಗಿದೆ.
ವೇಣುರವರೆ,
ವಸಂತ ಗಾನ ಚೆನ್ನಾಗಿದೆ.
hmmmmm
Chennagide!
Super one!!
Post a Comment