17.4.10

ಬಿಸಿಲಿನ ಹನಿಗಳು

ಕಾದ ನೆಲದ ಮೇಲೆ
ಬಿದ್ದ ಎರಡು ಕಣ್ಣೀರ
ಹನಿಗಳು
ನನ್ನ ಹೃದಯದ
ನೋವನ್ನು ನಿನಗೆ ತಿಳಿಸಲಾಗದೆ
ಮರೆಯಾದವು

*******

ಬಿಸಿಲು ಬಿಸಿಲೆಂದು
ಬೈಯಲೇಬೇಕಿಲ್ಲ
ನೆರಳನ್ನು ಪ್ರೀತಿಸುವುದಕ್ಕೆ
ಕಾರಣ ಬಿಸಿಲು
ಬಯಲಿನ
ಮರದ ಚೆಲುವು ಹೆಚ್ಚಿಸಿದ್ದು
ಅದುವೇ..
ನೀನಿಲ್ಲದ ಇರುಳಿನ
ತಾಪಕ್ಕೆ ನನ್ನ ಬೇಗೆ ಏನೇನಲ್ಲ
ಎಂದು ಸಾರಿದ್ದೂ ಬಿಸಿಲೇ !

******

ಬಿಸಿಲಿಗಿಂತ
ನೆರಳೇ ಲೇಸೆಂದು
ಬಂಡೆಯ ಮರೆಗೆ
ಸರಿದ ಕಪ್ಪೆಯನ್ನು
ಬಲುಹಸಿದ ಹದ್ದು
ಕೊಂಡೊಯ್ದಿತು !


ಚಿತ್ರಕೃಪೆ:
www.flickr.com/photos/hirotokyo/4080312692/

5 comments:

shivu.k said...

ವೇಣು ವಿನೋದ್,

ಬಿಸಿಲ ಹನಿಗಳ ಬಗ್ಗೆ ಕವನಗಳು ತುಂಬಾ ಚೆನ್ನಾಗಿವೆ. ಅವುಗಳಿಗೆ ಒಂದು ಬೆಲೆಯಿದೆ ಅಂತ ಬರೆದಿದ್ದೀರಿ...
ಮತ್ತೆ ಸಖಿ ವಾರ ಪತ್ರಿಕೆಯಲ್ಲಿ ನಿಮ್ಮ ಕುದುರೆ ಮುಖ ಚಾರಣ ಪ್ರವಾಸ ಲೇಖನವನ್ನು ಓದಿದೆ ತುಂಬಾ ಚೆನ್ನಾಗಿದೆ..

ಗೌತಮ್ ಹೆಗಡೆ said...

venu sir nice:)

ದಿನಕರ ಮೊಗೇರ said...

bisila hanigalu tumbaa chennaagive sir......

ಉಷೈ said...

tumbaa chennagide..arthapoorna padagalu..


-uShai.

ಸಾಗರದಾಚೆಯ ಇಂಚರ said...

ವೇಣು
ಬಿಸಿಲ ಹನಿಗಳ ಕವನ ಸೂಪರ್
ತುಂಬಾ ಚೆನ್ನಾಗಿ ಬರೆದಿದ್ದಿರಾ

Related Posts Plugin for WordPress, Blogger...